Mango Peel Tea Benefits: ಮಾವಿನ ಹಣ್ಣಿನ ಸಿಪ್ಪೆಯ ಚಹಾ.. ಕುಡಿದರೆ ಹಾಹಾ...: ಏನೆಲ್ಲಾ ಪ್ರಯೋಜನ ತಿಳಿಯಿರಿ
ಹಣ್ಣುಗಳ ರಾಜ ಮಾವಿನ ಹಣ್ಣು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದರ ಪರಿಮಳ ಮತ್ತು ರುಚಿಗೆ ಮರುಳಾಗದವರೇ ಇಲ್ಲ. ಅಂದಹಾಗೆ ಮಾವಿನ ಹಣ್ಣಿನ ಸೀಸನ್ ಆರಂಭವಾಗಲು ದಿನಗಳು ಹತ್ತಿರದಲ್ಲಿವೆ. ಈ ವೇಳೆ ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರಾಟವಾಗುತ್ತವೆ. ಸಾಮಾನ್ಯವಾಗಿ ನೀವು ಮಾವಿನ ಹಣ್ಣು, ಅದರ ಐಸ್‌ಕ್ರೀಮ್, ಸಲಾಡ್ ಸೇವನೆ ಮಾಡಿರುತ್ತೀರಿ. ಆದರೆ ಮಾವಿನ ಹಣ್ಣಿನ ಸಿಪ್ಪೆಯ ಚಹಾ ಎಂದಾದರೂ ಟೇಸ್ಟ್ ಮಾಡಿದ್ದೀರಾ? ಇಲ್ಲಾ ಅಂತಾದರೆ ಇದನ್ನು ಓದಿ..
ಈ ಮಾವು ಕೇವಲ ರುಚಿಕರವಾದ ಹಣ್ಣಲ್ಲದೇ ವಿಟಮಿನ್ ಸಿ ಸೇರಿದಂತೆ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ನಮ್ಮಲ್ಲಿ ಹೆಚ್ಚಿನವರು ಮಾವಿನ ಹಣ್ಣನ್ನು ತಿನ್ನುವಾಗ ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಆದರೆ ಮಾವಿನ ಹಣ್ಣಿನಂತೆ ಇದರ ಸಿಪ್ಪೆಯೂ ಅಗತ್ಯ ಪೋಷಕಾಂಶಗಳಿಂದ ಕೂಡಿದೆ.

ಮುಖ್ಯವಾಗಿ ಮಾವಿನ ಸಿಪ್ಪೆ ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಹಾಗಾಗಿ ಇನ್ನು ಮುಂದೆ ಮಾವಿನ ಹಣ್ಣನ್ನು ತಿಂದಾಗ ಅದರ ಸಿಪ್ಪೆಯನ್ನು ಬಿಸಾಡಬೇಡಿ. ಯಾಕೆಂದರೆ ಇದರಿಂದ ಟೀ ಕೂಡ ಮಾಡಬಹುದು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಇವೆ. ಹಾಗಾದರೆ ಈಗ ಮಾವಿನ ಸಿಪ್ಪೆಯಿಂದ ಟೀ ತಯಾರಿಸಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
ಮಾವಿನ ಹಣ್ಣಿನ ಸಿಪ್ಪೆಯ ಟೀ..
ಮಾವಿನ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಮತ್ತು ಸೋಸುವ ಮೂಲಕ ಮಾವಿನ ಸಿಪ್ಪೆಯ ಚಹಾವನ್ನು ತಯಾರಿಸಲಾಗುತ್ತದೆ. ಈ ಚಹಾವು ಸ್ವಲ್ಪ ಕಹಿ ರುಚಿಯನ್ನು ಹೊಂದಿರುವುದರಿಂದ ಇದನ್ನು ಕುಡಿಯುವಾಗ ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಬೇಕು.
ಮಾವಿನ ಹಣ್ಣಿನ ಸಿಪ್ಪೆಯ ಚಹಾ ಏಕೆ ಒಳ್ಳೆಯದು?
ಮಾವಿನ ಸಿಪ್ಪೆಯಿಂದ ಮಾಡಿದ ಚಹಾವು ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಯಂತಹ ವಿವಿಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲ್ಲದೆ, ಈ ಚಹಾವು ಮ್ಯಾಗ್ನಿಪೆರಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈಗ ಮಾವಿನ ಹಣ್ಣಿನ ಸಿಪ್ಪೆಯ ಚಹಾವನ್ನು ಏಕೆ ಕುಡಿಯಬೇಕು ಮತ್ತು ಅದನ್ನು ಕುಡಿಯುವುದರಿಂದ ಏನು ಪ್ರಯೋಜನ ಎಂದು ನೋಡೋಣ.
ಮಾವಿನ ಸಿಪ್ಪೆ ಟೀ ಆರೋಗ್ಯಕರ ಪ್ರಯೋಜನಗಳು:-
*ಮಲಬದ್ಧತೆ ನಿವಾರಣೆ
ಮಾವಿನ ಸಿಪ್ಪೆಯಲ್ಲಿ ಪೆಕ್ಟಿನ್ ನಂತಹ ಕರಗುವ ಫೈಬರ್ ಅಧಿಕವಾಗಿದೆ. ಫೈಬರ್ ಕರುಳು ಮತ್ತು ಜೀರ್ಣಕಾರಿ ಕಾರ್ಯವನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಫೈಬರ್ ರಕ್ತಪ್ರವಾಹಕ್ಕೆ ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮಾವಿನ ಹಣ್ಣಿನ ಸಿಪ್ಪೆಯ ಟೀ ಸೆವನೆಯಿಂದ ಸಿಗುತ್ತದೆ.
* ಪೋಷಕಾಂಶಗಳ ಆಗರ
ಮಾವಿನ ಸಿಪ್ಪೆ ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಯಂತಹ ಶಕ್ತಿಯುತವಾದ ಪೋಷಕಾಂಶಗಳನ್ನು ಹೊಂದಿದೆ. ಇವು ಮಧುಮೇಹ ಮತ್ತು ಸಂಬಂಧಿತ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
*ಮಧುಮೇಹಿಗಳಿಗೆ ತುಂಬಾ ಒಳ್ಳೆಯದು
ಮಾವಿನ ಸಿಪ್ಪೆಯ ಚಹಾವು ಇತರ ಪಾನೀಯಗಳಿಗಿಂತ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಅಂದರೆ ಇದನ್ನು ಕುಡಿದ ನಂತರ ನಿಧಾನವಾಗಿ ಸಕ್ಕರೆಯನ್ನು ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಹಾಗಾಗಿ ಈ ಚಹಾ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.
*ರಕ್ತದಲ್ಲಿನ ಸಕ್ಕರೆ ಸ್ಥಿರ
ವಿವಿಧ ಅಧ್ಯಯನಗಳ ಪ್ರಕಾರ, ಮಾವಿನ ಸಿಪ್ಪೆಯಲ್ಲಿ ಕಂಡುಬರುವ ಮ್ಯಾಗ್ನಿಪೆರಿನ್ ಎಂಬ ಸಂಯುಕ್ತ ಇನ್ಸುಲಿನ್, ಜೀವಕೋಶಗಳಿಂದ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ಸುಧಾರಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
*ಆರೋಗ್ಯಕ್ಕೆ ಶಕ್ತಿ ಮಾವಿನ ಸಿಪ್ಪೆಯಿಂದ ತಯಾರಿಸಿದ ಚಹಾ
ಮಧುಮೇಹಿಗಳು ಮಾವಿನ ಸಿಪ್ಪೆಯಿಂದ ತಯಾರಿಸಿದ ಚಹಾವನ್ನು ಸೇವಿಸಿದರೆ, ಅದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಮತ್ತು ಇತರ ಪಾನೀಯಗಳಲ್ಲಿ ಕಂಡುಬರುವ ಸಕ್ಕರೆ ಮತ್ತು ಕ್ಯಾಲೊರಿಗಳಿಗಿಂತ ಭಿನ್ನವಾಗಿ, ಇದು ಕಡಿಮೆ ಕ್ಯಾಲೋರಿಗಳು ಮತ್ತು ಸಕ್ಕರೆಯನ್ನು ಹೊಂದಿದೆ. ಇದು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು.
ಮಾವಿನ ಸಿಪ್ಪೆಯ ಚಹಾವು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ ಎಂಬ ಅಂಶದ ಹೊರತಾಗಿಯೂ, ಈ ಚಹಾವನ್ನು ನಿತ್ಯ ಸೇವಿಸಲು ಇಚ್ಚಿಸುವ ಯಾವುದೇ ಕಾಯಿಲೆ ಇರುವ ವ್ಯಕ್ತಿಗಳು ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಅವರಿಂದ ಸಲಹೆ ಪಡೆಯುವುದು ಅವಶ್ಯಕ.












Click it and Unblock the Notifications