ನಾವ್ಯಾಕೆ ಸದಾ ಒಳ್ಳೆಯದನ್ನೇ ಧ್ಯಾನಿಸಬೇಕು ಗೊತ್ತಾ? ಇಲ್ಲವಾದರೆ ಏನಾಗುತ್ತದೆ..?
ನಾವು ಒಳ್ಳೆಯವರಾಗಬೇಕಾದರೆ ಸದಾ ಒಳ್ಳೆಯದನ್ನೇ ಧ್ಯಾನಿಸಬೇಕು ಎಂಬ ಮಾತಿದೆ. ಇದು ನಿಜವೂ ಹೌದು. ಏಕೆಂದರೆ ನಮ್ಮ ಮನಸ್ಸು ಸಾಮಾನ್ಯವಾಗಿ ಒಳ್ಳೆಯದಕ್ಕಿಂತ ಕೆಟ್ಟದನ್ನು ಬೇಗ ಆಕರ್ಷಿಸುತ್ತದೆ. ಹೀಗಾಗಿ ಒಳ್ಳೆಯದರ ಕಡೆಗೆ ಮನಸ್ಸನ್ನು ಕೊಂಡೊಯ್ಯದೆ ಹೋದರೆ ಅಪಾಯ ತಪ್ಪಿದಲ್ಲ. ಏನೇ ಕೆಲಸ ಮಾಡಿದರೂ ಅದರತ್ತ ಮನಸ್ಸನ್ನು ಸಂಪೂರ್ಣ ಕೇಂದ್ರೀಕರಿಸದೆ ಹೋದರೆ ಅದು ಪರಿಪೂರ್ಣವಾಗುವುದಿಲ್ಲ.
ಈಗ ಒಳ್ಳೆಯದನ್ನು ಧ್ಯಾನಿಸೋದಕ್ಕೂ ಸಮಯವಿಲ್ಲದ ಸ್ಥಿತಿಯಲ್ಲಿದ್ದೇವೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದು ರಾತ್ರಿ ಮತ್ತೆ ಅದೇ ಹಾಸಿಗೆಗೆ ಹೋಗುವ ತನಕವೂ ಒಂದಲ್ಲ ಒಂದು ಒತ್ತಡ ನಮ್ಮನ್ನು ಕಾಡುತ್ತಿರುತ್ತದೆ. ನೆಮ್ಮದಿ ತರುವ ಕೆಲಸಕ್ಕಿಂತ ನಾವು ಹಣ ತರುವ ಕೆಲಸವನ್ನು ಆಯ್ಕೆ ಮಾಡಿಕೊಂಡಿರುವುದರಿಂದ ಅದರಲ್ಲಿ ಒತ್ತಡ, ಉದ್ವೇಗ ಎಲ್ಲವೂ ಇದೆ. ಹೀಗಿರುವಾಗ ನಾವು ನೆಮ್ಮದಿಯಾಗಿ ಬದುಕಲು ಹೇಗೆ ಸಾಧ್ಯ? ಹಣ ಕೈತುಂಬಾ ಬರುತ್ತಿದೆ. ಅದರಿಂದ ಐಷಾರಾಮಿ ವಸ್ತುಗಳನ್ನೆಲ್ಲ ತಂದು ಗುಡ್ಡೆ ಹಾಕಿಕೊಂಡಿದ್ದೇವೆ.

ಈ ವಸ್ತುಗಳು, ಸವಲತ್ತುಗಳು ನಮ್ಮ ದೈಹಿಕ ಶ್ರಮವನ್ನು ಒಂದಷ್ಟು ತಗ್ಗಿಸಬಹುದಾದರೂ ಮಾನಸಿಕ ನೆಮ್ಮದಿಯನ್ನು ಅವು ತಂದುಕೊಡುತ್ತಿಲ್ಲ. ದೈಹಿಕ ಶ್ರಮಕ್ಕಿಂತ ಮಾನಸಿಕ ಶ್ರಮವೇ ಜಾಸ್ತಿಯಾಗಿರುವುದರಿಂದ ಆರೋಗ್ಯ ಹದಗೆಡುತ್ತಿದೆ. ನಮಗೆ ಅರಿವಿಲ್ಲದೆ ಕಾಯಿಲೆಗಳು ನಮ್ಮನ್ನು ಮುತ್ತಿಕೊಳ್ಳುತ್ತಿವೆ. ಕಷ್ಟಪಟ್ಟು ದುಡಿದರೂ ಇಷ್ಟಪಟ್ಟಿದನ್ನು ತಿನ್ನಲಾಗದೆ ಒದ್ದಾಡುತ್ತಿದ್ದೇವೆ. ಇಂತಹದೊಂದು ಬದುಕು ಬೇಕಾ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾದ ಸ್ಥಿತಿಗೆ ಬಂದು ನಿಂತಿದ್ದೇವೆ.
ಒಳ್ಳೆಯದನ್ನೇ ಬಯಸುವುದು ಬೇಕು
ಏನೇ ಮಾಡಬೇಕಾದರೂ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಆದ್ದರಿಂದ ಮಾನಸಿಕ ಆರೋಗ್ಯ ಬೇಕೆಂದರೆ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬೇಕು. ನಮ್ಮ ವೈರುದ್ಧಗಳ ನಡುವೆಯೂ ಅಂಥ ಬದುಕನ್ನು ಕಟ್ಟಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ಅದನ್ನು ಅಭ್ಯಸಿಸುತ್ತಾ ಹೋದರೆ ಸುಲಭವಾಗಿ ಕಾಣುತ್ತದೆ. ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಕಾಡುವ ಮಾನಸಿಕ ವಿಕಾರತೆ, ತುಮುಲ ಇವುಗಳನ್ನೆಲ್ಲ ಬದಿಗೊತ್ತಿ ಪರಿಶುದ್ಧ ಮನಸ್ಸನ್ನು ನೆಲೆಗೊಳಿಸಬೇಕು.

ಇದು ಅಷ್ಟು ಸುಲಭವಲ್ಲ. ಆದರೆ ಕಷ್ಟವೂ ಅಲ್ಲ. ಕೆಲವರು ಸುಮ್ಮನೆ ಕುಳಿತಾಗಲೂ ದೇವರ ನಾಮ ಜಪ ಮಾಡುತ್ತಿರುತ್ತಾರೆ. ಅದು ನಮಗೆ ವಿಚಿತ್ರವಾಗಿ ಕಂಡು ಬಂದರೂ ಅದು ಎಲ್ಲೆಂದರಲ್ಲಿ ಹರಡಿ ಹೋಗುವ ಮನಸ್ಸನ್ನು ಎಳೆದು ತಂದು ಒಂದೆಡೆ ಕಟ್ಟಿಹಾಕುವ ಯತ್ನ ಎಂದರೂ ತಪ್ಪಾಗುವುದಿಲ್ಲ. ಒಳ್ಳೆಯದನ್ನು ಧ್ಯಾನ ಮಾಡೋದಕ್ಕೆ ಧ್ಯಾನ ಕೇಂದ್ರಕ್ಕೆ ಹೋಗ ಬೇಕಾಗಿಲ್ಲ. ಇದ್ದಲ್ಲೇ ಒಳ್ಳೆಯ ವಿಚಾರಗಳ ಬಗ್ಗೆ ಆಲೋಚಿಸುವುದು ಮತ್ತು ಒಳ್ಳೆಯದನ್ನೇ ಬಯಸಿದರೆ ಸಾಕು.
ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನೇ ಧ್ಯಾನಿಸಿ
ಸದಾ ಒತ್ತಡದಲ್ಲಿ ಚಂಚಲವಾಗಿರುವ ಮನಸ್ಸನ್ನು ಹತೋಟಿಗೆ ತರಲು ಧ್ಯಾನ ಪರಿಣಾಮಕಾರಿಯಾದ ಮಾರ್ಗ ಎಂದು ಆಧ್ಯಾತ್ಮದಲ್ಲಿ ವಿವರಿಸಲಾಗಿದೆ. ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ಏಕಚಿತ್ತವಾಗಿ ಭಗವಂತನ ಧ್ಯಾನದಲ್ಲಿ ತೊಡಗುವುದರಿಂದ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದಾಗಿದೆ.ಮುಂಜಾನೆ ಅಥವಾ ಸಂಜೆ ದೇವರ ಸನ್ನಿಧಿಯಲ್ಲಿ(ದೇವಾಲಯ) ಒಂದಷ್ಟು ಹೊತ್ತು ಇದ್ದು ಬರುವುದು ಕೂಡ ನೆಮ್ಮದಿ ನೀಡುತ್ತದೆ. ಆಧ್ಯಾತ್ಮ ಚಿಂತಕರು ಯಾರು ಯಾವುದನ್ನು ಕುರಿತು ಧ್ಯಾನಿಸುತ್ತಾರೆಯೋ ಅವರು ಅದೇ ಆಗುತ್ತಾರೆ ಎಂದು ಹೇಳಿದ್ದಾರೆ. ಆದ್ದರಿಂದ ಕೆಟ್ಟದನ್ನು ಧ್ಯಾನಿಸುವ ಬದಲು ಒಳ್ಳೆಯದನ್ನೇ ಧ್ಯಾನಿಸಿದರೆ ಅದರಿಂದ ಉಪಯುಕ್ತವಾಗುವುದರಲ್ಲಿ ಎರಡು ಮಾತಿಲ್ಲ.
ಒಂದೆಡೆ ಸ್ವಾಮಿ ಬ್ರಹ್ಮಾನಂದರು ಹೇಳುತ್ತಾರೆ ನೀನು ಧ್ಯಾನಕ್ಕೆ ತೊಡಗದಿದ್ದರೆ ನಿನ್ನ ಮನಸ್ಸು ನಿಯಂತ್ರಣಕ್ಕೆ ಸಿಕ್ಕದು. ಮನಸ್ಸನ್ನು ಹತೋಟಿಗೆ ತಂದುಕೊಳ್ಳದಿದ್ದರೆ ನಿನಗೆ ಧ್ಯಾನ ಸಿದ್ದಿಸದು. ನೀನು ಈ ಎರಡನ್ನೂ ಏಕಕಾಲಕ್ಕೆ ನಿರ್ವಹಿಸಬೇಕು. ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಳ್ಳಬೇಕು, ಧ್ಯಾನವನ್ನು ಮಾಡಬೇಕು. ಇದು ಕಾರ್ಯರೂಪಕ್ಕೆ ಬರಬೇಕಾದರೆ ಮನಸ್ಸನ್ನು ಕಠಿಣ ಅಭ್ಯಾಸದಿಂದ ಭಗವಂತನಲ್ಲಿ ನೆಲೆಗೊಳಿಸಬೇಕು. ಮನಸ್ಸಿನೊಳಗೆ ಅನಪೇಕ್ಷಣೀಯವಾದ ಬಯಕೆಗಳು ಅಥವಾ ಗೊಂದಲಗಳು ನುಸುಳಿ ಬರದಂತೆ ಸದಾ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications