ಹೆಂಡತಿ ವಿಷಯದಲ್ಲಿ ಬದಲಾಯಿತಲ್ಲಾ ಭಕ್ತಾ ನಿನ್ನ ನಿಯತ್ತು!
ಮರ ಕಡಿಯುವ ಬಡವನೊಬ್ಬ ಆಯಾಸಗೊಂಡು ಬಾವಿ ಬದಿಯಲ್ಲಿ ಕುಳಿತ, ಆಗ ಅಕಸ್ಮತ್ತಾಗಿ ಅವನ ಕೊಡಲಿ ಜಾರಿ ಬಾವಿಗೆ ಬಿತ್ತು. ಬೇಜಾರಾಗಿ ದೇವರನ್ನು ಬೇಡಿಕೊಂಡ.
ದೇವರು ಪ್ರತ್ಯಕ್ಷನಾಗಿ ಒಂದು ವಜ್ರದ ಕೊಡಲಿ ತೋರಿಸಿ "ಇದೇನಾ ನಿನ್ನ ಕೊಡಲಿ" ಎಂದ,
'ಅಲ್ಲ' ಎಂದ ಬಡವ, ನಂತರ ಚಿನ್ನದ ಕೊಡಲಿ ತೋರಿಸಿ "ಇದೇನಾ ನಿನ್ನ ಕೊಡಲಿ" ಎಂದ,
'ಅಲ್ಲ' ಎಂದ ಬಡವ, ನಂತರ ಹೀಗೆ ಬೆಳ್ಳಿ, ತಾಮ್ರದ ನಂತರ ಅವನ ಕಬ್ಬಿಣದ ಕೊಡಲಿಯನ್ನೇ ತೋರಿಸಿದಾಗ "ಇದು ನನ್ನದು" ಎಂದ.
ದೇವರು "ಭಕ್ತಾ ನಿನ್ನ ಭಕ್ತಿಗೆ ಮೆಚ್ಚಿದೆ, ಎಲ್ಲಾ ಕೊಡಲಿಗಳನ್ನೂ ನೀನೇ ಇಟ್ಟುಕೊ" ಎಂದು ಹೇಳಿ ಮಾಯವಾದ. (ಕೊಡುವುದಷ್ಟೇ ನನ್ನ ಕೆಲಸ, ಮಿಕ್ಕಿದ್ದು ಮೋದಿಯನ್ನು ಕೇಳು)
ಅದೇ ವ್ಯಕ್ತಿ ಮತ್ತೊಂದು ದಿನ ಅಡವಿಗೆ ಹೊರಟ. ಈ ಬಾರಿ ಹೆಂಡತಿ ಕೂಡ ಇದ್ದಳು, ಈ ಬಾರಿ ಕೊಡಲಿಯ ಬದಲು ಹೆಂಡತಿ ಜಾರಿ ಬಾವಿಗೆ ಬಿದ್ದಳು.
ಬಡವ ಮತ್ತೆ ದೇವರನ್ನು ನೆನೆದ, ದೇವರು ಪ್ರತ್ಯಕ್ಷನಾಗಿ ಮಲ್ಲಿಕಾ ಶೇರಾವತಳನ್ನು ತೋರಿಸಿ ಕೇಳಿದ, "ಇವಳೇನಾ ನಿನ್ನ ಹೆಂಡ್ತಿ", ಬಡವ ಒಮ್ಮೇಲೆ, ಹೌದು ದೇವ್ರೇ.. ಹೌದು.. ಇವಳೇ ನನ್ನ ಹೆಂಡತಿ ಅಂದುಬಿಟ್ಟ,
ದೇವರಿಗೆ ಸಿಟ್ಟುಬಂದು "ಕೊಡಲಿ ವಿಷಯದಲ್ಲಿ ಇದ್ದ ನಿಯತ್ತು ಹೆಂಡ್ತಿ ವಿಷಯಕ್ಕೆ ಬದಲಾಯಿತಲ್ಲ ಭಕ್ತಾ" ? ಎಂದ.
ಅದಕ್ಕೆ ಬಡವ ಹೇಳಿದ ಅದು ಹಂಗಲ್ಲ ದೇವ್ರೇ.. ನಾನೀಗ "ಈಕೆ ನನ್ನ ಹೆಂಡ್ತಿ ಅಲ್ಲ" ಅಂತೀನಿ, ನೀನು ಮತ್ತೆ ಹೋಗಿ ಪ್ರಿಯಾಂಕಾ ಚೋಪ್ರಾ, ರಾಖಿ ಸಾವಂತ್ , ಬಿಪಾಶಾ ಬಸು, ಕರೀನಾ ಕಪೂರ್ ಹೀಗೆ ಎಲ್ಲರನ್ನು ಕರ್ಕೊಂಡು ಇವಳಾ ನಿನ್ನ ಹೆಂಡ್ತೀ ಎಂದು ಕೇಳ್ತಿಯಾ, ನಾನು ಅಲ್ಲ ಅಲ್ಲ.. ಅಂತಾ ಹೇಳ್ತಾ ಹೋಗ್ತೀನಿ.
ಕೊನೆಗೆ ನನ್ನ ಹೆಂಡ್ತಿ ಕರ್ಕೊಂಡು ಬಂದಾಗ "ಹೌದು ಇವಳೇ" ಅಂತೀನಿ, ಆಮೇಲೆ ನೀನು "ಭಕ್ತಾ ನಿನ್ನ ಭಕ್ತಿಗೆ ಮೆಚ್ಚಿದೆ ಅಂತ ಹೇಳಿ ಎಲ್ಲರನ್ನೂ ಕರ್ಕೋಂಡು ಹೋಗು.. ಅಂದ್ರೆ ಈ ದುಬಾರಿ ಯುಗದಲ್ಲಿ ಅವರನ್ನೆಲ್ಲ ನಾನೆಂಗೆ ಸಾಕಲಿ ಎಂದಾಗ ದೇವರು ಮತ್ತೆ ಮಾಯವಾದ (ವಾಟ್ಸಾಪ್ ನಲ್ಲಿ ಬಂದಿದ್ದು).












Click it and Unblock the Notifications