ಪಟಾಕಿ ಗೋದಾಮಿನಲ್ಲಿ ಬೆಂಕಿ : ಲಕ್ಷಾಂತರ ರು. ವಸ್ತುಗಳ ಸ್ವಾಹ
ಬೆಂಗಳೂರು :ನಗರದ ಹೊರವಲಯದ ಪ್ರದೇಶದ ಪಟಾಕಿ ಗೋದಾಮಿನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
ಗೋದಾಮಿನಲ್ಲಿ ಮಲಗಿದ್ದ ಐದು ಜನ ಪಟಾಕಿ ಸಿಡಿತದಿಂದ ಎಚ್ಚತ್ತು ಮಳಿಗೆಯಿಂದ ಹೊರಗೆ ಓಡಿ ಜೀವ ಉಳಿಸಿಕೊಂಡಿದ್ದಾರೆ, ಬೆಂಕಿಯ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಾಜಿ ಸಚಿವರ ತಂದೆಗೆ ಪಟಾಕಿ ಸಿಡಿತದಿಂದ ಗಾಯ
ಶುಕ್ರವಾರ ನಗರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಮಾಜಿ ಸಚಿವ ರಾಮ ಲಿಂಗಾರೆಡ್ಡಿ ಅವರ ತಂದೆ ವೆಂಕಣ್ಣ ರೆಡ್ಡಿ (74) ಪಟಾಕಿ ಸಿಡಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಣೆಯಲ್ಲಿ ಇಟ್ಟಿದ್ದ ಪಟಾಕಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು , ಆ ಸಮಯದಲ್ಲಿ ವೆಂಕಣ್ಣ ಅವರು ಮಲಗಿದ್ದರು. ರಾಕೆಟ್ ಪಟಾಕಿಗಳಿಂದ ನಗರದ ಅನೇಕ ತೆಂಗಿನ ಮರಗಳು ಸುಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.
(ಯುಎನ್‌ಐ)












Click it and Unblock the Notifications