ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛಾಪಾಕಾಗದ ಹಗರಣ: ಬಿಜೆಪಿಯಿಂದ ಪ್ರತಿಭಟನೆಯ ಧಮಕಿ

By Staff
|
Google Oneindia Kannada News

ಛಾಪಾಕಾಗದ ಹಗರಣ: ಬಿಜೆಪಿಯಿಂದ ಪ್ರತಿಭಟನೆಯ ಧಮಕಿ
ವಾರದೊಳಗೆ ಸಿಬಿಐ ತನಿಖೆಗೆ ಒಪ್ಪಿಸಿ, ಇಲ್ಲವೇ ಪ್ರತಿರೋಧ ಎದುರಿಸಿ- ಯಡಿಯೂರಪ್ಪ

ಬೆಂಗಳೂರು : ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಕರೀಂ ಲಾಲ ತೆಲಗಿಯನ್ನು ನಗರ ಕೇಂದ್ರ ಕಾರಾಗೃಹದಿಂದ ಆಚೀಚೆ ಓಡಾಡದಂತೆ ನಿಷೇಧಿಸಿ ಹೇರಿರುವ ಅಪರಾಧಿ ದಂಡ ಸಂಹಿತೆಯ 268ನೇ ವಿಧಿಯನ್ನು ಸರ್ಕಾರ ವಾಪಸ್ಸು ಪಡೆಯಬೇಕು ಎಂದು ರಾಜ್ಯ ಬಿಜೆಪಿ ಪ್ರಚಾರ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ತೆಲಗಿಯ ಜಾಲ ದೇಶದ ಅನೇಕ ರಾಜ್ಯಗಳಲ್ಲಿ ಹರಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡಕ್ಕೆ ದಿನೇದಿನೇ ಹೊಸ ಹೊಸ ತಿರುವುಗಳು ಸಿಗುತ್ತಿವೆ. ವಿಚಾರಣೆಗಾಗಿ ತಮ್ಮ ವಶಕ್ಕೆ ತೆಗೆದುಕೊಂಡು, ವಿವಿಧ ರಾಜ್ಯಗಳಿಗೆ ಕರೀಂನನ್ನು ಕರೆದೊಯ್ಯುವ ಅವಕಾಶ ಈಗ ತನಿಖಾ ತಂಡಕ್ಕೆ ತಪ್ಪಿಹೋಗಿದೆ. ಇಂಥಾ ಗಂಭೀರ ಹಗರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ಸರ್ಕಾರ ಆರೋಪಿಯನ್ನು ಕಾಪಾಡಲು ಯತ್ನಿಸುತ್ತಿದೆ. ಸಾಲದ್ದಕ್ಕೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಸಚಿವೆಯಾಬ್ಬರ ಗಂಡನ ಹೆಸರನ್ನು ಬಯಲುಗೊಳಿಸುತ್ತಿಲ್ಲ. ಪ್ರಕರಣದ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವುದೂ ತಡವಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವೆಯ ಗಂಡನ ಹೆಸರನ್ನು ಮೊದಲು ಬಹಿರಂಗ ಪಡಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಒಂದು ವೇಳೆ ಇನ್ನೊಂದು ವಾರದೊಳಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸದಿದ್ದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X