ಯಡಿಯೂರಪ್ಪನವರಿಗೆ ಬದನೆಕಾಯಿ ಮನವಿ

ಇಂಥಾ ಒಂದು ವಿದ್ಯೆ ಅಥವಾ ವಾಮಾಚಾರ ಇದೆಯೋ ಇಲ್ಲವೋ ಎಂಬ ತನಿಖೆ ಮಾಡಲಿಕ್ಕಾಗಲಿ ಅಥವಾ ಅದರ ಬಗ್ಗೆ ಸಂಶೋದನೆ ಮಾಡಲಿಕ್ಕಾಗಲಿ ಈ ವಿಚಾರ ಪ್ರಸ್ತಾಪ ಮಾಡುತ್ತಿಲ್ಲ. ಆದರೆ ಇದೀಗ ಇಂಥದೇ ಒಂದು ವಿಚಾರ, ಅಂದರೆ ಊಟದಲ್ಲಿ "ವಿಷ" ಬೆರೆತಿರುವ ಬಗ್ಗೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಚರ್ಚೆ ಏರ್ಪಟ್ಟಿದೆ. ಅದೇನೆಂದರೆ ಬಿ.ಟಿ.ಬದನೆ (ಕುಲಾಂತರಿ ತಳಿ). ಅದು ಹೇಗೆ ಎಂದು ಆಶ್ಚರ್ಯ ಬೇಡ. ಸ್ವಲ್ಪ ಗಮನಿಸಿ ಕೈ ಮಸ್ಕು ಇಕ್ಕೋ ವಿದ್ಯೆಯ ಅಥವಾ ಮದ್ದಿಕ್ಕೋದರ ಕಾರ್ಯತಂತ್ರ ಮತ್ತು ಮಾರ್ಗ ಈ ವಿಚಾರಕ್ಕೆ ಬಹಳ ಹತ್ತಿರದಿಂದ ಒಪ್ಪುತ್ತದೆ.
ಆದರೆ ಒಂದೇ ವ್ಯತ್ಯಾಸ "ಮದ್ದಿಡುವುವರು" ತಿನ್ನುವವರಿಗೆ ಕಾಣದೆ ಮರೆಮಾಚಿ ಇಡುತ್ತಾರೆ. ಕುಲಾಂತರಿ ತಳಿಯಲ್ಲಿ ಹಾಗಲ್ಲ. ಎಲ್ಲರಿಗೂ ತಿಳಿಯುವಂತೆಯೇ ಇಡುವುದು. ಆದರೆ ಅದನ್ನು ಪರಿಚಯಿಸುವಾಗ ಇದು ತುಂಬಾ ಒಳ್ಳೆಯದು ಇದರಿಂದ ಏನೂ ತೊಂದರೆ ಇಲ್ಲ ಎಂಬ ಹಸೀ ಸುಳ್ಳು ಹೇಳುತ್ತಾರೆ ಅಷ್ಟೆ. ಏನದು "ಮದ್ದಿನ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಾ ಇರೋದು ಬದನೆಕಾಯಿ ಅಂದಿರಾ.. ಹೌದು ಈಹೊತ್ತು ಬದನೆಕಾಯಿಯದೇ ಲೋಕದ ತುಂಬಾ ಚರ್ಚೆ.. ಆದರೆ ನಮ್ಮ ಹಿತ್ತಲಲ್ಲಿ ಬೆಳಕೊಳೋ ಮುಳ್ಳು ಬದನೆ, ಗುಂಡು ಬದನೆ ವಿಚಾರ ಅಲ್ಲ. ಈ ನಾಡಿನ "ಪರಮಶ್ರೇಷ್ಠ" ಸಂಶೋಧಕರು ಲ್ಯಾಬ್‌ಗಳಲ್ಲಿ ಕುಳಿತು ತಯಾರಿಸಿರುವ ಬಿ.ಟಿ. ಬದನೆ (ಕುಲಾಂತರಿ) ಈಗ ಚರ್ಚಾ ವಸ್ತು.
ಏನದು ಬಿ.ಟಿ. ಬದನೆ?
ಭೂಮಿಯಲ್ಲಿ ಬ್ಯಾಸಿಲೆಸ್ ಥುರಂಜೆನ್ಸಿಸ್ (ವಿಷಕಾರಿ ಜೀವಿ) ಎಂಬ ಏಕಾಣುಜೀವಿ ಇರುತ್ತದೆ. ಅದು ಗಿಡ ಮತ್ತು ಕಾಯಿಗಳನ್ನು ಕೊರೆಯುವ ಕೀಟಗಳನ್ನು ಸಾಯಿಸಬಲ್ಲ ಪ್ರೋಟೀನನ್ನು ಉತ್ಪಾದಿಸುವ ಶಕ್ತಿ ಹೊಂದಿರುತ್ತದೆ. ಇಂಥಾ ಸೂಕ್ಷ್ಮಾಣುಜೀವಿಯ ವಂಶವಾಹಿ(ಜೀನ್)ಯನ್ನು ಕಿತ್ತು ಬದನೆಗಿಡದ ಜೀವಕೋಶಕ್ಕೆ ಸೇರಿಸಲಾಗಿದೆ. ತನಗೆ ಸಂಬಂಧವೇ ಇಲ್ಲದ ಇನ್ನೊಂದು ವಂಶವಾಹಿಯನ್ನು ತನ್ನ ಮೈಯೊಳಗೆ ಸೇರಿಸಿಕೊಂಡ ಬದನೆ ಗಿಡದ ಮೈಯೆಲ್ಲಾ ನಂಜಾಗುತ್ತದೆ (ಅಂದರೆ ಗಿಡವೇ ಕೀಟನಾಶಕ ಗುಣಗಳನ್ನು ಹೊಂದುತ್ತದೆ).
ಅಂಥಾ ನಂಜು ತುಂಬಿದ ಗಿಡದ ಕಾಂಡವನ್ನೋ ಅಥವಾ ಕಾಯಿಯನ್ನೋ ತಿಂದ ಕೀಟಗಳು ಸಾಯುತ್ತವೆ. ಹೀಗಾದಾಗ ಬದನೆಗೆ ಕಾಡುವ ಈ ಕೀಟಗಳಿಗೆ ಕ್ರಿಮಿನಾಶಕಗಳನ್ನು ಸಿಂಪಡಿಸುವ ಗೋಜಲೇ ಇಲ್ಲ. ಬದಲಿಗೆ ಗಿಡವೇ ಕೀಟನಾಶಕದಂತೆ ಕೆಲಸಮಾಡುತ್ತದೆ. ಇದರಿಂದ ಕೀಟಗಳ ಕಾಟ ತಪ್ಪುತ್ತದೆ, ಬೆಳೆ ಸಮೃದ್ದಿಯಾಗಿ ಬರುತ್ತದೆ ಎಂಬುದು ಇದನ್ನು ಸೃಷ್ಟಿಸಿರುವ ಸಂಶೋಧಕರ ತಂಡ, ಮಹಿಕೋ ಹಾಗೂ ಮಾನ್ಸಾಂಟೋ ಕಂಪನಿಗಳ ಸಮಜಾಯಿಷಿ.
ಮುಂದೆ ಓದಿ : ಬಿ.ಟಿ.ಬದನೆ ಪಲ್ಯ ತಿನ್ನಲು ಯೋಗ್ಯವೆ? »
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications