‘ಖರ್ಗೆ ಪುತ್ರಿಗೆ ಮೆಡಿಕಲ್ ಸೀಟು ನೀಡಿದ್ದು ಅನ್ಯಾಯ’
‘ಖರ್ಗೆ ಪುತ್ರಿಗೆ ಮೆಡಿಕಲ್ ಸೀಟು ನೀಡಿದ್ದು ಅನ್ಯಾಯ’
ಹೈಕೋರ್ಟ್‌ನಲ್ಲಿ ವೈದ್ಯರಿಬ್ಬರಿಂದ ಆಯ್ಕೆ ಪ್ರಶ್ನಿಸಿ ಅರ್ಜಿ, ಪ್ರತಿವಾದಿಗಳಿಗೆ ನೋಟಿಸ್
ಖರ್ಗೆ ಅವರ ಪುತ್ರಿ ಡಾ.ಜಯಶ್ರೀ ಖರ್ಗೆ ಅವರಿಗೆ ನಗರದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ, ಡಿಎಂ(ಸೂಪರ್ ಸ್ಪೆಷಲಿಟಿ) ಕೋರ್ಸ್‌ಗೆ ಪ್ರವೇಶ ನೀಡಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಪ್ರವೇಶ ವಿರೋಧಿಸಿ ವೈದ್ಯರಾದ ಡಾ.ಎ.ಅರವಿಂದ್ ಮತ್ತು ಡಾ.ಎಂ. ದಿವ್ಯಪ್ರಕಾಶ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸ್ವೀಕರಿಸಿದ್ದು, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ರ್ಯಾಂಕ್ ಪಟ್ಟಿಯಲ್ಲಿ ಜಯಶ್ರೀ ಕೆಳಗಿದ್ದಾರೆ. ಅಲ್ಲದೇ ಅರ್ಹತೆಯ ಸೇವಾವಧಿಯೂ ಅವರಿಗಿಲ್ಲ. ಆದರೆ ಅವರಿಗೆ ಪ್ರವೇಶ ನೀಡುವ ಮೂಲಕ ಅನ್ಯಾಯವೆಸಗಲಾಗಿದೆ ಎಂದು ದೂರಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications