Deepika Padukone: ದೀಪಿಕಾ ಪಡುಕೋಣೆಗೆ ಸಿಕ್ಕ ಮುಖದ ಕಾಂತಿ ಹೆಚ್ಚಿಸುವ ಟಿಪ್ಸ್, ಮನೆಯಲ್ಲೇ ಮಾಡಿಕೊಳ್ಳಬಹುದು!
ದೀಪಿಕಾ ಪಡುಕೋಣೆ ಈಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು. ಇತ್ತೀಚೆಗೆ ನಡೆದ ಕೆಲವು ಇವೆಂಟ್‌ಗಳಲ್ಲಿ ಭಾಗವಹಿಸಿದ್ದಾರೆ. ಇದು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಮಗುವಿನ ನಂತರವೂ ದೀಪಿಕಾ ಫಿಟ್ನೆಸ್ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಿಕೊಂಡಿರುವುದಕ್ಕೆ ಬಳಸುತ್ತಿ (ರೆಮೆಡಿ)ರುವುದೇನು ಅಂತ ಜನ ಹುಡುಕುತ್ತಿದ್ದಾರೆ.
ಈ ರೀತಿ ಇರುವಾಗಲೇ ದೀಪಿಕಾ ಅವರ ಟ್ಯಾನ್ ರಿಮೂವ್ ಮಾಡುವುದಕ್ಕೆ ತಜ್ಞರೊಬ್ಬರು ನೀಡಿದ್ದ ಟಿಪ್ಸ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಇದನ್ನು ನೀವು ಸುಲಭವಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದಕ್ಕೆ ನಾಲ್ಕು ಪದಾರ್ಥಗಳಿದ್ದರೆ ಸಾಕು. ಮುಖದ ಕಾಂತಿಯನ್ನು ನೀವು ಮನೆಯಲ್ಲೇ ಹೆಚ್ಚಿಸಿಕೊಳ್ಳಬಹುದು.

ಸ್ಟಾರ್ ನಟ / ನಟಿಯರು ಅವರ ಫಿಟ್ನೆಸ್ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಹಲವು ಟಿಪ್ಸ್‌ಗಳನ್ನು ಫಾಲೋ ಮಾಡ್ತಾರೆ. ಈ ರೀತಿ ಟಿಪ್ಸ್ ಫಾಲೋ ಮಾಡುವುದರ ಹೊರತಾಗಿಯೂ ಅವರಿಗೆ ಕೆಲವೊಮ್ಮೆ ಬಿಸಿಲು ಹಾಗೂ ಚಳಿಯ ವಾತಾವರಣದಿಂದ ಅವರ ರೆಮಿಡಿಗಳು ಕೈಕೊಡುವುದು ಇದೆ.
ಕೆಲವು ದಿನಗಳ ಹಿಂದೆ ದೀಪಿಕಾ ಅವರಿಗೂ ಇದೇ ರೀತಿ ಆಗಿತ್ತು. ಅವರ ಬೆನ್ನಿನ ಮೇಲೆ ಟ್ಯಾನ್ ಆಗಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರವಾಸಕ್ಕೆ ಹೋದಾಗ ಹಾಕಿದ್ದ ಪೋಟೋದಲ್ಲಿ ದೀಪಿಕಾ ಅವರ ಬೆನ್ನಿನ ಭಾಗ, ಕುತ್ತಿಗೆ ಹಾಗೂ ಮುಖದ ಭಾಗದಲ್ಲಿ ಟ್ಯಾನ್ (ಕಪ್ಪು ಕಲೆ) ಆಗಿತ್ತು. ಅದನ್ನು ರಿಮೂವ್ ಮಾಡುವುದಕ್ಕೆ ಇನ್ಫೂಯೆನ್ಸರ್ ಪ್ರಭಕಿರತ್ ಕೌರ್ ಅವರು ಕೊಟ್ಟ ಸಿಂಪಲ್ ಟಿಪ್ಸ್ ಸೋಷಿಯಲ್ ಮೀಡಿಯಾದಲ್ಲಿ ಇಂದಿಗೂ ಫೇಮಸ್ ಇದನ್ನು ನೀವೂ ಸಹ ಮನೆಯಲ್ಲೇ ಟ್ರೈ ಮಾಡ್ಬೋದು.

ಸಿಂಪಲ್ ಟಿಪ್ಸ್: ಕಡ್ಲೆಹಿಟ್ಟು, ಅಲೋವೆರಾ ಜೆಲ್, ಮೊಸರು ಹಾಗೂ ಕೆಂಪು ಬೇಳೆ (ಮಸೂರ್ ಬೇಳೆ)ಯನ್ನು ಮಿಶ್ರಣ ಮಾಡಿ ನೀವು ಕ್ರೀಮ್ ತಯಾರಿಸಬಹುದಾಗಿದೆ. ಕಡ್ಲೆಹಿಟ್ಟು, ಅಲೋವೆರಾ ಜೆಲ್, ಮೊಸರನ್ನು ಚೆನ್ನಾಗಿ ಕಲಿಸಿಕೊಳ್ಳಬೇಕು. ಕೆಂಪು ಬೇಳೆಯನ್ನು ಸಣ್ಣಗೆ ಮಿಕ್ಸಿಯಲ್ಲಿ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.
ಎಲ್ಲವನ್ನೂ ಸೇರಿಸಿ, 10 ನಿಮಿಷ ಬಿಡಿ. ಆ ಮೇಲೆ ಮುಖಕ್ಕೆ, ಕೈ - ಕಾಲುಗಳಿಗೆ ಹಾಗೂ ಬೆನ್ನಿನ ಭಾಗಕ್ಕೆ ಹಚ್ಚಿಕೊಳ್ಳಿ. 15ರಿಂದ 20 ನಿಮಿಷ ಆದ ಮೇಲೆ ಉಗುರು ಬೆಚ್ಚಗಿನ ಬಿಸಿ ನೀರಿನಿಂದ ತೊಳೆದುಕೊಳ್ಳಿ ಇದರಿಂದ ಕಪ್ಪು ಟ್ಯಾನ್ ಕಡಿಮೆಯಾಗುತ್ತದೆ.
ಇದು ಬೆಳ್ಳಗಾಗುವ ಅಥವಾ ಬಣ್ಣವನ್ನೇ ಬದಲಾಯಿಸಿಬಿಡುವ ಕ್ರೀಮ್ ಅಲ್ಲ. ಧೂಳಿನಲ್ಲಿ ಓಡಾಡಿ ಬಂದಾಗ ಅಥವಾ ಬಿಸಿನಲ್ಲಿ ಸುತ್ತಾಡಿ ಬಂದಾಗ ಮುಖದ ಮೇಲೆ ಆಗುವ ಕಲೆಗಳನ್ನು ತೆಗೆದುಹಾಕಲು ಇದು ಸಹಕಾರಿಯಾಗಿದೆ. ಅಲ್ಲದೆ ಮುಖದ ಕಾಂತಿಯ ಹೆಚ್ಚಳಕ್ಕೆ ಇದು ಸಹಕಾರಿಯಾಗಿದೆ.
ಈ ಟಿಪ್ಸ್ ಅನ್ನು ದೀಪಿಕಾ ಪಡುಕೋಣೆ ಅವರ ಕಾಮೆಂಟ್‌ನಲ್ಲಿ ಪ್ರಭಾವಿಯೊಬ್ಬರು ಸಜೆಸ್ಟ್ ಮಾಡಿದ ಮೇಲೆ ಸಾವಿರಾರು ಜನ ಪ್ರಯತ್ನಿಸಿದ್ದಾರೆ. ಟ್ಯಾನ್ ತೆಗೆಯಲು ಈ ಪ್ಯಾಕ್ ಅತ್ಯಂತ ಸಹಕಾರಿಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನೀವೂ ಸಹ ಒಮ್ಮೆ ಟ್ರೈಮಾಡಿ ನೋಡಿ.












Click it and Unblock the Notifications