ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ಲಕ್ಷ ಮಂದಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ

By Staff
|
Google Oneindia Kannada News

* ವಸಂತ್‌ ಆರೋರ

white house- ariel viewವಾಷಿಂಗ್ಟನ್‌ : ನೀನೆಲ್ಲೋ ...ನಾನೆಲ್ಲೋ ... ! ಅನ್ನ , ಆಹಾರ, ಶಿಕ್ಷಣ, ಉದ್ಯೋಗವನ್ನರಸಿ ತಮ್ಮ ಆಪ್ತರಿಂದ ದೂರವಾದವರಿಗೆ ಅಮೆರಿಕದಿಂದ ಬಂದ ದೀಪಾವಳಿ ಉಡುಗೊರೆ ಇದು....

ಅಮೆರಿಕದ ಕಾಂಗ್ರೆಸ್‌ನ ಮೇಲೆ ಹಿಡಿತ ಹೊಂದಿರುವ ರಿಪಬ್ಲಿಕನ್‌ ಪಕ್ಷ, ಹೊಸ ಮಸೂದೆ ಮಂಡಿಸಲು ಉದ್ದೇಶಿಸಿದೆ. ಈ ಮಸೂದೆಯೇ ನಿಮಗೆ ಆ ಉಡುಗೊರೆ . ಮಸೂದೆ ಪಾಸ್‌ ಆದರೆ ಮುಂದಿನ ಮೂರು ವರ್ಷದೊಳಗೆ ತಮ್ಮ ಹತ್ತಿರದ ಸಂಬಂಧಿಗಳನ್ನು ಕೂಡಿಕೊಳ್ಳಲು 6 ಲಕ್ಷ ವಿದೇಶಿಯರಿಗೆ ಅಮೆರಿಕ ಪ್ರವೇಶ ಸುಲಭ, ಸುಸೂತ್ರವಾಗುತ್ತದೆ.

ರಿಪಬ್ಲಿಕನ್‌ ಪಕ್ಷದ ಸೆನೆಟರ್‌ ಆರಿನ್‌ ಹ್ಯಾಚ್‌ ಅವರ ಸೂಚಿಸಿರುವ ಈ ಮಸೂದೆ ಪ್ರಸ್ತಾವಕ್ಕೆ ಅವರ ಪಕ್ಷದವರೇ ಆದ ಟೆಕ್ಸಾಸ್‌ ಪ್ರಾಂತದ ಸದಸ್ಯರಾದ ಫಿಲ್‌ ಗ್ರಾಮ್‌, ಹೆನ್ರಿ ಬೋನಿಲ್ಲಾ ಮತ್ತು ಸ್ಮಿತ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಸೂದೆಯಿಂದ ಅಮೆರಿಕಕ್ಕೆ ಶೀಘ್ರ ವಲಸೆ ಬರುವವರಿಗೆ ಹೊಸ ಕಾನೂನು ವರದಾನವಾಗುತ್ತದೆ.

ಲೀಗಲ್‌ ಇಮಿಗ್ರೇಷನ್‌ ಫ್ಯಾಮಿಲಿ ಈಕ್ವಿಟಿ (ಎಲ್‌ಆಎಫ್‌ಇ) ಎಂದು ಕರೆಯಲಾಗುವ ಈ ಮಸೂದೆ ಕುಟುಂಬದ ಸದಸ್ಯರು ಮತ್ತು ಗಂಡ-ಹೆಂಡತಿಯರು ಶೀಘ್ರವಾಗಿ ವಲಸೆ ಬರಲು ಕಾನೂನು ಕ್ರಮಗಳನ್ನು ಸುಲಭಗೊಳಿಸುತ್ತದೆ. ಅಮೆರಿಕದ ಪ್ರಜೆ ಹೊರಗಿನವರನ್ನು ಮದುವೆಯಾದರೆ ತನ್ನ ಸಂಗಾತಿ ವೀಸಾಗೆ ಕಾಯುವ ಅವಧಿಯಲ್ಲಿ ಅಮೆರಿಕ ಪ್ರವೇಶಿಸುವ ಅಧಿಕಾರ ಮಸೂದೆಯಿಂದ ಸಿಗಲಿದೆ. ಇದರಿಂದ ಸುಮಾರು 6 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಆರಿನ್‌ ಹ್ಯಾಚ್‌ ತಿಳಿಸಿದ್ದಾರೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X