ಬಿಸಿಲಿನಲ್ಲಿ ಈ ಬಣ್ಣದ ಛತ್ರಿ ಬಳಸುವುದರಿಂದ ಇದೆ ಲಾಭ, ಏನದು ?
ಬಿಸಿಲು ಹಾಗೂ ಮಳೆಯ ಸಂದರ್ಭದಲ್ಲಿ ಛತ್ರಿ ಬಳಸುವುದು ಮಾಮೂಲಿ. ಆದರೆ, ಛತ್ರಿ ಬಳಸುವಾಗ ಬಣ್ಣ ಬದಲಾದರೂ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಕೇಳಿದ್ದೀರಾ. ಹೌದು ಇದು ಅಚ್ಚರಿ ಏನಿಸಿದರೂ ಇದರಲ್ಲಿ ಅರ್ಥವಿದೆ ಎನ್ನುತ್ತಾರೆ ತಜ್ಞರು. ಬೇಸಿಗೆ ಕಾಲ ರಾಜ್ಯದಲ್ಲಿ ಬಿರುಬಿಸಿಲು ಜೋರಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದೆಹಲಿ ಮಾದರಿಯ ಬಿಸಿಲು ಕಾಣಿಸಿಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಅಲ್ಲದೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಈಗಾಗಲೇ ಬಿಸಿಲಿನ ಝಳ ಜೋರಾಗಿದೆ. ಸಾಮಾನ್ಯವಾಗಿ ಈ ರೀತಿಯ ಸಂದರ್ಭದಲ್ಲಿ ಜನ ಛತ್ರಿ ಬಳಸುವುದು ಮಾಮೂಲಿ. ಆದರೆ ಬಿಸಿಲಿನಲ್ಲಿ ಕಪ್ಪು ಬಣ್ಣದ ಛತ್ರಿಗಳನ್ನು ಬಳಸುವುದರ ಹಿಂದೆ ಬೇರೆ ಬೇರೆ ಲಾಭಗಳಿವೆ. ಅದು ಹೇಗೆ ಎನ್ನುವ ವಿವರ ಇಲ್ಲಿದೆ.
ಕರ್ನಾಟಕ ಕಳೆದ ವರ್ಷ ಭಾರೀ ಬಿಸಿಲಿಗೆ ಸಾಕ್ಷಿಯಾಗಿತ್ತು. ಈ ವರ್ಷ ಫೆಬ್ರವರಿ ಎರಡನೇ ವಾರದಿಂದಲೇ ಬಿಸಿಲು ಶುರುವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಸಿಲು ಇರಲಿದೆ. ಬಿಸಿಲು - ಮಳೆಯಿಂದ ತಪ್ಪಿಸಿಕೊಳ್ಳಲು ಜನ ಛತ್ರಿಗಳನ್ನು ಬಳಸುವುದು ತೀರ ಸಾಮಾನ್ಯ ಸಂಗತಿ. ಆದರೆ ಕೆಲವು ಛತ್ರಿಗಳಿಂದ ಬಿಸಿಲು ಹೆಚ್ಚಾಗಿ ನಿಮ್ಮ ಮೇಲೆ ಬೀಳಲಿದೆ. ಅಷ್ಟೇ ಅಲ್ಲ ದೇಹದ ಚರ್ಮದ ಮೇಲೂ ಅದು ಪರಿಣಾಮ ಬೀರುವ ಸಾಧ್ಯತೆ ಇದೆ ಅದು ಹೇಗೆ ಎನ್ನುವ ವಿವರ ನೋಡೋಣ.

ಬಿಸಿಲು ಹೆಚ್ಚಾಗಿ ಇರುವಾಗ ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆಗಳನ್ನು ಹಾಕಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಆದರೆ ಛತ್ರಿಗಳ ಬಳಕೆಯ ವಿಚಾರದಲ್ಲಿ ಇದು ತದ್ವಿರುದ್ಧವಾಗಿದೆ. ನೀವು ಬಿಸಿಲಿನಲ್ಲಿ ಬೇರೆ ಬಣ್ಣದ ಛತ್ರಿಗಳನ್ನು ಬಳಸುವುದಕ್ಕಿಂತ ಕಪ್ಪು ಛತ್ರಿಗಳನ್ನು ಬಳಸುವುದರಿಂದ ಆಗುವ ಲಾಭಗಳು ಹೆಚ್ಚು.
ಹೌದು ಇದು ಕೇಳುವುದಕ್ಕೆ ನಿಮಗೆ ಅಚ್ಚರಿ ಅಂತ ಅನಿಸಿದರೂ ಕಪ್ಪು ಛತ್ರಿಗಳನ್ನು ಹೆಚ್ಚು ಬಿಸಿಲು ಇರುವಾಗ ಬಳಸಿದರೆ ನಿಮ್ಮ ದೇಹದ ಮೇಲೆ ಸೂರ್ಯಕಿರಣ ಅಥವಾ ಯುವಿ ಕಿರಣದ ಪರಿಣಾಮ ಬೀರುವುದಿಲ್ಲ. ಕಪ್ಪು ಬಣ್ಣದ ಛತ್ರಿಗಳು UV ಕಿರಣಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿವೆ. ಈ ಬಣ್ಣದ ಛತ್ರಿಗಳು ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಮತ್ತು ಅತಿಗೆಂಪು (ಯುವಿ) ವಿಕಿರಣ ದೇಹದ ಮೇಲೆ ಬೀಳುವುದನ್ನು ಉಳಿದ ಬಣ್ಣದ ಛತ್ರಿಗಳಿಗಿಂತ ಪರಿಣಾಮಕಾರಿಯಾಗಿ ತಡೆಯುತ್ತದೆ.

ಕಪ್ಪು ಛತ್ರಿ ಹೇಗೆ ಸಹಕಾರಿ: ಕಪ್ಪು ಛತ್ರಿಯು ಶಾಖವನ್ನು ಹೀರಿಕೊಳ್ಳುತ್ತದೆ. Uv ಕಿರಣಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ದೇಹದ ಮೇಲೆ ಯುವಿ ಕಿರಣವು ಬೀಳುವುದರಿಂದ ದೇಹದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕಪ್ಪು ಛತ್ರಿಯನ್ನು ಬಳಸುವುದರಿಂದ ಚರ್ಮದ ಹಾನಿಯನ್ನು ತಪ್ಪಿಸಬಹುದಾಗಿದೆ. ಇದೇ ಸಂದರ್ಭದಲ್ಲಿ ಬಿಳಿ ಅಥವಾ ತಿಳಿ ಬಣ್ಣದ ಛತ್ರಿಗಳನ್ನು ಬಳಸುವುದರಿಂದ ಬಿಸಿಲಿನ ಕಿರಣಗಳು ನಿಮ್ಮ ದೇಹದ ಮೇಲೆ ಬಿದ್ದು ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದು ಬಿಸಿಲಿಗೆ ಮಾತ್ರ ಅನ್ವಯವಾಗಿದೆ. ಮಳೆಗಾಲದಲ್ಲಿ ಅಥವಾ ಮಳೆ ಬರುವಾಗ ಯಾವ ಬಣ್ಣದ ಛತ್ರಿಯನ್ನಾದರೂ ಬಳಸಬಹುದು.












Click it and Unblock the Notifications