ಜಮಾನಾ ಕಾರುಗಳ ದೀವಾನಾ
ಕಾರು ಮೆರವಣಿಗೆಯ ಮಂಚೂಣಿಯಲ್ಲಿ ಸನ್‌ಬೀಮ್ ಕಾರು (1918)
ಆ ಗುಂಗಿನೊಳಗೆ ನಿಮ್ಮ ಗತಕಾಲದ ನೆನಪುಗಳನ್ನು ಕೆದಕುವ ವಿಂಟೇಜ್ ಕಾರ್ ರ್ಯಾಲಿ ಆರಂಭವಾಗುವುದು ವಿಂಡ್ಸರ್ ಮ್ಯಾನರ್ ಹೋಟಲ್ ಆವರಣದಿಂದ. ಸುಮಾರು 100 ಕಾರುಗಳು, 25 ಮೋಟಾರ್ ಸೈಕಲ್‌ಗಳು ಒಟ್ಟು ಸೇರುತ್ತವೆ. ಈ ಆದಿಕಾಲದ ವಾಹನಗಳ ಚಾಲಕರು ಹಿಂದಿನ ಕಾಲದ ಪೋಷಾಕುಗಳನ್ನು ಧರಿಸಿ ಆ ಕಾರಿನ ಹಿರಿತನಕ್ಕೊಂದು ಕಳೆ ಒದಗಿಸುತ್ತಾರೆ. ಸುಮಾರು 1925ರ ಸುಮಾರಿನ ಸರಕಾರದ ವಶದಲ್ಲಿರುವ ಡೆನ್ನಿಸ್ ಫೈರ್ ಇಂಜಿನ್ ಕಾರುಗಳು, 1947ರ ಹೊತ್ತಿಗೆ ಈ ರಸ್ತೆಗಳ ಅಕ್ಕ ಪಕ್ಕದ ಕಾಡಿನಲ್ಲಿರುವ ಹಕ್ಕಿಗಳನ್ನು ಬೆದರಿಸಿ, ಬೀಗುತ್ತಾ ನಡೆದ ಡಿಬಿ 27 ಡಾೖಮ್ಲರ್ ಕಾರುಗಳ ಇಂಜಿನ್‌ಗಳು ಭಾನುವಾರದ ಮೆರವಣಿಗೆಯಲ್ಲಿ ಗರ್ಜಿಸಲಿವೆ. ರ್ಯಾಲಿಯಲ್ಲಿ ಭಾಗವಹಿಸಲಿರುವ ಕಾರುಗಳಲ್ಲಿ ಅತೀ ಹಳೆಯ ಅಂದರೆ 1918ರ ಸನ್ ಬೀಮ್‌ಕಾರ್ ಕಾರ್‌ಗಳ ಪಿತಾಮಹ ಎನಿಸಿಕೊಳ್ಳಲಿದೆ.
ಕಾರ್ಯಕ್ರಮ : ಕಾರುಗಳ ಓಟಕ್ಕೆ ಬೆಳಿಗ್ಗೆ ಹತ್ತು ಗಂಟೆಗೆ ಹಸಿರು ನಿಶಾನೆ ತೋರಿಸಲಿರುವವರು ಪೊಲೀಸ್ ಕಮಿಷನರ್ ಟಿ. ಮಡಿಯಾಳ್. ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಕೆ. ಜೈರಾಜ್, ಬಿಡಿಎ ಆಯುಕ್ತ ಜೈಕರ್ ಜರೋಮ್ ಓಡುವ ಕಾರುಗಳ ಸಂಭ್ರಮವನ್ನು ವೀಕ್ಷಿಸಲಿದ್ದಾರೆ. ಅದೆಲ್ಲಾ ಸರಿ, ಈ ಪ್ರಾಚೀನ ಕಾರುಗಳು ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸಿ ಸ್ವಸ್ಥವಾಗಿರುತ್ತೆ ಎಂದೇನು ಗ್ಯಾರಂಟಿ ಎನ್ನುತ್ತೀರಾ... ರ್ಯಾಲಿ ಸಾಗುವುದು ಎಂ. ಜಿ. ರೋಡು, ಕಬ್ಬನ್ ಪಾರ್ಕ್ ರಸ್ತೆ, ಇಂದಿರಾನಗರಗಳ ಮೂಲಕ. ಮತ್ತೆ ಸೇರುವುದು ವೈಟ್ ಫೀಲ್ಡಿನಲ್ಲಿ.
ವಿಂಡ್ಸರ್ ಮ್ಯಾನರ್ ಶೆರ್‌ಟನ್, ಕೊಡ್ಹೈ ಮತ್ತು ಪೆಪ್ಸಿ ಜಂಟಿಯಾಗಿ ಈ ರ್ಯಾಲಿಯನ್ನು ಪ್ರಾಯೋಜಿಸಿವೆ. ಕಾರ್ಯಕ್ರಮ ಇಂತಿದೆ -
7.30-8.30 ಕಾರುಗಳ ಸಮಾವೇಶ
8.30-9.30 ಪೋಷಾಕುಗಳ ಮತ್ತು ಕಾರುಗಳ ಆಯ್ಕೆ
8.30-9.30 ಭಾಗವಹಿಸುವವರಿಗೆ ಮುಖ್ಯ ಅತಿಥಿಗಳನ್ನು ಪರಿಚಯಿಸುವುದು
10 ಗಂಟೆಗೆ ರ್ಯಾಲಿ ಆರಂಭ
ಮಧ್ಯಾಹ್ನ- ವೈಟ್ ಫೀಲ್ಡಿನಲ್ಲಿ ಸಮಾವೇಶ
( ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...











Click it and Unblock the Notifications