ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್‌ ಒಂದರಿಂದ ಸಿನೋ-ಇಂಡಿಯನ್‌ ಸಮಾವೇಶ

By Staff
|
Google Oneindia Kannada News

ಮಣಿಪಾಲ್‌: ಇಂಡೋ - ಅಮೆರಿಕನ್‌ ಗೆಳೆತನ ಸಮಾವೇಶವನ್ನು ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದ ಬೆನ್ನ ಹಿಂದೆಯೇ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌(ಎಮ್‌ಎಎಚ್‌ಇ) ಮೂರು ದಿನಗಳ ಸಿನೋ-ಇಂಡೋ ಸಮಾವೇಶವನ್ನು ಹಮ್ಮಿಕೊಂಡಿದೆ.

ಸುದ್ದಿಗಾರರೊಂದಿಗೆ ಶನಿವಾರ ಮಾತನಾಡುತ್ತಿದ್ದ ಮಣಿಪಾಲ್‌ನ ಡೀಮ್ಡ್‌ ವಿಶ್ವವಿದ್ಯಾಲಯದ ಉಪಕುಲಪತಿ ಬಿ. ಎಂ. ಹೆಗ್ಡೆ, ಸಮಾವೇಶ ನವಂಬರ್‌ ಒಂದರಿಂದ ಮೂರರವರೆಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಸಿನೋ-ಇಂಡಿಯನ್‌ ಶಾಂತಿ ಸಭೆಯನ್ನು ಕೇಂದ್ರ ಸಚಿವ ಮರಳಿ ಮನೋಹರ ಜೋಷಿ ಅವರು ಉದ್ಘಾಟಿಸಲಿದ್ದು, ಚೀನಾದ 12 ಬುದ್ದಿಜೀವಿಗಳು ಮತ್ತು ತಜ್ಞರು ಭಾಗವಹಿಸುತ್ತಿದ್ದಾರೆ. 1962ರ ಚೀನಾ-ಭಾರತ ಯುದ್ಧದ ನಂತರ ನಡೆಯುತ್ತಿರುವ ಮೊದಲ ಶಾಂತಿ ಸಮಾವೇಶ ಇದಾಗಿದೆ. ಈ ಸಭೆಯಲ್ಲಿ ಎರಡೂ ದೇಶಗಳ ಸಂಬಂಧ ಬಲಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಸಭೆಯಲ್ಲಿ ಭಾರತದ 21ಮಂದಿಯ ನಿಯೋಗ ಭಾಗವಹಿಸಲಿದೆ.

ದ್ವಿಪಕ್ಷೀಯ ಚರ್ಚಿ : ಸಭೆಯಲ್ಲಿ ಎರಡೂ ದೇಶಗಳ ನಡುವೆ ಆರ್ಥಿಕ ಅಭಿವೃದ್ಧಿ ವಿಸ್ತರಣೆ ಮತ್ತು ಸಮಾನ ಆಸಕ್ತ ವಿಷಯಗಳ ಮೇಲೆ ದ್ವಿಪಕ್ಷೀಯ ಚರ್ಚಿ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆ ಸೇರಿದಂತೆ ವಿವಿಧ ವಿಷಯಗಳು ಚರ್ಚೆಗೆ ಬರಲಿವೆ ಎಂದು ಜಿಯೋಪಾಲಿಟಿಕ್ಸ್‌ ವಿಭಾಗದ ಪ್ರೊ. ಎಂ. ಡಿ. ನಲ್ಪತ್‌ ತಿಳಿಸಿದ್ದಾರೆ.

ಇತ್ತೀಚೆಗೆ ಯಶಸ್ವಿಯಾಗಿ ನಡೆಸಿದ ಇಂಡೋ- ಅಮೆರಿಕನ್‌ ಸಭೆ ಉತ್ತಮ ಫಲಿತಾಂಶ ನೀಡುತ್ತಿದೆ. ಈ ಸಂಬಂಧ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಮೆರಿಕದ ಕೆಲವು ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೆಗ್ಡೆ ತಿಳಿಸಿದ್ದಾರೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X