159 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್‌ಸಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 25 : ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ 'ಎ' 'ಬಿ' ತಾಂತ್ರಿಕ/ತಾಂತ್ರಿಕೇತರ ಹಾಗೂ ಗ್ರೂಪ್ 'ಸಿ' ತಾಂತ್ರಿಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಸೆ.22 ಕೊನೆಯ ದಿನವಾಗಿದೆ.

ಒಟ್ಟು 159 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್, ಕೈಮಗ್ಗ ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳನ್ನು ಸ್ಮರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತದೆ.[ಕಾರವಾರದ ಕಿಮ್ಸ್ ನಲ್ಲಿ ಬೋಧಕರ ಹುದ್ದೆ ಖಾಲಿ ಇದೆ]

kpsc

ಆಗಸ್ಟ್ 24ರ ಬುಧವಾರದಿಂದಲೇ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 22, 2016 ರಾತ್ರಿ 11.45. ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ ಮತ್ತು ಅರ್ಜಿಗಳ ವಿವರ ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.[KPSC ಸಂದರ್ಶನದ ಅನುಪಾತ 1:5ಕ್ಕೆ ಹೆಚ್ಚಳ]

ಅರ್ಜಿ ಶುಲ್ಕ : ಸಾಮಾನ್ಯ ಅರ್ಹತೆ, ಪ್ರವರ್ಗ 2 (ಎ), 2 (ಬಿ), 3 (ಎ), 3 (ಬಿ) ಸೇರಿದ ಅಭ್ಯರ್ಥಿಗಳಿಗೆ 300 ರೂ., ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 25. ಅರ್ಜಿ ಭರ್ತಿ ಮಾಡಿದ ನಂತರ ಶುಲ್ಕವನ್ನು ಎಲೆಕ್ಟ್ರಾನಿಕ್ ಅಂಚೆ ಕಚೇರಿಗಳಲ್ಲಿ ಪಾವತಿ ಮಾಡಬಹುದು.[ನೇಮಕಾತಿ ಆದೇಶ, ಅರ್ಜಿ ಸಲ್ಲಿಸಲು ವಿಳಾಸ]

ಹುದ್ದೆಗಳ ವಿವರ : ಮೀನುಗಾರಿಕಾ ಇಲಾಖೆಯಲ್ಲಿ 53 ಸಹಾಯಕ ನಿರ್ದೇಶಕರು, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 20 ಪ್ರಾಂಶುಪಾಲರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 9 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ 25 ಇಂಜಿನಿಯರ್ ಹುದ್ದೆಗಳಿವೆ. 55 ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕ ಮೀಸಲು ಕೋಟಾದಡಿ ತುಂಬಲಾಗುತ್ತದೆ.

ಇಂಗ್ಲಿಶ್ ನಲ್ಲಿ ಓದಿ

ನೇಮಕಾತಿ ಆದೇಶ ಇಲ್ಲಿದೆ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State Public Service Commission (KPSC) invited application for Group-A , Group-B and Group-C Technical/Non-Technical posts. September 22, 2016 last date for submit application.
Please Wait while comments are loading...