ಮೈಸೂರಿನಲ್ಲಿ ವಕೀಲರ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ವಿವರ
ಮೈಸೂರು, ಸೆಪ್ಟೆಂಬರ್ 26: ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ 'ಕಾನೂನು ನೆರವು ರಕ್ಷಣಾ ಸಲಹೆ ವ್ಯವಸ್ಥೆ(LADCS, Legal Aid Defense Counsel System) ಕಛೇರಿಯಲ್ಲಿ ಖಾಲಿ ಇರುವ ವಕೀಲರ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ವಕೀಲ ವೃತ್ತಿಯಲ್ಲಿ ಆಸಕ್ತಿ ಹೊಂದಿರುವವರು ಹಾಗೂ ಅರ್ಹರು ಈ ಕೆಳಗಿನ ಮಾಹಿತಿಯನ್ನು ಅರಿತು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ಉಪ ಕಾನೂನು ನೆರವು ರಕ್ಷಣಾ ಸಲಹೆಗಾರ(1) ಹುದ್ದೆಗೆ ಕನಿಷ್ಠ 7 ವರ್ಷಗಳ ಕಾಲ ಕ್ರಿಮಿನಲ್ ಕಾನೂನಿನಲ್ಲಿ ಅಭ್ಯಾಸ, ಕ್ರಿಮಿನಲ್ ಕಾನೂನಿನ ಅತ್ಯುತ್ತಮ ತಿಳುವಳಿಕೆ, ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯಗಳು, ಕಾನೂನು ಸಂಶೋಧನೆಯಲ್ಲಿ ಕೌಶಲ್ಯ, ರಕ್ಷಣಾ ಸಲಹೆಗಾರರ ನೈತಿಕ ಕರ್ತವ್ಯಗಳ ಸಂಪೂರ್ಣ ತಿಳುವಳಿಕೆ ಹೊಂದಿರಬೇಕು.

ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ, ಸೆಷನ್ಸ್ ನ್ಯಾಯಾಲಯಗಳಲ್ಲಿ ಕನಿಷ್ಠ 20 ಕ್ರಿಮಿನಲ್ ವಿಚಾರಣೆಗಳನ್ನು ನಿರ್ವಹಿಸಿರಬೇಕು. ಐಟಿ ಜ್ಞಾನವನ್ನು ಹೊಂದಿರಬೇಕು ಮತ್ತು ಸಹಾಯಕ ಕಾನೂನು ನೆರವು ರಕ್ಷಣಾ ಸಲಹೆಗಾರ(4) ಹುದ್ದೆಗಳಿಗೆ ಕ್ರಿಮಿನಲ್ ಕಾನೂನಿನಲ್ಲಿ 3 ವರ್ಷಗಳ ಅಭ್ಯಾಸ, ಉತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು.
ರಕ್ಷಣಾ ಸಲಹೆಗಾರರ ನೈತಿಕ ಕರ್ತವ್ಯಗಳ ಸಂಪೂರ್ಣ ತಿಳುವಳಿಕೆ, ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯ, ಅತ್ಯುತ್ತಮ ಬರವಣಿಗೆ ಮತ್ತು ಸಂಶೋಧನಾ ಕೌಶಲ್ಯಗಳು, ಕೆಲಸದಲ್ಲಿ ಐಟಿ ಜ್ಞಾನವನ್ನು ಹೊಂದಿರಬೇಕು.
ಅರ್ಹ ವಕೀಲರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಸಂಬoಧಪಟ್ಟ ದಾಖಲಾತಿಗಳೊಂದಿಗೆ ಅಕ್ಟೋಬರ್ 03 ರೊಳಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2330130 ಮತ್ತು [email protected] ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಯಾದ ದಿನೇಶ್. ಬಿ.ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications