‘ಗರುಡಮಾಲ್’ ಮುಟ್ಟುಗೋಲಿಗೆ ಬಿಜೆಪಿ ಒತ್ತಾಯ
‘ಗರುಡಮಾಲ್’ ಮುಟ್ಟುಗೋಲಿಗೆ ಬಿಜೆಪಿ ಒತ್ತಾಯ
ಅಕ್ರಮ ಕಟ್ಟಡಗಳ ತೆರವಿಗೆ ಪಾಲಿಕೆ ಮುಂದಾಗಲಿ -ಎ.ಎಚ್.ಬಸವರಾಜು
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮುಂಬೈ ಮೂಲದ ಮೆವರಿಕ್ ಕಂಪನಿ ಮೂಲಕ ಅಕ್ರಮ ನಡೆದಿದೆ. ಶೇ.80ರಷ್ಟು ನಿಯಮಗಳನ್ನು ಉಲ್ಲಂಘಿಸಿ ಗರುಡಮಾಲ್ ನಿರ್ಮಾಣ ಮಾಡಲಾಗಿದೆ. ಇದು ನಗರದ ಹೃದಯ ಭಾಗದಲ್ಲಿನ ಪಾಲಿಕೆ ಆಸ್ತಿ ನುಂಗುವ ಹುನ್ನಾರ. ಈ ಬಗ್ಗೆ ನ್ಯಾಯಾಂಗ ತನಿಖೆ ಅತ್ಯಗತ್ಯ ಎಂದರು.
ನಗರದಲ್ಲಿ ಪಾಲಿಕೆ ಆಸ್ತಿಗಳನ್ನು ಗುರ್ತಿಸುವ ನಾಮಫಲಕಗಳಿಲ್ಲ. ಹೀಗಾಗಿ ಅಕ್ರಮ ಒತ್ತುವರಿ ಸುಲಭವಾಗುತ್ತಿದೆ. ಪಾಲಿಕೆಯ ಲೆಕ್ಕಪತ್ರ ವ್ಯವಸ್ಥೆಯೂ ಸರಿಯಾಗಿಲ್ಲ ಎಂದು ಬಸವರಾಜ್ ದೂರಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications