ಬೆಳಗಾವಿ: ಅಪರ ಸರ್ಕಾರಿ ವಕೀಲರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ

ಬೆಳಗಾವಿ, ಜುಲೈ, 25: ಬೆಳಗಾವಿ, ರಾಮದುರ್ಗ, ರಾಯಬಾಗ, ಹುಕ್ಕೇರಿ, ಬೈಲಹೊಂಗಲ ಹಾಗೂ ಸವದತ್ತಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪರ ಸರ್ಕಾರಿ ವಕೀಲರ ಹುದ್ದೆ ಅವಧಿ ಮುಕ್ತಾಯವಾಗಿದೆ. ಈ ಹಿನ್ನೆಲೆ ಸದರಿ ಹುದ್ದೆಗಳ ಭರ್ತಿಗೆ 7 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ಅರ್ಹ ವಕೀಲರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಕೀಲರು, ತಮ್ಮ ಹೆಸರು, ವಿದ್ಯಾರ್ಹತೆ, ಜಾತಿ, ವಯಸ್ಸು ಅನುಭವ ಮುಂತಾದ ವೈಯಕ್ತಿಕ ಪೂರ್ಣ ವಿವರಗಳೊಂದಿಗೆ ಅವಶ್ಯಕ ದೃಢೀಕರಣ ನಕಲುಗಳನ್ನು ಲಗತ್ತಿಸಿ ಆಗಸ್ಟ್ 14, 2024ರೊಳಗಾಗಿ ಆಡಳಿತ ಶಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಳಗಾವಿ ಇಲ್ಲಿಗೆ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದೆ.

Application Invitation for Additional Government Advocate post in belagavi district

ನಿಗದಿತ ಅವಧಿಯ ನಂತರ ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

₹2,00,000 ಸಂಬಳದ ಹುದ್ದೆಗೆ ಅರ್ಜಿ ಆಹ್ವಾನ: ಬೆಂಗಳೂರು ಜೀವನಾಡಿ ಸಾರಿಗೆಯಲ್ಲೊಂದಾದ ನಮ್ಮ ಮೆಟ್ರೋ ಉದ್ಯೋಗವಕಾಶಗಳನ್ನು ಒದಗಿಸುತ್ತಲೇ ಬಂದಿದೆ. ಹಾಗೆಯೇ ಇದೀಗ ಬಿಎಂಆರ್‌ಸಿಎಲ್‌ ಸಂಸ್ಥೆಯಲ್ಲಿ ಒಟ್ಟು 11 ಉದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಆಹುದ್ದೆಗಳು ಯಾವುವು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮಾಸಿಕ ವೇತನದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಬಿಎಂಆರ್‌ಸಿಎಲ್‌ ಸಂಸ್ಥೆಯಲ್ಲಿ ಖಾಲಿಯಿರುವ ಮುಖ್ಯ ಎಂಜಿನಿಯರ್, ಮುಖ್ಯ ಡೆಪ್ಯುಟಿ ಎಂಜಿನಿಯರ್/ನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್/ವಿಭಾಗ ಎಂಜಿನಿಯರ್‌ನ ಒಟ್ಟು 11 ಹುದ್ದೆಗಳ ಭರ್ತಿ ಮಾಡಲು ಸಂಸ್ಥೆಯು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಬೆಂಗಳೂರು ಮೆಟ್ರೋ ರೈಲು ನೇಮಕಾತಿ 2024 ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜುಲೈ 31 ಆಗಿದ್ದು, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.

ಹುದ್ದೆಯ ವಿವರ: ಸಲಹೆಗಾರ/ಮುಖ್ಯ ಎಂಜಿನಿಯರ್ (ಸಿವಿಲ್), ಮುಖ್ಯ ಡೆಪ್ಯುಟಿ ಎಂಜಿನಿಯರ್/ನಿರ್ವಾಹಕ ಎಂಜಿನಿಯರ್ (ಟ್ರ್ಯಾಕ್), ಸಹಾಯಕ ಎಂಜಿನಿಯರ್ / ವಿಭಾಗ ಎಂಜಿನಿಯರ್ ಸೇರಿ ಒಟ್ಟು 11 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗ ಸ್ಥಳ ಬೆಂಗಳೂರು ಆಗಿದೆ.
ಅರ್ಜಿ ಸಲ್ಲಿಕೆಯ ದಿನಾಂಕ ಜುಲೈ 1ರಿಂದ ಆರಂಭವಾಗಿದ್ದು, ಜುಲೈ 31ರವರೆಗೂ ಸಮಯವಕಾಶ ಇದೆ.

ಈ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಗರಿಷ್ಠ 55 ವರ್ಷ ಮತ್ತು ಕನಿಷ್ಠ 35 ವರ್ಷದ ವಯೋಮಿತಿ ಆಗರಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+