Get Updates
Get notified of breaking news, exclusive insights, and must-see stories!

ಮನಸ್ಸಿನ ನಿಗ್ರಹ ಏಕೆ ಮಾಡಬೇಕು..? ಆಧ್ಯಾತ್ಮಿಕ ಚಿಂತಕರು ಹೇಳುವುದೇನು..?

ಮನಸ್ಸಿನ ಚಂಚಲತೆಯಿಂದ ಹಲವು ರೀತಿಯ ತೊಂದರೆಗಳನ್ನು ನಾವು ಅನುಭವಿಸಿರುತ್ತೇವೆ. ಹೆಚ್ಚಿನ ಜನರು ನನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದೆ ದುಶ್ಚಟಕ್ಕೆ ಬಲಿಯಾಗುತ್ತಾರೆ. ನಾವು ಎದುರಿಸುವ ಕಷ್ಟನಷ್ಟಗಳಿಗೂ ಮನಸ್ಸೇ ಕಾರಣವಾಗಿರುತ್ತದೆ. ಹೀಗಿರುವಾಗ ಎಲ್ಲೆಲ್ಲೋ ಅಲೆಯುತ್ತಾ ಕಾಟಕೊಡುವ ಮನಸ್ಸನ್ನು ನಿಗ್ರಹಿಸಿದರೆ ಬಹಳಷ್ಟು ಮನಸ್ಸಿನಿಂದ ಸಂಭವಿಸಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಮನಸ್ಸನ್ನು ನಿಗ್ರಹಿಸಿ ಅದನ್ನು ನಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯನಾ? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡದಿರದು.

ಪುರಾಣದಿಂದ ಇಲ್ಲಿವರೆಗಿನ ಹಲವು ಘಟನಾವಳಿಗಳಲ್ಲಿ ಮನಸ್ಸಿನ ಕ್ಷೋಭೆಯಿಂದಾದ ಅನಾಹುತಗಳನ್ನು ನಾವೆಲ್ಲರೂ ಕೇಳಿದ್ದೇವೆ, ನೋಡಿದ್ದೇವೆ. ಸ್ವತಃ ನಾವೇ ಕೆಲವೊಂದು ಸಮಸ್ಯೆಗಳನ್ನು ಎದುರಿಸಿರುತ್ತೇವೆ. ಇದರ ಜತೆಗೆ ನಮ್ಮ ಸುತ್ತಮುತ್ತವಿರುವ ಜನರು ಆಡುವ ಮಾತುಗಳನ್ನು ಕೇಳಿರುತ್ತೇವೆ. ಕೆಲವರು ಮನಸ್ಸು ತಡೆಯಲಾರದೆ, ಹೇಳಿಬಿಟ್ಟೆ, ತಿಂದುಬಿಟ್ಟೆ, ಕುಡಿದುಬಿಟ್ಟೆ ಹೀಗೆ ಹೇಳುತ್ತಿರುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಮನಸ್ಸನ್ನು ನಿಗ್ರಹಿಸುವುದು ಸುಲಭವಲ್ಲ ಎಂಬುದು ಗೊತ್ತಾಗುತ್ತದೆ. ಆದರೆ ಮನಸ್ಸನ್ನು ಹಿಡಿತದಲ್ಲಿಟ್ಟು ಸಾಧನೆ ಮಾಡಿದವರು ನಮ್ಮ ಮುಂದೆ ಬೇಕಾದಷ್ಟು ಜನರಿದ್ದಾರೆ ಎನ್ನುವುದು ಅಷ್ಟೇ ಸತ್ಯ.

Health Tips Why Do Mind Control What Do Spiritual Thinkers Say

ಪ್ರತಿಯೊಬ್ಬ ಮನುಷ್ಯನೂ ತನ್ನ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳದೆ ಹೋದರೆ ಅದರಿಂದ ಉಂಟಾಗುವ ಹಲವಾರು ತೊಂದರೆಗಳಿಗೆ ಒಳಗಾಗುವುದು ನಿಶ್ಚಿತ. ಮನಸ್ಸಿನ ನಿಯಂತ್ರಣ ಅಂದರೆ ಮನೋನಿಗ್ರಹ ಇದು ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾದುದಲ್ಲ. ಬದಲಾಗಿ ಪ್ರತಿಯೊಬ್ಬ ಮನುಷ್ಯನೂ ಅವನ ಸಂರಕ್ಷಗೆ ಬದುಕಿನ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯವಾಗಿದೆ ಎಂದು ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯಪಡುತ್ತಾರೆ.

ಮನೋನಿಗ್ರಹವಿಲ್ಲದಿದ್ದರೆ ಸಂಕಷ್ಟ ತಪ್ಪಿದಲ್ಲ

ನಮ್ಮ ಹಿಡಿತಕ್ಕೆ ಸಿಲುಕದ ಮನಸ್ಸನ್ನು ಒಂದು ಹಂತಕ್ಕೆ ತಂದು ನಿಯಂತ್ರಿಸದೆ ಹೋದರೆ ಬುದ್ದಿಭ್ರಮಣೆಯಂತಹ ಆಪತ್ತನ್ನು ಎದುರಿಸಬೇಕಾಗುವುದಂತು ನಿಶ್ಚಿತ. ಒಂದು ಇಡೀ ಜನಾಂಗ ಅದು ನೋಡಲು ಎಷ್ಟೇ ಮೇಲ್ಮಟ್ಟದಲ್ಲಿದ್ದರೂ ಅಷ್ಟೇ ಅಲ್ಲ ಸದೃಢವಾಗಿರುವಂತೆ ಕಂಡರೂ ಮನೋನಿಗ್ರಹವಿಲ್ಲದಿದ್ದರೆ ಇಡೀ ನಾಗರಿಕತೆಯ ಅಧಃಪತನಕ್ಕೆ ಕಾರಣವಾಗಬಹುದು. ಮನೋನಿಗ್ರಹದ ಕೊರತೆಯಿಂದಾಗಿ ಪರೋಕ್ಷವಾಗಿಯೋ, ಪ್ರತ್ಯಕ್ಷವಾಗಿಯೋ ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಮನೋನಿಗ್ರಹವಿಲ್ಲದ ವ್ಯಕ್ತಿಗಳು ಸಾಮಾನ್ಯವಾಗಿ ಅವರೊಳಗಿನ ತುಮುಲದಿಂದಾಗಿ ಮಾನಸಿಕ ನಾಶಗಳಿಗೂ, ಮನೋವಿಕಾರಗಳಿಗೂ ಒಳಗಾಗುವ ಸ್ವಭಾವದವರಾಗುತ್ತಾರಲ್ಲದೆ, ಅತ್ಯಂತ ಅನುಕೂಲಕರವಾದ ಸಂದರ್ಭಗಳಲ್ಲಿಯೂ ತಮ್ಮ ಸಾಮರ್ಥ್ಯಗಳನ್ನಾಗಲೀ ಅಥವಾ ನಿರೀಕ್ಷೆಗಳನ್ನಾಗಲೀ ಅರ್ಥ ಮಾಡಿಕೊಳ್ಳಲಾರದವರಾಗುತ್ತಾರೆ. ಇದು ಅಂತಹವರ ವ್ಯಕ್ತಿತ್ವದ ಸಮಗ್ರತೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂಬುದಾಗಿ ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ.

Health Tips Why Do Mind Control What Do Spiritual Thinkers Say

ಮನೋನಿಗ್ರಹದಿಂದ ಶಾಂತಿ, ಚಿತ್ತ ಸ್ವಾಸ್ಥ್ಯ

ಮನೋನಿಗ್ರಹದಿಂದ ಒಬ್ಬ ವ್ಯಕ್ತಿ ಪಡೆಯಬಹುದಾದ ಪರಮಸ್ಥಿತಿಯೆಂದರೆ ಆಧ್ಯಾತ್ಮ ಸಿದ್ಧಿಯೇ... ಮನೋನಿಗ್ರಹದಿಂದ ಪ್ರಾಪ್ತವಾಗುವ ಇತರ ಶ್ರೇಯಸ್ಸುಗಳೂ ಉಂಟು. ನಿಗ್ರಹಕ್ಕೆ ಬಂದ ಮನಸ್ಸನ್ನು ಸುಲಭವಾಗಿ ಏಕಾಗ್ರಗೊಳಿಸಬಹುದು. ಈ ಏಕಾಗ್ರತೆಯಿಂದ ಜ್ಞಾನೋದಯವಾಗುತ್ತದೆ. ಮನೋನಿಗ್ರಹದಿಂದ ತಾನೇ ತಾನಾಗಿ ನಿಷ್ಪನ್ನವಾಗುವ ಪರಿಣಾಮವೆಂದರೆ, ವ್ಯಕ್ತಿತ್ವಕ್ಕೆ ಒದಗುವ ಸಮಗ್ರತೆ. ಅಂಧ ದೃಢ ಮನಸ್ಕನಾದವನು ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗುತ್ತಾನೆ.

ಮನೋ ನಿಗ್ರಹದಿಂದ ಶಾಂತಿ, ಶಾಂತಿಯಿಂದ ಚಿತ್ತ ಸ್ವಾಸ್ಥ್ಯ, ಚಿತ್ತ ಸ್ವಾಸ್ಥ್ಯದಿಂದ ಸುಖ. ಈ ರೀತಿಯಾದ ಸುಖವನ್ನು ಪಡೆದ ವ್ಯಕ್ತಿ ಇತರರನ್ನೂ ಸುಖವಾಗಿಡಲು ಪ್ರಯತ್ನಪಡುತ್ತಾನೆ. ಅಷ್ಟೇ ಅಲ್ಲ ಈತ ಮಾಡುವ ಕಾರ್ಯಗಳು ಸಹ ಗುಣಮಟ್ಟದಿಂದ ಕೂಡಿರುವುದರೊಂದಿಗೆ ಹಲವು ವಿಚಾರಗಳಲ್ಲಿಯೂ ಸಹಜವಾಗಿಯೇ ಅಭಿವೃದ್ಧಿ ಹೊಂದುತ್ತಾನೆ. ಮನೋನಿಗ್ರಹಿಗಳಾದವರು ಬದುಕಿನ ಪರೀಕ್ಷೆ ಹಾಗೂ ಕ್ಲೇಶಗಳಿಗೆ ಒಳಗಾಗುವುದೇ ಇಲ್ಲವೆ? ಹಾಗೆಂಬ ಪ್ರಶ್ನೆ ಉದ್ಭವಿಸಬಹುದು.

ಮನೋನಿಗ್ರಹದಿಂದ ಸುಪ್ತ ಶಕ್ತಿಗಳು ಜಾಗೃತ

ಮನೋನಿಗ್ರಹಿಯಾದ ವ್ಯಕ್ತಿ ಇಂತಹ ಸಂದರ್ಭ ಧೈರ್ಯವಾಗಿ ಎದುರಿಸುತ್ತಾನೆ ಎಂಬುವುದನ್ನು ನಾವು ತಳ್ಳಿಹಾಕುವಂತಿಲ್ಲ. ಮನೋನಿಗ್ರಹಿಯಾದ ವ್ಯಕ್ತಿ ಮನೆಯ ಯಜಮಾನನಾಗಿದ್ದರಂತೂ ಅವನ ಈ ನಿಲುವಿನಿಂದ ಮನೆಯೊಳಗೆ ಒಂದು ಬಗೆಯ ವ್ಯವಸ್ಥೆ, ಸಂತೋಷ, ಸಂಸ್ಕೃತಿ, ಮತ್ತಿತರ ಉತ್ಕೃಷ್ಟ ಮಾನವೀಯ ಸಂಬಂಧಗಳು ನೆಲೆಗೊಳ್ಳುತ್ತವೆ. ಅಷ್ಟೇ ಅಲ್ಲ ಸಮಾಜದಲ್ಲಿ ಸದ್ಗೃಹಸ್ಥ ಎಂಬ ಗೌರವಕ್ಕೂ ಪಾತ್ರನಾಗುತ್ತಾನೆ. ಮನೋನಿಗ್ರಹವುಳ್ಳವನು ಮಾನಸಿಕ ತುಮುಲಗಳ ಪರಿಣಾಮವಾದ ಮಾನಸಿಕ ಹಾಗೂ ದೈಹಿಕ ಜಾಢ್ಯಗಳಿಂದ ಮುಕ್ತನಾಗಿರುತ್ತಾನೆ.

ಯಾರು ಮನಸ್ಸನ್ನು ತನ್ನ ಹತೋಟಿಗೆ ತಂದುಕೊಂಡವನಾಗುತ್ತಾನೋ, ಅವನಲ್ಲಿ ಉದಾತ್ತ ಭಾವನೆಗಳು ಸ್ಥಾಯಿಯಾಗುತ್ತವೆ. ಆತನ ಸುಪ್ತ ಶಕ್ತಿಗಳು ಜಾಗೃತವಾಗುತ್ತವೆ. ಅಷ್ಟೇ ಅಲ್ಲ, ಕ್ರಮೇಣ ಉದಾತ್ತ ಸ್ಥಿತಿಗೂ ಏರುತ್ತಾನೆ. ಬದುಕಿನ ಯಾವುದೇ ಕ್ಷೇತ್ರದಲ್ಲಿ ಬಹುಕಾಲ ಉಳಿಯಬಲ್ಲ ಪ್ರಗತಿಯನ್ನಾಗಲೀ, ಅಭಿವೃದ್ಧಿಯನ್ನಾಗಲೀ, ಶಾಂತಿಯನ್ನಾಗಲೀ ಸಾಧಿಸುವುದು ದೃಢಮನಸ್ಕರಿಂದ ಮಾತ್ರ ಸಾಧ್ಯ. ಮನೋನಿಗ್ರಹದಲ್ಲಿ ಎದುರಿಸಬೇಕಾದ ಆತಂಕಗಳೂ ಇಲ್ಲದಿಲ್ಲ.

ಆ ಸುಭಾಷಿತ ಹೇಳುವುದೇನು ಗೊತ್ತಾ?

ಮನೋನಿಗ್ರಹಕ್ಕೆ ಅಗತ್ಯವಾದ ದೃಢವಾದ ಸಂಕಲ್ಪ ಅಥವಾ ಇಚ್ಛಾಶಕ್ತಿಯನ್ನು ಗಳಿಸಿಕೊಳ್ಳಬೇಕಾದರೆ ಮತ್ತೆ ಮತ್ತೆ ಮನಸ್ಸನ್ನು ಆ ದಿಕ್ಕಿನಲ್ಲಿ ಪ್ರತಿಬೋಧಿಸಬೇಕಾಗುತ್ತದೆ. ಈ ಪ್ರತಿ ಬೋಧನೆಯಿಲ್ಲದಿದ್ದರೆ ನಾವು ಏನೂ ಅಲ್ಲ. ನಮ್ಮ ಇಡೀ ಭವಿಷ್ಯತ್ತಿನ ಸ್ವರೂಪವೇ ನಾವು ಎಷ್ಟರ ಮಟ್ಟಿಗೆ ನಮ್ಮ ಮನಸ್ಸಿನ ಮೇಲೆ ನಿಯಂತ್ರಣವನ್ನು ಸಾಧಿಸಿದ್ದೇವೆ ಎನ್ನುವುದನ್ನು ಅವಲಂಭಿಸಿದೆ ಎಂಬ ಸಂಗತಿಯನ್ನು ನಾವು ಮನದಟ್ಟು ಮಾಡಿಕೊಳ್ಳಬೇಕಾಗಿದೆ. ಮನುಷ್ಯನಿಗೆ ಅಗತ್ಯವಾದ ಆತನ ಮೂಲಭೂತ ಲೌಕಿಕ ಅಪೇಕ್ಷೆಗಳನ್ನು ಪೂರೈಸುವುದರ ಜತೆಗೆ ಅದಕ್ಕಿಂತಲೂ ಮಹತ್ತರವಾದ ಸಂಗತಿಗಳೂ ಇವೆ ಎನ್ನುವುದನ್ನು ಒಪ್ಪಬಹುದು.

ಮನಸ್ಸನ್ನು ನಿಗ್ರಹಿಸಬೇಕೆಂಬ ನಮ್ಮ ಇಚ್ಛಾಶಕ್ತಿಯು ಇನ್ನೂ ದೃಢವಾಗಿ ರೂಪುಗೊಳ್ಳುತ್ತದೆ. ಭಾರತೀಯ ಲೋಕೋಕ್ತಿಯೊಂದರಲ್ಲಿ ಹೇಳಿದಂತೆ ಒಬ್ಬ ವ್ಯಕ್ತಿ ಭಗವಂತನ ಕೃಪೆಗೆ ಪಾತ್ರನಾಗಬಹುದು. ಗುರುಹಿರಿಯರ ಆಶೀರ್ವಾದವೂ ಅವನ ಮೇಲಿರಬಹುದು. ಆದರೆ ಆತ ತನ್ನ ಮನಸ್ಸಿನ ಕೃಪೆಗೆ ತಾನೇ ಪಾತ್ರನಾಗದಿದ್ದರೆ ಅವನು ನಾಶವಾದಂತೆಯೇ ಸರಿ. ತನ್ನ ಮನಸ್ಸಿನ ಮೇಲೆ ನಿಯತ್ರಣವನ್ನು ಸಾಧಿಸಿರುವುದು ಎಂದು ಅರ್ಥ. ಯಾರೂ ತನ್ನ ಮನಸ್ಸನ್ನು ಗೆದ್ದಿದ್ದಾರೋ ಅವರು ಮಾತ್ರ ಈ ಜಗತ್ತನ್ನು ಗೆಲ್ಲಬಲ್ಲರು ಎಂಬ ಸಂಸ್ಕೃತ ಸುಭಾಷಿತ ಅರ್ಥಪೂರ್ಣ ಎನಿಸುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+