ಬೆಂಗಳೂರಿನಲ್ಲಿ ಕೆಲಸ ಖಾಲಿ ಇದೆ: ಆಗಸ್ಟ್ 26ರೊಳಗೆ ಅರ್ಜಿ ಹಾಕಿ

ಬೆಂಗಳೂರು, ಆಗಸ್ಟ್‌ 19: ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ. ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಕ್ಕೆ ಸಿಬ್ಬಂದಿ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಖುದ್ದಾಗಿ ಅಥವಾ ಅಂಚೆ ಮೂಲಕ ಆಗಸ್ಟ್ 26ರ ಸಂಜೆ 5ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಹುದ್ದೆ ಮತ್ತು ಅರ್ಹತೆಯ ವಿವಿರವಾದ ಮಾಹಿತಿ ಇಲ್ಲಿದೆ.

ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರಕ್ಕೆ ಗೌರವ ಧನದ ಆಧಾರದ ಮೇಲೆ ಸಂದರ್ಶನದ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.

Jobs In Bengaluru Apply For Various Posts Educational Qualification

ಹುದ್ದೆಗಳ ವಿವರ ಹೀಗಿದೆ: ಕಂಪ್ಯೂಟರ್ ಆಪರೇಟರ್‌ ಹುದ್ದೆಗೆ ಪಿಯುಸಿ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಫಿಜಿಯೋಥೆರಪಿಸ್ಟ್/ ಆಕ್ಯುಪೇಶನಲ್ ಥೆರಪಿಸ್ಟ್ (ಪೂರ್ಣಾವಧಿ) ಹುದ್ದೆಗೆ ಫಿಜಿಯೋಥೆರಪಿ ಪದವಿ ಹೊಂದಿರಬೇಕು. ಆಕ್ಯುಪೇಶನಲ್ ಥೆರಪಿ ಪದವಿ ನಿಗದಿ ಮಾಡಲಾಗಿದೆ.

ಲೆದರ್ ವರ್ಕರ್/ ಶೂ ಮೇಕರ್ ಹುದ್ದೆಗೆ ಲೆದರ್ ವರ್ಕ್ ಮತ್ತು ಶೂ ಮೇಕಿಂಗ್‌ನಲ್ಲಿ 2 ವರ್ಷ ಅನುಭವ ಮತ್ತು ಪ್ರಮಾಣ ಪತ್ರವನ್ನು ಹೊಂದಿರಬೇಕು. ಸ್ಪೀಚ್ ಥೆರಪಿಸ್ಟ್ ಮತ್ತು ಆಡಿಯಾಲಿಜಿಸ್ಟ್ ಹುದ್ದೆಗೆ ಭಾಷಣ ಮತ್ತು ಶ್ರವಣಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದಿರಬೇಕು.

ಮೊಬಿಲಿಟಿ ಇನ್ಸ್ ಟ್ರಕ್ಟರ್ ಹುದ್ದೆಗೆ ಸರ್ಟಿಫಿಕೇಟ್ ಕೋರ್ಸ್ ಇನ್ ಓ&ಎಮ್. ಇಯರ್ ಮೊಲ್ಡ್ ಟೆಕ್ನಿಷಿಯನ್ ಹುದ್ದೆಗೆ ಇಯರ್ ಮೊಲ್ಡ್ ಟೆಕ್ನಾಲಕಿಯಲ್ಲಿ ಸರ್ಟಿಫಿಕೇಟ್ ಕೋರ್ಸ್ ಪೂರ್ಣಗೊಳಿಸಿರಬೇಕು.

ಕೀಲು ಮತ್ತು ಮೂಳೆ ತಜ್ಞರ ಹುದ್ದೆಗೆ ಆರ್ಥೋಪೆಡಿಕ್ಸ್ ನಲ್ಲಿ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಪದವಿ ಹೊಂದಿರಬೇಕು. ಆಪ್ಥಮಾಲಜಿಸ್ಟ್ ಹುದ್ದೆಗೆ ಆಪ್ಥಮಾಲಜೀಯಲ್ಲಿ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಪದವಿ ಹೊಂದಿರಬೇಕು.

ಇ.ಎನ್.ಟಿ ಸ್ಪೆಷಲಿಸ್ಟ್ ಹುದ್ದೆಗೆ ಇ.ಎನ್.ಟಿಯಲ್ಲಿ ಸ್ನಾತಕೋತ್ತರ ಅಥವಾ ಡಿಪ್ಲೊಮಾ ಪದವಿ ಪಡೆದಿರಬೇಕು. ಸೈಕಿಯಾಟ್ರಿಸ್ಟ್ ಹುದ್ದೆಗ ಸ್ನಾತಕೋತ್ತರ ಪದವಿ ಅಥವಾ ಸೈಕಿಯಾಟ್ರಿ ಮೆಡಿಸಿನ್ ವ್ಯಾಸಂಗ ಮಾಡಿರಬೇಕು. ಕೃತಕಾಂಗ ಜೋಡಣೆ ಪಿ ಮತ್ತು ಓ ಅಭಿಯಂತಕರ ಹುದ್ದೆಗೆ ಪಿ&ಓ ಇಂಜಿನಿಯರ್ ಪದವಿ/ ಡಿಪ್ಲೊಮಾ 2 ರಿಂದ 5 ವರ್ಷ ಅನುಭವ ಹೊಂದಿರಬೇಕು.

ಅಭ್ಯರ್ಥಿಗಳು 18-45 ವರ್ಷಗಳ ವಯೋಮಿತಿಯಲ್ಲಿರಬೇಕು. ಅರ್ಹ ಆಭ್ಯರ್ಥಿಗಳು ಹುದ್ದೆ ಮತ್ತು ವಿದ್ಯಾರ್ಹತೆಗನುಗುಣವಾಗಿ ಸ್ವವಿವರದೊಂದಿಗೆ ಅರ್ಜಿ ತಯಾರಿಸಿ ಅಗತ್ಯ ದಾಖಲೆಗಳೊಂದಿಗೆ ಅಧ್ಯಕ್ಷರು/ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ರವಿ ಕಿರ್ಲೋಸ್ಕರ್ ಆಸ್ಪತ್ರೆ ಆವರಣ, ಪೀಣ್ಯ 1ನೇ ಹಂತ ಬೆಂಗಳೂರು ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8431308600, 9164496483 ಸಂಪರ್ಕಿಸಬಹುದು.

ನೇಮಕಾತಿಗೆ ಅರ್ಜಿ ಆಹ್ವಾನ: ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆಯಡಿ ಬೆಂಗಳೂರು ಜಿಲ್ಲೆಯಲ್ಲಿ ನೇರಗುತ್ತಿಗೆ ಆಧಾರದ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೊಸದಾಗಿ ಸೃಜಿಸಿರುವ ಯೋಜನಾ ನಿರ್ವಹಣಾ ತಂಡ ಜಿಲ್ಲಾ ಮಟ್ಟದ ಸಲಹೆಗಾರರು-1 ಹುದ್ದೆ ಮತ್ತು ತಾಂತ್ರಿಕ ಸಹಾಯಕರು - 2 ಹುದ್ದೆಗಳು ಹೊರಗುತ್ತಿಗೆ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ಮಟ್ಟದ ಸಲಹೆಗಾರರ ಹದ್ದೆಗೆ- BSC Agricultural ಪದವಿ ಹೊಂದಿದ್ದು, Agronomy/ soil Science / plant protection or Any Other Agricultural Subjects with Computer knowledge ಹಾಗೂ ತಾಂತ್ರಿಕ ಸಹಾಯಕರು ಹುದ್ದೆಗೆ BSC Agriculture ಪದವಿ with Computer knowledge ಹೊಂದಿರಬೇಕು.

ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಆಗಸ್ಟ್ 29 ರೊಳಗಾಗಿ ಅವಧಿಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಎಸ್ ಕರಿಯಪ್ಪ ರಸ್ತೆ (ಕನಕಪುರ ರಸ್ತೆ) ಬನಶಂಕರಿ, ಬೆಂಗಳೂರು- 560070 ಇಲ್ಲಿಗೆ ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+