ಹಾವು ಕಡಿದು ಇಬ್ಬರು ಯುವಕರ ಬಲಿ
ಹುಬ್ಬಳ್ಳಿ : ಎರಡು ಪ್ರತ್ಯೇಕ ಘಟನೆಗಳಲ್ಲಿ ಹಾವು ಕಡಿದು ಬಲಿಯಾಗಿರುವ ಸುದ್ದಿ ಧಾರವಾಡ ಜಿಲ್ಲೆಯಿಂದ ಬಂದಿದೆ.
ಧಾರವಾಡ ಜಿಲ್ಲೆಯ ಹಿರೇಬೆಂಡಗೇರಿಯ 18ರ ಹರೆಯದ ಚಂಟಯ್ಯ ಹಿರೇಮಠ್ ಹಾಗೂ ಜಿಗಳೂರ್‌ನ 15 ವರ್ಷ ವಯಸ್ಸಿನ ಸಿದ್ದಪ್ಪ ಹಾವು ಕಡಿದು ಮೃತಪಟ್ಟಿದ್ದಾರೆ. ಹಿರೇಮಠ್ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಸಂಸ್ಥೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಹೊಸರಟ್ಟಿ ಹಳ್ಳಿಯ ಸಿದ್ದಪ್ಪ ಕುರಿ ಮಂದೆಯಲ್ಲಿ ಮಲಗಿದ್ದಾಗ ಮೃತಪಟ್ಟಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.












Click it and Unblock the Notifications