ನಗೆ ಸಪ್ತಾಹದ ಹೂವು: ಚುಟುಕ ತಂದವರು ಜ್ಯೋತಿ ಮಹಾದೇವ್!

ಚೈತ್ರೋಲ್ಲಾಸ ಸಂಜೆಯ ಆರು ಹಾಸ್ಯ ಕವಿತೆಗಳನ್ನು ದಿನಕ್ಕೊಂದರಂತೆ ನಿಮ್ಮ ಓದಿಗೆ ನೀಡುತ್ತಿದ್ದೇವೆ. ಇಲ್ಲಿದೆ- ಜ್ಯೋತಿ ಮಹಾದೇವ್ ಅವರ -'ನಾಲ್ಕು ಹನಿಗವನಗಳು"
ನಾಲ್ಕು ಹನಿಗವನಗಳು*ಜ್ಯೋತಿ ಮಹಾದೇವ್, ಕ್ಯುಪರ್ಟಿನೋ, ಕ್ಯಾಲಿಫೋರ್ನಿಯಾ
ಶ್ರೀ ಗುರುಭ್ಯೋ ನಮಃ
ನಮ್ಮೀ ಸಹೃದಯ ಮೇಷ್ಟ್ರು, ಭಾಳಾ ಸ್ಟ್ರಿಕ್ಟು,
ಮೊಂಡುತನದ ವಿದ್ಯಾರ್ಥಿಯನ್ನೂ ಹಿಡಿದಿಟ್ಟು-
ಹೋಂ-ವರ್ಕ್ ಮಾಡಿಸುವ ಘಟ್ಟಿತನದ ಗುಟ್ಟು ,
ಶ್ರೀ ಹರಿ-ಗುರು ಅವರೊಬ್ಬರಿಗೇ ಗೊತ್ತು .
ಬೆಕ್ಕಿನ ಕೊರಳಿಗೆ ಗಂಟೆ
ಪಕ್ಕದಲ್ಲೊಬ್ಬ ಗಂಡ,
ಮಡಿಲಲ್ಲೊಬ್ಬ ಗುಂಡ,
'ಓಹ್! ಜೀವನ ಸಾರ್ಥಕ!" ಅನ್ಕೊಂಡ್ರೆ-
ಹೆಣ್ಣೇ, ಬಾಳು ದಂಡ!!
ನಮ್ಮ ಬೆನ್ನ ಮೇಲೆ...
ಕನ್ನಡ ಕೂಟದ ಕಾರ್ಯಕ್ರಮ,
ಬಣ್ಣದ ಲೋಕದ ಸಂಭ್ರಮ,
ಉಡುಗೆ-ಒಡವೆ-ಗೊಡವೆಗಳ ನಡುವೆ-
ವೇದಿಕೆ ಮೇಲೆ ಏನಾಗ್ತಿದೆ, ಸ್ವಲ್ಪ ಹೇಳಮ್ಮ !
ಕಾರಣ
ಮದುವೆ ಛತ್ರದಲ್ಲಿ ಭಾರೀ ಸಡಗರ,
ಅಲ್ಲೊಂದು ಹೆಣ್ಣಿಲಿಗೊ, ಏನೋ ಮುಜುಗರ,
ಊಟದ್ಮನೆ ದಾಟ್ಕೊಂಡು ಉಗ್ರಾಣಕ್ಹೋಗ್ಬೇಕು,
ಭರ್ಜರಿ ಜರಿ ಸೀರೆ ಉಟ್ಟಿಲ್ಲಾಂತ ಅದಕ್ಕೆ ಬೇಸರ.












Click it and Unblock the Notifications