ಚಿಕುನ್‌ ಗುನ್ಯಾದಿಂದ ಬೇಸತ್ತ ಬಾಲಕಿ ಆತ್ಮಹತ್ಯೆ

ಚಿಕುನ್‌ ಗುನ್ಯಾದಿಂದ ಬೇಸತ್ತ ಬಾಲಕಿ ಆತ್ಮಹತ್ಯೆ
ಹೆತ್ತವರಿಗೆ ಹೊರೆಯಾಗುವೆನೆಂದು ಭಾವಿಸಿದ ನೂರ್‌ಜಹಾನ್‌ ನೇಣಿಗೆ ಶರಣಾದಳು!

ಚೆನ್ನೈ : ಚಿಕುನ್‌ ಗುನ್ಯಾ ಬಾಧೆಯಿಂದ ಬೇಸತ್ತ ಹದಿನಾಲ್ಕು ವರ್ಷದ ಬಾಲಕಿಯಾಬ್ಬಳು, ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ(ಆ.2) ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಾಲಕಿಯನ್ನು ನೂರ್‌ಜಹಾನ್‌ ಎಂದು ಗುರ್ತಿಸಲಾಗಿದೆ. ಉತ್ತರ ಚೆನ್ನೈ ಸಮೀಪದ ಕೋರ್ಕ್‌ ಪೇಟೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಈಕೆ, ಕಳೆದ ಕೆಲವು ದಿನಗಳಿಂದ ಚಿಕುನ್‌ ಗುನ್ಯಾದಿಂದ ಬಳಲುತ್ತಿದ್ದಳು. ಚಿಕಿತ್ಸೆಗೆ ಹಣ ಹೊಂದಿಸಲು ಪೋಷಕರಿಗೆ ಕಷ್ಟವಾಗಬಹುದೆಂದು ನಿರ್ಧರಿಸಿದ ಆಕೆ ನೇಣಿಗೆ ಶರಣಾದಳು ಎನ್ನಲಾಗಿದೆ.

ಚಿಕುನ್‌ ಗುನ್ಯಾರೋಗ ದಿನೇದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಭೀತಿಗೊಳಗಾಗಿದ್ದಾರೆ. ರೋಗ ಪೀಡಿತರ ನರಳಾಟ ಹೇಳತೀರದು.

(ಯುಎನ್‌ಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+