ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ಸಂಜೆ ರಾಜ್ಯ ಕ್ರೆೃಸ್ತ ಯುವಜನ ಮೇಳ ಆರಂಭ

By Staff
|
Google Oneindia Kannada News

ಮಂಗಳೂರು: ನಗರದ ಬಜ್ಜೋಡಿ ನಂತೂರಿನ ಶಾಂತಿಕಿರಣ್‌ ಸಭಾಂಗಣದಲ್ಲಿ ಇಂದು (ಶನಿವಾರ) ಸಂಜೆ ರಾಜ್ಯ ಕ್ರೆೃಸ್ತ ಯುವಜನ ಮೇಳ ಪ್ರಾರಂಭವಾಗಲಿದೆ.

ರಾಷ್ಟ್ರ ನಿರ್ಮಾಣದತ್ತ ಯುವಜನತೆ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾಗಲಿರುವ ಈ ಮಹಾ ಸಮ್ಮೇಳನವನ್ನು ಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು ಎಂದು ಕ್ಯಾಥೋಲಿಕ್‌ ಯುವ ಸಂಚಲನದ ರಾಜ್ಯ ಘಟಕದ ಅಧ್ಯಕ್ಷ ರೋಷನ್‌ ಕ್ಯಾಸ್ಟಲಿನೊ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಮೊದಲ ಸಮಾರಂಭ ಇದಾಗಿದ್ದು, ಅಕ್ಟೋಬರ್‌ 31ರಂದು ಮ
ಧ್ಯಾಹ್ನ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಹಿಂದೂ ಧರ್ಮದ ಕುರಿತು ಮಂಗಳೂರಿನ ರಾಮಕೃಷ್ಣ ಮಿಷನ್‌ ಸಂಸ್ಥೆಯ ಅನುಪಮಾನಂದ ಸ್ವಾಮೀಜಿ, ಮುಸ್ಲಿಂ ಧರ್ಮ ಕುರಿತು ಶಾಂತಿ ಪ್ರಕಾಶನದ ನಿರ್ದೇಶಕ ಮಹಮ್ಮದ್‌ ಕುಂಞ, ಕ್ರೆೃಸ್ತ ಧರ್ಮ ಕುರಿತು ಬೆಳಗಾವಿ ದೇಶನೂರು ಮಠದ ಸ್ವಾಮಿ ಅಮಲಾನಂದ ಅವರು ಮಾತನಾಡುವರು.

ಸಮಾರೋಪ : ನವೆಂಬರ್‌ 1ರಂದು ಮಧ್ಯಾಹ್ನ ಸಮಾರೋಪ ಸಮಾರಂಭ ನಡೆಯಲಿದೆ. ಮಂಗಳೂರಿನ ಬಿಷಪ್‌ ರೆ. ಡಾ . ಎಲೋಷಿಯಸ್‌ ಪಾಲ್‌ ಅಧ್ಯಕ್ಷತೆ ವಹಿಸುವರು. ಸಮ್ಮೇಳನದಲ್ಲಿ ಕನಿಷ್ಠ 500 ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆರ್ಚ್‌ ಬಿಷಪ್‌ ಅಲ್ಫೋನ್ಸ್‌ ಮಥಾಯಿಸ್‌, ಬಿಷಪ್‌ ಲಾರೆನ್ಸ್‌ ಮಕ್ಕುರಿkು, ಸಂಸದ ವಿನಯ್‌ ಕುಮಾರ್‌ ಸೊರಕೆ, ಶಾಸಕ ಅಭಯಚಂದ್ರ ಜೈನ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಬಿ. ಸದಾನಂದ ಪೂಂಜ, ಮಾಜಿ ಸಚಿವ ಬ್ಲೇಷಿಯಸ್‌ ಡಿಸೋಜಾ, ನಗರಪಾಲಿಕೆ ಕಮೀಷನರ್‌ ಜೆ. ಆರ್‌. ಲೋಭೋ, ಜಿಲ್ಲಾ ಕ್ರೀಡೆ ಮತ್ತು ಯುವಜನ ನಿರ್ದೇಶಕ ಕರುಣಚಂದ್ರ, ಮೇಯರ್‌ ಸುಂದರಿ, ಉಪ ಮೇಯರ್‌ ಬಷೀರ್‌ ಬೈಕಂಪಾಡಿ, ಮಾಜಿ ಮೇಯರ್‌ ಜುಡಿಸ್‌ ಮಷ್ಕರೇನಾಸ್‌ ಪಾಲ್ಗೊಳ್ಳುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈಸ್‌ ವಿಕಾರ್‌ ಜನರಲ್‌ ಮೊ. ಎಡ್ವಿನ್‌ ಪಿಂಟೋ ವಹಿಸುವರು.

(ಇನ್ಫೋ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X