ಆಶ್ರಯ ಯೋಜನೆ : 30 ಸಾವಿರಕ್ಕೇರಿದ ಸಹಾಯ ಧನ
ಬೆಂಗಳೂರು : ಆಶ್ರಯ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಸರಕಾರದ ವತಿಯಿಂದ ನೀಡಲಾಗುತ್ತಿದ್ದ ಸಹಾಯ ಧನವನ್ನು 20 ಸಾವಿರದಿಂದ 30 ಸಾವಿರ ರೂಪಾಯಿಗಳಿಗೇರಿಸಲು ಮುಖ್ಯ ಮಂತ್ರಿ ಎಸ್. ಎಂ. ಕೃಷ್ಣ ಒಪ್ಪಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಶಾಸಕರ ಒತ್ತಾಯಕ್ಕೆ ಮಣಿದ ಮುಖ್ಯ ಮಂತ್ರಿಗಳು ಆಶ್ರಯ ಯೋಜನೆಯಡಿಯಲ್ಲಿ ಪ್ರತಿ ಮನೆಯ ನಿರ್ಮಾಣಕ್ಕೆ ಇನ್ನು ಮುಂದೆ 30 ಸಾವಿರ ರೂಪಾಯಿ ಸಹಾಯಧನ ನೀಡಲು ಒಪ್ಪಿಕೊಂಡರು. ಈಗ ನೀಡುತ್ತಿರುವ 20 ಸಾವಿರ ರೂಪಾಯಿಗಳ ಸಹಾಯಧನ ಈಗಿನ ಧಾರಣೆಯಲ್ಲಿ ಏನಕ್ಕೂ ಸಾಲದಿರುವುದರಿಂದ ಸರಕಾರ ಅದನ್ನು 30 ಸಾವಿರ ರೂಪಾಯಿಗಳಿಗೇರಿಸಬೇಕೆಂದು ಶಾಸಕರು ಮುಖ್ಯ ಮಂತ್ರಿಗಳನ್ನು ಕೋರಿದ್ದರು.
(ಇನ್ಫೋ ವಾರ್ತೆ)












Click it and Unblock the Notifications