ಭಾರತ-ದಲ್ಲಿ ಐಟಿ ಬಂಡವಾಳ : ಈಗ ಬ್ರಿಟ-ನ್- ಸರದಿ
*ಶ್ಯಾಮ್ ಭಾಟಿಯಾ
ಲಂಡನ್ : ಭಾರತದ ಮಾಹಿ-ತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಂಡವಾಳ ಹೂಡುವ ದೃಷ್ಟಿಯಿಂದ ಮುಂದಿನ ವಾರ ಬ್ರಿಟನ್‌ನ ಮಾಹಿತಿ ತಂತ್ರಜ್ಞಾನ ಸಚಿವೆ ಪಾಟ್ರಿಕ್ ಹೆವಿಟ್ ಬೆಂ-ಗ-ಳೂ-ರು ಸೇರಿ-ದಂ-ತೆ ಭಾರತದ ಪ್ರಮುಖ ನಗ-ರ-ಗ-ಳಿ-ಗೆ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 30ರಿಂದ ನವೆಂಬರ್ 4ರ ವರೆಗಿನ ತಮ್ಮ ಭಾರತ ಭೇಟಿಯ ಸಂದರ್ಭದಲ್ಲಿ -ಅ-ವ-ರು, ಬೆಂಗಳೂರು, ಕಲ್ಕತ್ತಾ, ದೆಹಲಿ, ಅಹ್ಮದಾಬಾದ್ ಮತ್ತು ಮುಂಬಯಿ ನಗರಗಳಲ್ಲಿನ ಐಟಿ ಕ್ಷೇತ್ರದ ಉದ್ಯಮ ಪತಿಗಳೊಡನೆ, ಮತ್ತು ಆಯಾ ರಾಜ್ಯಗಳ ಐಟಿ ಸಚಿವರೊಂದಿಗೆ ಚರ್ಚಿಸಲಿದ್ದಾರೆ. ವಿದೇಶ ಯಾತ್ರೆಗೆ ವೀಸಾ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸುವ ಬ್ರಿಟನ್ ಸರಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಪಾಟ್ರಿಕ್‌ರ ಭಾರತ ಯಾತ್ರೆ ಮಹ-ತ್ವ-ದ್ದೆ-ನಿ-ಸಿ-ದೆ.
ಬ್ರಿಟನ್ ಮತ್ತು ಜರ್ಮನಿಗಳೆರಡೂ ಐಟಿ ಕ್ಷೇತ್ರದಲ್ಲಿ ಭಾರತದ ಪ್ರಗತಿಯನ್ನು ಗಮನಿಸಿ, ಅಮೆರಿಕಾದೊಂದಿಗೆ ಸ್ಪರ್ಧೆಗಿಳಿಯುವ ಉದ್ದೇಶದಿಂದ ಭಾರತದ ಐಟಿ ತಜ್ಞರನ್ನು ಆಕರ್ಷಿಸಲು ಶತಾಯ ಗತಾಯ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ತಮ್ಮ ವಿದೇಶೀ ನೀತಿಯಲ್ಲಿ ಸಾಕಷ್ಟು ಬದಲಾವಣೆ ತರುವುದಕ್ಕೂ ಹಿಂದೆ ಮುಂದೆ ನೋಡುತ್ತಿಲ್ಲ.
ಈ ಮೊದ-ಲು ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಹಾವಿಟ್ ಈಗ ಉದ್ಯಮ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಆಕಾಶವಾಣಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ಈಗ ತಮ್ಮ ಭಾರತ ಭೇಟಿಯಿಂದಾಗಿ ಬ್ರಿಟನ್‌ನ್ನು ಐಟಿ ಕ್ಷೇತ್ರದಲ್ಲಿ ಮುಂದೆ ತರುವ ಉದ್ದೇಶ ಹೊತ್ತು ತಮ್ಮ ಭಾರತ ಭೇಟಿಯನ್ನು ಹಮ್ಮಿಕೊಂಡಿದ್ದಾರೆ. (ಐಎಎನ್‌ಎಸ್)












Click it and Unblock the Notifications