ಬಿಎಸ್ಎನ್ಎಲ್ ನಲ್ಲಿ ಜ್ಯೂ. ಟೆಲಿಕಾಂ ಆಫೀಸರ್ ಹುದ್ದೆಗಳಿವೆ
ಬೆಂಗಳೂರು, ಫೆಬ್ರವರಿ 05: ಭಾರತ್ ಸಂಚಾರ್ ನಿಗಮ್ ಲಿಮೆಟೆಡ್ (ಬಿಎಸ್ಎನ್ಎಲ್) 2019ನೇ ಸಾಲಿನ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಸುಮಾರು 198 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಜ್ಯೂನಿಯರ್ ಟೆಲಿಕಾಂ(ಜೆಟಿಒ) ಅಧಿಕಾರಿ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಫೆಬ್ರವರಿ 02, 2019 ರಿಂದ ಮಾರ್ಚ್ 12, 2019 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಭಾರತ್ ಸಂಚಾರ್ ನಿಗಮ್ ಲಿಮೆಟೆಡ್ (ಬಿಎಸ್ಎನ್ಎಲ್)
ಒಟ್ಟು ಹುದ್ದೆ : 198
ಹುದ್ದೆ : ಜ್ಯೂನಿಯರ್ ಟೆಲಿಕಾಂ ಆಫೀಸರ್(ಜೆಟಿಒ)
ಹುದ್ದೆ ಎಲ್ಲಿ? : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 12, 2019.

ವಿದ್ಯಾರ್ಹತೆ: ಬಿಇ/ಬಿಟೆಕ್ ಅಥವಾ ತತ್ಸಮಾನ ಪದವಿಯನ್ನು ಟೆಲಿಕಾಂ/ಇಲೆಕ್ಟ್ರಾನಿಕ್ಸ್/ರೇಡಿಯೋ/ಕಂಪ್ಯೂಟರ್/ಎಲೆಕ್ಟ್ರಿಕಲ್/ ಮಾಹಿತಿ ತಂತ್ರಜ್ಞಾನ/ ಇನ್ಸ್ಟ್ರುಮೆಂಟೆಷನ್ ಇಂಜಿನಿಯರಿಂಗ್ ಅಥವಾ ಎಂಎಸ್ಸಿ (ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ಸ್ ಸೈನ್ಸ್)
ಸಂಬಳ ನಿರೀಕ್ಷೆ: 16,4000 ರಿಂದ 40,500/- ಪ್ರತಿ ತಿಂಗಳಿಗೆ
ವಯೋಮಿತಿ: 18 ರಿಂದ 30 ವರ್ಷ ಸಾಮಾನ್ಯ ಅಭ್ಯರ್ಥಿಗಳಿಗೆ, ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಿನಾಯಿತಿ ಇದೆ.
ನೇಮಕಾತಿ ಪ್ರಕ್ರಿಯೆ: ಗೇಟ್ ಪರೀಕ್ಷೆ 2017 ಫಲಿತಾಂಶದ ಮೇಲೆ ನಿರ್ಧರಿಸಲಾಗುತ್ತದೆ.
ಅರ್ಜಿ ಶುಲ್ಕ: ಜ್ಯೂನಿಯರ್ ಟೆಲಿಕಾಂ ಅಭ್ಯರ್ಥಿಗಳಿಗೆ 500 ರುಪಾಯಿ, ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ 300 ರುಪಾಯಿ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಮುಖ್ಯ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನ : ಫೆಬ್ರವರಿ 11, 2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಮಾರ್ಚ್ 12, 2017 ತನಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ, ಇನ್ನಿತರ ವಿವರಗಳಿಗೆ ಕ್ಲಿಕ್ ಮಾಡಿ












Click it and Unblock the Notifications