ಜಮಾನಾ ಕಾರುಗಳ ದೀವಾನಾ

Vintage Carಬೆಂಗಳೂರು : ಭಾನುವಾರ ನೀವು ಫ್ರೀ ಇದ್ದೀರಾ ? ಬೆಳ್ಳಂಬೆಳಿಗ್ಗೆ ಶಾಲು ಹೊದ್ದುಕೊಂಡು ಬೆಂಗಳೂರಿನ ವಿಂಡ್ಸರ್‌ ಮ್ಯಾನರ್‌ ಹೋಟೆಲಿನ ಮುಂದೆ ವಾಕಿಂಗ್‌ ಹೋದರೆ ನೀವು ಏಳೆಂಟು ದಶಕಗಳ ಹಿಂದಿನ 70-80 ವರ್ಷ ವಯಸ್ಸಾದ ಸುಂದರಿಯರು ಅಲ್ಲಿ ನಸುನಗುತ್ತಾ ನಿಂತಿರುತ್ತಾರೆ. ನೀವು ನೋಡುನೋಡುತ್ತಿದ್ದಂತೆಯೇ ಅವರೆಲ್ಲ ನಿಮ್ಮ ನೆನಪುಗಳಿಗೆ ಕಚಗುಳಿ ಇಟ್ಟು ಗಂಭೀರವಾಗಿ ಉರುಳುತ್ತಾ ಹಾಗೆ , ಕಣ್ಮರೆಯಾಗಿಬಿಡುತ್ತಾರೆ.

ಕರ್ನಾಟಕ ವಿಂಟೇಜ್‌ ಮತ್ತು ಕ್ಲಾಸಿಕ್‌ ಕಾರ್‌ ಕ್ಲಬ್‌(ಕೆವಿಸಿಸಿಸಿ), ಪ್ರತಿ ವರ್ಷದಂತೆ ಹಳೆಯ ಸೌಂದರ್ಯ ಮತ್ತೆ ಬೆಂಗಳೂರಿಗೆ ಬರಲಿ ಎನ್ನುವ ಘೋಷಣೆಯಾಂದಿಗೆ ‘ವಿಂಡ್ಸರ್‌ ಮ್ಯಾನರ್‌ ವಿಂಟೇಜ್‌ ರ್ಯಾಲಿ -2000’ ಭಾನುವಾರ (29-10-2000) ಆಯೋಜಿಸಿದೆ. 15 ವರ್ಷಗಳಿಗಿಂತ ಹಳೆ ವಾಹನಗಳಿಗೆ ಫಿಟ್‌ನೆಸ್‌ ಸರ್ಟಿಫಿಕೇಟ್‌ ಮಾಡಿಸಬೇಕೆಂದು ಸರಕಾರ ಹೊರಡಿಸಿದ ಆದೇಶ ಜಾರಿಗೆ ಬರುತ್ತಿರುವಾಗಲೇ ದಶಕಗಳ ಹಿಂದಿನ ಕಾರುಗಳು ಬೆಂಗಳೂರು ರಸ್ತೆಯಲ್ಲಿ ರಾಜಗಾಂಭೀರ್ಯದಲ್ಲಿ ಸಾಗಲಿವೆ. ಮೊನ್ನೆಯಷ್ಟೇ ಬಂದಿರುವ ಹೊಸಹೊಸ ಕಾರುಗಳೇ ಮಳೆಯ ಒನಕೆಧಾರೆಗೆ ಶೆಡ್‌ನಿಂದ ಆಚೆಗೆ ಬರಲು ಹಠ ಮಾಡುತ್ತಿರುವಾಗ ಈ ಕಾರುಗಳು ತಾವು ಕ್ರಮಿಸಿದ ರಸ್ತೆಗಳ, ಎದುರು ಹಾಕಿದ ಕಾಡಾನೆ, ಕಾಡೆಮ್ಮೆಗಳ ನೆನಪುಗಳೊಂದಿಗೆ ರಸ್ತೆಗಳಿಯಲಿವೆ. ಆದರೆ ಅವುಗಳ ಕಣ್ಣಿಗೆ ಈಗ ಬೆಳ್ಳನೆ ಹೊಳೆವ ಗಾಜಿನ ಬಿಲ್ಡಿಂಗ್‌ಗಳು....ಕಿರುಚುವ ಬಿಟಿಎಸ್‌ ಬಸ್ಸುಗಳು ಮಾತ್ರ ಕಾಣಸಿಗುತ್ತವೆ.

Vintage carಜಮಾನಾ ಕಾರುಗಳ ದೀವಾನಾ : ಕೆಲವು ಕಾರುಗಳ ನಂಬರ್‌ ಪ್ಲೇಟಿನ ಬಳಿ ಇಂಗ್ಲೆಂಡ್‌ನ ಧ್ವಜ, ಮತ್ತೆ ಕೆಲವು ಕಾರುಗಳ ಮೂಗಿನ ಬಳಿ ಗರುಡ..., ದೊಡ್ಡ ಇಂಜಿನ್‌ಗಳ, ಛಾವಣಿಯಿಲ್ಲದ , ಕುಳ್ಳಗಿರುವ ...ಕಾರುಗಳನ್ನು ನೋಡುವಾಗ ಕಾರಿನ ಮೇಲೆ ರಾಜ ರಾಣಿಯರಿದ್ದರೆ ಇನ್ನಷ್ಟು ಚಂದ ಎನಿಸಿಬಿಡುತ್ತದೆ. ಛಾವಣಿ ಮುಚ್ಚಿರುವ, ಹುಬ್ಬು ಗಂಟಿಕ್ಕಿದ ಜೀಪಿನಂತಿರುವ ಕಾರು, ಎತ್ತಿನ ಗಾಡಿಯ ಚಕ್ರದಂತಿರುವ ಟೈರುಗಳ, ಗ್ಯಾಸ್‌ ಲೈಟನ್ನು ನೆನಪಿಗೆ ತರುವ ಫೋಕಸ್‌ ಲೈಟುಗಳ ಕಾರುಗಳು ... ನಮ್ಮ ಹಿಂದಿನವರು ಇದರ ಮೇಲೆ ಕುಳಿತು ಏನೆಲ್ಲಾ ಸಾಹಸ, ವ್ಯವಹಾರಗಳನ್ನು ಮಾಡಿರಬಹುದಪ್ಪಾ ಎಂಬ ಕಲ್ಪನೆಯಾಳಗೆ ನಿಮ್ಮನ್ನೆಳೆದುಕೊಂಡುಬಿಡುತ್ತದೆ. ಹೆಸರಿಗೆ ಕಾರ್‌ ರ್ಯಾಲಿಯಾದರೂ ಮೋಟಾರ್‌ ಸೈಕಲ್‌ಗಳು, ಉದ್ದ ಮೂತಿಯ ಮಿಲಿಟರಿ ಜೀಪುಗಳು ರ್ಯಾಲಿಯಲ್ಲಿ ಸದ್ದು ಮಾಡಿ ತಮ್ಮ ಘೋಷಣೆ ಕೂಗಲಿವೆ.

ಮುಖಪುಟ / ಇವತ್ತು... ಈ ಹೊತ್ತು...
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+