ಜನತಾ ದರ್ಶನದ ಅರ್ಜಿದಾರರಿಗೆಂದೇ ವಿಶೇಷ ಉದ್ಯೋಗ ಮೇಳ
Recommended Video

ಬೆಂಗಳೂರು,ಸೆ.26: ಜನತಾ ದರ್ಶನದ ಸಮಯದಲ್ಲಿ ಉದ್ಯೋಗಕ್ಕಾಗಿ ಮನವಿ ಮಾಡಿರುವ ಅರ್ಜಿದಾರರಿಗಾಗಿಯೇ ವಿಶೇಷ ಉದ್ಯೋಗ ಮೇಳ ಬೆಂಗಳೂರಲ್ಲಿ ನಡೆಯುತ್ತಿದೆ.
ಸೆ.29, 30ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆಯಲಿದ್ದು ರಾಜ್ಯದ ವಿವಿಧ ಉದ್ಯೋಗದಾತ ಕಂಪನಿಗಳು ಭಾಗವಹಿಸುತ್ತಿವೆ.
ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಪ್ರತಿ ಶನಿವಾರ ಜನತಾ ದರ್ಶನವನ್ನು ನಡೆಸುತ್ತಿದ್ದು ಸಾವಿರಾರು ಮಂದಿ ನಿರುದ್ಯೋಗಿಗಳು ಬಂದು ಕೆಲಸ ಕೊಡಿಸುವಂತೆ ಮನಿ ಮಾಡುತ್ತಿದ್ದರು.

ಇದೀಗ ಸೆ.29,30ರಂದು ನಡೆಯುತ್ತಿರುವ ಉದ್ಯೋಗ ಮೇಳದಲ್ಲಿ ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿದವರಿಗಾಗಿಯೇ ವಿಶೇಷ ಆಹ್ವಾನ ನೀಡಲಾಗಿದೆ. ಜನತಾ ದರ್ಶನ ಅರ್ಜಿಯ ಸ್ವೀಕೃತಿ, ಸ್ವವಿವರ ಮತ್ತು ಅಗತ್ಯ ದಾಖಲೆಗಳೊಂದಿಗೆ ಅಂದು ಹಾಜರಾಗಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ. ಹೆಚಚ್ಇನ ಮಾಹಿತಿಗಾಗಿ 080-44554455 ಸಂಪರ್ಕಿಸಬಹುದು.
ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೇ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿದ್ದರು, ಇದೀಗ ಮತ್ತೊಮ್ಮೆ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಆರಂಭಿಸಿದ್ದಾರೆ. ಇದರಿಂದ ಸಾವಿರಾರು ಜನರ ಸಂಕಷ್ಟಗಳು ದೂರವಾಗುತ್ತಿವೆ.












Click it and Unblock the Notifications