ನಿಮ್ಮ ನಾಲ್ಕು ಜನ ಮಕ್ಕಳಲ್ಲಿ ನನ್ನ ಗಂಡ ಯಾರು?

ನಾಲ್ಕು ಸಹೋದರರಿದ್ದ ಮನೆಯಲ್ಲಿನ ಒಬ್ಬ ಸಹೋದರನಿಗೆ ಗುಂಡಿಯನ್ನು ಮದುವೆ ಮಾಡಿಕೊಡಲಾಯಿತು. ಹಗಲು ವೇಳೆ ಪುರುಷರೆಲ್ಲ ಹೊಲಗಳಲ್ಲಿ ಕೆಲಸ ಮಾಡುವವರು, ರಾತ್ರಿ ವೇಳೆ ಮನೆಗೆ ಊಟಕ್ಕೆ ಬರುತ್ತಿದ್ದರು.

ಇವರ ತಾಯಿ ಮತ್ತು ಸಹೋದರನ ಹೆಂಡತಿ ಎಲ್ಲರಿಗೂ ಉಣಬಡಿಸುತ್ತಿದ್ದರು. ಊಟ ಮಾಡಿದ ಮೇಲೆ, ಎಲ್ಲರೂ ಮುಸುಕಿ ಹಾಕಿಕೊಂಡು ದೀಪ ಆರಿಸಿ ಮಲಗುತ್ತಿದ್ದರು.

ಮದುವೆಯಾದ ಹದಿನೈದು ದಿನಗಳ ಬಳಿಕ ಸೊಸೆ ವಯ್ಯಾರದಿಂದ ಅತ್ತೆಯ ಬಳಿ ಬಂದು ಕೇಳುತ್ತಾಳೆ, 'ಅತ್ಯಮ್ಮ ನಿಮ್ಮ ನಾಲ್ಕು ಜನ ಮಕ್ಕಳಲ್ಲಿ ನನ್ನ ಗಂಡ ಯಾರು' ಎಂದು.

ಅದಕ್ಕೆ ಅತ್ತೆ ಉತ್ತರಿಸುತ್ತಾ, 'ಸೊಸೆ ನೀನು ಇಲ್ಲಿ ಕೇವಲ ಹದಿನೈದು ದಿನವಷ್ಟೇ ಇದ್ದೆ. ನಾನು ನನ್ನ ಗಂಡ ಮತ್ತು ಅವರ ಸಹೋದರರ ಜೊತೆ 25 ವರ್ಷ ಸಂಸಾರ ಮಾಡಿದ್ದೇನೆ. ಇದುವರೆಗೂ ನನಗೆ ನನ್ನ ಗಂಡ ಯಾರೆಂದು ತಿಳಿದಿಲ್ಲ' ಎಂದಾಗ ಸೊಸೆ ಮತ್ತಷ್ಟು ನಾಚಿ ನೀರಾಗಿದ್ದಳು.
----
ಗುಂಡ ಆಗರ್ಭ ಶ್ರೀಮಂತ, ಆದರೆ ತಿಳುವಳಿಕೆ ಕಮ್ಮಿ. ಇವನಿಗೆ ಬಹುಸಂತಾನ ನೀಡುವ ಹೆಂಡತಿಯಿದ್ದಳು. ಪ್ರತೀ ವರ್ಷ ಎನ್ನುವಂತೆ ಗುಂಡನ ಸಂತಾನ ಬೆಳೆಯುತ್ತಲೇ ಇತ್ತು.

ಮನೆಯಲ್ಲಿ ಮಕ್ಕಳ ಸೈನ್ಯ ವಿಪರೀತವಾದ ಮೇಲೆ 'ಕುಟುಂಬ ಯೋಜನೆ'ಯ ಮೊರೆ ಹೋಗಲು ಗುಂಡ ನಿರ್ಧರಿಸಿದ. ಅದರಂತೆ ನಗರದ ಕ್ಲಿನಿಕ್ ಒಂದಕ್ಕೆ ಹೋಗಿ ವೈದ್ಯರನ್ನು ಭೇಟಿಯಾದ.

ವೈದ್ಯರು ಔಷದಿ ಕೊಟ್ಟರು ವರ್ಕೌಟ್ ಆಗಲಿಲ್ಲ. ವೈದ್ಯರನ್ನು ಬದಲಾಯಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಗುಂಡ ಅಮೆರಿಕಾಕ್ಕೆ ಹೋಗಿ ತಜ್ಞ ವೈದ್ಯರ ಸಲಹೆ ಪಡೆಯಲು ಪತ್ನಿ ಸಮೇತ ಅಲ್ಲಿಗೆ ಹಾರಿದ.

ಅಲ್ಲಿನ ಹೆಸರಾಂತ ಡಾಕ್ಟರನ್ನು ಭೇಟಿಯಾಗಿ ಗುಂಡ ತನ್ನ ಸಮಸ್ಯೆಯನ್ನು ವಿವರಿಸಿದ. ಗುಂಡನ ಸಮಸ್ಯೆಯನ್ನು ಆಲಿಸಿದ ನಂತರ 'ನೀನು ಇಷ್ಟೆಲ್ಲಾ ಗರ್ಭನಿರೋಧಕ ಔಷದಗಳನ್ನು ಬಳಸಿಯೂ ವಿಫಲವಾಗಿದೆ ಎಂದ ಮೇಲೆ ನಿನ್ನ ಹೆಂಡತಿಯಿಂದ ನೀನು ದೂರವಿರುವುದೇ ಲೇಸು' ಎಂದು ವೈದ್ಯರು ಸಲಹೆ ನೀಡಿದರು.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಗುಂಡ, ಡಾಕ್ಟ್ರೇ, ನಾನದನ್ನು ಪ್ರಯತ್ನಿಸಿ ನೋಡಿಯಾಗಿದೆ ಎಂದಾಗ ವೈದ್ಯ ಮಹಾಶಯ ಸುಸ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+