ಮಾನಸಿಕ ಆರೋಗ್ಯಕ್ಕೆ ಆಫ್‌ಲೈನ್ ಸೇರಿದಂತೆ 5 ಸರಳ ಸೂತ್ರಗಳು!
ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಒತ್ತಡದ ನಡುವೆ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಸದೃಢವಾಗಿರುವುದು ಸಹ ಅತ್ಯವಶ್ಯಕ. ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗುವುದು ಒಂದೊಕ್ಕೊಂದು ಸಂಬಂಧವಿದೆ. ನೀವು ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾನಸಿಕವಾಗಿಯೂ ಆರೋಗ್ಯವಾಗಿ ಇರಬಹುದು. ಇಂದಿನ ಒತ್ತಡದ ಜೀವನದಲ್ಲಿ ಮಾನಸಿಕವಾಗಿ ಕೂಲ್ ಎನ್ನುವಂತಹ ಪರಿಸ್ಥಿತಿಯನ್ನು ತಂದುಕೊಳ್ಳುವುದು ಕಷ್ಟ ಅಂತ ಅನಿಸಿದರೂ ಆಗದೆ ಇರುವ ವಿಷಯವೇನು ಅಲ್ಲ. ಮಾನಸಿಕವಾಗಿ ನೀವು ಆರೋಗ್ಯವಾಗಿ ಇರಬೇಕಾದರೆ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಸಾಕು. ಆ ಸಿಂಪಲ್ ಟಿಪ್ಸ್‌ಗಳು ಯಾವುದು ಎನ್ನುವ ಮಾಹಿತಿ ಇಲ್ಲಿದೆ.
ಆರೋಗ್ಯಕರ ಜೀವನ ಶೈಲಿ: ಮಾನಸಿಕ ಆರೋಗ್ಯ ಚೆನ್ನಾಗಿ ಇರಬೇಕು ಎಂದಾದರೆ ನೀವು ಮಾಡಬೇಕಾದ ಮೊದಲ ಕೆಲಸ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು. ಆರೋಗ್ಯಕರ ಜೀವನ ಶೈಲಿ ಎನ್ನುವುದು ಮೊದಲು ಆಹಾರ ಹಾಗೂ ನಿಮ್ಮ ದೇಹಕ್ಕೆ ನೀವು ಎಷ್ಟು ಸಮಯ ವಿಶ್ರಾಂತಿ ಕೊಡುತ್ತೀರಿ ಎನ್ನುವ ಆಧಾರದ ಮೇಲೆ ನಿರ್ಧಾರ ಆಗುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡುವುದನ್ನು ಬೆಳೆಸಿಕೊಳ್ಳಿ ಕನಿಷ್ಠ ದಿನಕ್ಕೆ 30 ನಿಮಿಷವಾದರೂ ವ್ಯಾಯಾಮ ಮಾಡಿ. ಜಂಕ್ ಫೂಡ್ ಹಾಗೂ ಎಣ್ಣೆ ಹೆಚ್ಚಾಗಿ ಬಳಸುವ ಆಹಾರ ಪದಾರ್ಥಗಳನ್ನು ತಿನ್ನುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಒಳ್ಳೆಯ ನಿದ್ರೆ ಮಾಡಿ ಇವಿಷ್ಟು ಸಹ ನಿಮ್ಮ ಮಾಸಿಕ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಸಹಕರಿಸುತ್ತದೆ.
ಶಿಸ್ತು ಬೆಳೆಸಿಕೊಳ್ಳಿ: ಜೀವನದಲ್ಲಿ ಮುಖ್ಯವಾಗಿ ಶಿಸ್ತು ಬೆಳೆಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದು. ಪ್ರತಿದಿನ ಯಾವೆಲ್ಲ ಕೆಲಸವನ್ನು ಮಾಡಬೇಕು. ಸಮಯವಿದ್ದರೆ ಯಾವ ಕೆಲಸ ಮಾಡಬೇಕು ಹಾಗೂ ಕಡಿಮೆ ಸಮಯ ಇದ್ದಾಗ ಏನು ಮಾಡಬೇಕು. ಅಲ್ಲದೆ ಯಾವ ಕೆಲಸವನ್ನು ಮೊದಲು ಮಾಡಬೇಕು ಅಂತ ಪಟ್ಟಿ ಮಾಡಿಕೊಳ್ಳಿ. ಇದರಿಂದ ಗೊಂದಲ ಕಡಿಮೆಯಾಗಿ, ಮಾನಸಿಕ ನೆಮ್ಮದಿ ಕಾಪಾಡಿಕೊಳ್ಳಬಹುದು.
ಆತ್ಮೀಯರೊಂದಿಗೆ ಕಾಲ ಕಳೆಯಿರಿ: ಇದು ಅಚ್ಚರಿ ಎನಿಸಿದರೂ ನಿಜ. ಸಾಧ್ಯವಾದಷ್ಟು ನಿಮ್ಮ ಆತ್ಮೀಯರು ಹಾಗೂ ಆಪ್ತರೊಂದಿಗೆ ಕಾಲ ಕಳೆಯಿರಿ. ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಇರುವುದಕ್ಕಿಂತಲೂ ಆತ್ಮೀಯರನ್ನು ಭೇಟಿ ಮಾಡಿ ಅವರೊಂದಿಗೆ ಟೈಮ್ ಸ್ಪೆಂಡ್ ಮಾಡಿ. ನೀವು ಆತ್ಮೀಯರೊಂದಿಗೆ ಮಾತನಾಡುವುದು, ನಗುವುದು ಹಾಗೂ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸು ಹಗುರಾಗುತ್ತದೆ.
ಸೋಷಿಯಲ್ ಮೀಡಿಯಾ ಬಳಕೆ: ಮಾನಸಿಕ ಆರೋಗ್ಯ ಅಥವಾ ಮಾನಸಿಕವಾಗಿ ಸ್ಟ್ರಾಂಗ್ ಆಗುವುದಕ್ಕೆ ನೀವು ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಟೈಮ್ ಸ್ಪೆಂಡ್ ಮಾಡಬೇಕು ಹಾಗೂ ಯಾವ ವಿಷಯಗಳನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ಯೋಚನೆ ಮಾಡಿ ಹಂಚಿಕೊಳ್ಳಿ. ಬಹಳಷ್ಟು ಜನ ಆಫ್ ಲೈನ್ ಎನ್ನುವುದು ಮನಸ್ಸಿಗೆ ಹೊಸ ನೆಮ್ಮದಿ ತರುವ ವಿಷಯ ಎನ್ನುವುದಿದೆ.
ಸ್ಕ್ರೋಲ್ ಮಾಡಿಕೊಂಡು ಹೋಗುವಾಗ ಯಾವುದು ಬೇಕು, ಯಾವುದು ಬೇಡ ಎನ್ನುವುದು ನಮಗೆ ತಿಳಿಯದಂತೆ ಹಲವು ವಿಷಯಗಳನ್ನು ನಾವು ನೋಡುತ್ತೇವೆ, ಕೇಳುತ್ತೇವೆ. ಈ ಎಲ್ಲಾ ವಿಷಯಗಳು ಮನಸ್ಸಿನ ಮೇಲೆ ಪ್ರಭಾವ ಬೀರುವುದು ಸಹ ಇದೆ. ಹೀಗಾಗಿ ಸಮಯ ಸಿಕ್ಕರೆ ಆಫ್‌ಲೈನ್ ಅಂದರೆ ಸೋಷಿಯಲ್ ಮೀಡಿಯಾದಿಂದ ವಿರಾಮ ತೆಗೆದುಕೊಳ್ಳಿ.












Click it and Unblock the Notifications