ಕನ್ನಡಿಗರಿಗೆ ಗುಡ್ ನ್ಯೂಸ್: ಬ್ಯಾಂಕ್‌ನಲ್ಲಿ ಮಾಸಿಕ ₹80,000 ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಅಕ್ಟೋಬರ್, 25: ಕರ್ನಾಟಕದಲ್ಲಿ ಬೇರೆ ರಾಜ್ಯದವರ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಅದರಲ್ಲೂ ಉದ್ಯೋಗದ ವಿಚಾರಕ್ಕೆ ಬಂದರೆ, ಮೊದಲು ಇಲ್ಲಿನವರಿಗಿಂತ ಹೊರ ರಾಜ್ಯದವರಿಗೆ ಮೊದಲು ಆದ್ಯತೆ ಕೊಡುವುದನ್ನು ಕಾಣಬಹುದಾಗಿದೆ. ಆದರೆ, ಇದೀಗ ಯೂನಿಯನ್ ಬ್ಯಾಂಕ್ ಕನ್ನಡಿಗರಿಗಾಗಿಯೇ ಗುಡ್ ನ್ಯೂಸ್‌ವೊಂದನ್ನು ನೀಡಿದೆ.
ಬಹುತೇಕ ಪರಭಾಷಿಕರು ಐಟಿ-ಬಿಟಿ, ಬ್ಯಾಂಕ್‌ಗಳಲ್ಲಿ ತಮ್ಮ ಹಿಡಿತವನ್ನೇ ಸಾಧಿಸಿ ಉದ್ಯೋಗ ನೀಡುವ ವಿಚಾರದಲ್ಲಿ ಕನ್ನಡಿಗರನ್ನು ಕಡೆಗಣಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರ ನಡುವೆ ಇದೀಗ ಕನ್ನಡಿಗರಿಗಾಗಿಯೇ ಯೂನಿಯನ್ ಬ್ಯಾಂಕ್ ಅದಿಕಾರಿಗಳು 300 ಹುದ್ದೆಗಳನ್ನು ಕರೆದಿದ್ದಾರೆ. ಅಲ್ಲದೆ, ದೊಡ್ಡ ಮೊತ್ತದಲ್ಲಿ ಸಂಬಳವನ್ನು ನೀಡುತ್ತೇವೆ ಅಂತಲೂ ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

"ಬ್ಯಾಂಕ್‌ನಲ್ಲಿ ಕನ್ನಡಿಗರೇ ಇಲ್ಲ ಅನ್ನುವ ಕೊರಗು ಕೊನೇ ಆಗುವ ಕಾಲ ಬಂದಿದೆ. ಯೂನಿಯನ್ ಬ್ಯಾಂಕ್‌ನವರು ಎಲ್‌ಬಿಓ ಅಂದರೆ ಲೋಕನ್ ಬ್ಯಾಂಕ್ ಆಫಿಸರ್ಸ್ ಅಂತಾ 300 ಹುದ್ದೆಗಳನ್ನು ಕನ್ನಡಿಗರಿಗಾಗಿ ಮಾತ್ರ ಕರೆದಿದ್ದಾರೆ. ಈ ವಿಡಿಯೋದಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ," ಎಂದು ಧರ್ಮೇಂದ್ರಕುಮಾರ್ ಅರೇನಹಳ್ಳಿ ಅವರು ವಿಡಿಯೋವೊಂದರಲ್ಲಿ ಮಾಹಿತಿ ನೀಡಿದ್ದಾರೆ.
"ಕನ್ನಡ ಓದುವುಕ್ಕೆ, ಬರಿಯುವುದಕ್ಕೆ, ಮಾತನಾಡಲು ಬರಬೇಕು. ಅಂತಹವರಿಗೆ ಮಾತ್ರ ಈ ಹುದ್ದೆ ನೀಡಲಾಗುತ್ತದೆ. ಇಂದಿನಿಂದ ಈ ಲಿಂಕ್ ಓಪನ್ ಆಗಿದ್ದು, ಕನ್ನಡಿಗರು ಇದನ್ನು ಸದುಪಯೋಗಪಡಿಸಿಕೊಳ್ಳಿ," ಎಂದು ಧರ್ಮೇಂದ್ರಕುಮಾರ್ ಅರೇನಹಳ್ಳಿ ಅವರು ವಿಡಿಯೋವೊಂದರಲ್ಲಿ ಮಾಹಿತಿ ನೀಡಿದ್ದಾರೆ.
"ತಿಂಗಳಿಗೆ 49,000 ರೂಪಾಯಿ ಆರಂಭಿಕ ಸಂಬಳ ಅಲ್ಲ.. 70,000-80,000 ರೂಪಾಯಿ ಸಂಬಳ ಸಿಗುತ್ತದೆ ಅಂತಾ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಅವರೇ ಹೇಳಿದ್ದಾರೆ. ಯಾವುದೇ ಡಿಗ್ರಿ ಪಾಸದವರು ಇದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಕನ್ನಡಿಗರೇ," ಅಂತಾ ಮನವಿ ಮಾಡಿದ್ದಾರೆ.
ಅರ್ಜಿ ಹಾಕಿ... ಬ್ಯಾಂಕ್ ನಲ್ಲಿ ಹುದ್ದೆ ಖಾಲಿ ಇದೆ...
— ಕನ್ನಡಿಗ ದೇವರಾಜ್ (@sgowda79) October 25, 2024
ಕನ್ನಡಿಗರಿಗಾಗಿ ಮಾತ್ರಾ... pic.twitter.com/0kK9nv7NNc
ಇನ್ನು ಬೇರೆ ರಾಜ್ಯದಿಂದ ಬಂದಂತಹವರು ಕರ್ನಾಟಕದ ಅನ್ನ ತಿಂದು ಕನ್ನಡಿಗರಿಗೇ ದ್ರೋಹ ಬಗೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ.ಅದರಲ್ಲೂ ಪ್ರೈವೇಟ್ ಸೆಕ್ಟರ್‌ಗಳಲ್ಲಿ ಇಂತಹ ಘಟನೆಗಳು ಈಗಲೂ ಮುಂದುವರೆದಿವೆ.












Click it and Unblock the Notifications