Shravan Maas 2023: ಶ್ರಾವಣ ಮಾಸದಲ್ಲಿ ನೀವು ಭೇಟಿ ನೀಡಲೇಬೇಕಾದ ಕರ್ನಾಟದ 8 ಪ್ರಮುಖ ಶಿವನ ದೇವಾಲಯಗಳಿವು, ಇಲ್ಲಿದೆ ವಿವರ
ಕರ್ನಾಟಕ, ಜುಲೈ, 19: ಸಾಮಾನ್ಯವಾಗಿ ಶ್ರಾವಣ ಬಂತೆಂದರೆ ಸಾಕು ಕುಟುಂಬ ಸಮೇತ ಶಿವನ ದೇವಸ್ಥಾನಗಳಿಗೆ ಹೋಗುವ ಪ್ಲಾನ್ ಹಾಕಿಕೊಂಡಿರುತ್ತಾರೆ. ಹಾಗಾದರೆ ಈ ಸಮಯಕ್ಕೆ ಭೇಟಿ ನೀಡಲೇಬೇಕಾದ ಕರ್ನಾಟಕದಲ್ಲಿನ ಪ್ರಮುಖ 8 ಶಿವನ ದೇವಾಲಯಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಶ್ರಾವಣ ಮಾಸವು ಹಿಂದು ಭಕ್ತರಿಗೆ ಅತ್ಯಂತ ಪವಿತ್ರ ತಿಂಗಳಾಗಿರುತ್ತದೆ. ಈ ಸಮಯದಲ್ಲಿ ಹೆಚ್ಚಾಗಿ ದೇವಾಲಯಗಳಿಗೆ ಭೇಟಿ ಕೊಟ್ಟು ತಮ್ಮ ಆರೋಗ್ಯ ಮತ್ತು ಏಳಿಗೆಗಾಗಿ ದೇವರಲ್ಲಿ ಪ್ರಾರ್ಥಿಸುವವರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಶಿವನು ಈ ಅವಧಿಯಲ್ಲಿ ತನ್ನಲ್ಲಿ ಶ್ರದ್ಧೆಯುಳ್ಳವರ ಮೇಲೆ ತನ್ನ ಆಶೀರ್ವಾದವನ್ನು ನೀಡುತ್ತಾನೆ ಎಂದು ನಂಬಲಾಗುತ್ತದೆ. ಆದ್ದರಿಂದ ಭಕ್ತರಿಗೆ ಈ ಮಾಸ ಅತ್ಯಂತ ಪವಿತ್ರವಾದುದ್ದಾಗಿದೆ.
ಇದೀಗ ಸರ್ಕಾರದಿಂದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಹಿಳೆಯರು ಹೆಚ್ಚಿನ ರೀತಿಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಶಿವವ ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ. ಹಾಗೆಯೇ ಈ ಸಮಯದಲ್ಲಿ ರಾಜ್ಯದ ಪ್ರಮುಖ 8 ಶಿವನ ದೇವಾಲಯಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ 6 ಅಡಿ ಎತ್ತರದ ಶಿವಲಿಂಗವಿದ್ದು, ಇದನ್ನು ಆತ್ಮಲಿಂಗ ಎಂದು ಕರೆಯಲಾಗುತ್ತದೆ. ಬಿಳಿ ಗ್ರಾನೈಟ್‌ನಿಂದ ನಿರ್ಮಾಣವಾಗಿರುವ ಈ ಶಿವಲಿಂಗ ದ್ರಾವಿಡ ವಾಸ್ತುಶಿಲ್ಪವನ್ನು ಹೋಲುವಂತಿದೆ. ನಿಂತಿರುವ ಭಂಗಿಯಲ್ಲಿರುವ ಶಿವನ ವಿಗ್ರಹವು 1500 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ದೇವಾಲಯವನ್ನು ಮಹಾಭಾರತ ಮತ್ತು ರಾಮಾಯಣದ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಮತ್ತು ಇದು ಕಾಶಿಯಷ್ಟೇ ಮಹತ್ವ ಪಡೆದಿದ್ದು, ಇದನ್ನು ದಕ್ಷಿಣ ಕಾಶಿ ಅಂತಲೇ ಕರೆಯಲಾಗುತ್ತದೆ.
ಸಂಪ್ರದಾಯದಂತೆ, ಭಕ್ತರು ಮೊದಲು ಕಾರವಾರ ಬೀಚ್‌ನಲ್ಲಿ ಸ್ನಾನ ಮಾಡಿ ಮಹಾ ಗಣಪತಿ ದೇವಾಲಯಕ್ಕೆ ಭೇಟಿ ನೀಡಬೇಕು. ನಂತರ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಬೇಕು ಎನ್ನುವ ಪದ್ಧತಿ ಈಗಲೂ ರೂಢಿಯಲ್ಲಿದೆ.
ಮುರುಡೇಶ್ವರದ ಶಿವನ ದೇವಸ್ಥಾನ
ವಿಶ್ವದ ಎರಡನೇ ಅತಿ ಎತ್ತರದ ಶಿವನ ದೇವಾಲಯ ಗೋಕರ್ಣದ ಮುರುಡೇಶ್ವರದಲ್ಲಿದೆ. ಮೂರು ಕಡೆ ಅರಬ್ಬೀ ಸಮುದ್ರದಿಂದ ಸುತ್ತುವರೆದಿರುವ ಬೆಟ್ಟದ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯದ ಪ್ರವೇಶ ದ್ವಾರವು 123 ಅಡಿ ಎತ್ತರದಲ್ಲಿದೆ. ಮತ್ತು ಗೋಪುರದ ಮೇಲಿನಿಂದ ಶಿವನ ಪ್ರತಿಮೆಯ ಅದ್ಭುತ ನೋಟವನ್ನು ವೀಕ್ಷಿಸಬಹುದಾಗಿದೆ.
ಈ ದೇವಾಲಯದ ಗರ್ಭಗುಡಿಯನ್ನು ಹೊರತುಪಡಿಸಿ ಇಲ್ಲಿನ ಆವರಣವನ್ನು ಈಗ ಇನ್ನು ಹೆಚ್ಚಾಗಿ ಅಭಿವೃದ್ಧಿಪಡಿಸಲಾಗಿದೆ.
ಇಲ್ಲಿರುವ ಶಿವನ ಪ್ರತಿಮೆಯು ಸಾಕಷ್ಟು ಪ್ರಭಾವಶಾಲಿಯಾಗಿದೆ ಮತ್ತು ನೋಡುಗರಿಗೆ ನೆಮ್ಮದಿಯನ್ನು ನೀಡುತ್ತದೆ. ಈ ಭವ್ಯವಾದ ದೇವಾಲಯವನ್ನು ನೋಡಲು ರಾಜ್ಯ, ದೇಶ ಅಲ್ಲದೆ ವಿದೇಶಗಳಿಂದಲೂ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಲೇ ಇರುತ್ತಾರೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ
ದಕ್ಷಿಣ ಭಾರತದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವು ಒಂದಾಗಿದೆ. ಇದು 800 ವರ್ಷಗಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಇಲ್ಲಿನ ಮಂಜುನಾಥೇಶ್ವರನನ್ನು ಶಿವಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಮತ್ತು ಮಂಜುನಾಥನ ಆಶೀರ್ವಾದ ಪಡೆಯಲು ಪ್ರತಿನಿತ್ಯ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ.
ಇನ್ನು ಇಲ್ಲಿನ ನೇತ್ರಾವತಿ ನದಿಯು ಪ್ರವಸಿಗರ ಪ್ರಮುಖ ಆಕರ್ಷಣೆಯಾಗಿದೆ. ಯಾತ್ರಾರ್ಥಿಗಳು ದೇವಾಲಯಕ್ಕೆ ಹೋಗುವ ದಾರಿಯಲ್ಲಿ ತಮ್ಮ ಪಾಪ ತೊಳೆದುಕೊಳ್ಳಲು ಈ ನದಿಯಲ್ಲಿ ಸ್ನಾನ ಮಾಡುತ್ತಾರೆ ಎನ್ನುವ ನಂಬಿಕೆ ಈಗಲೂ ಇದೆ. ಮತ್ತೊಂದೆಡೆ ತೀರ್ಥಂಕರ ಚಂದ್ರಪ್ರಭ, ಜೈನ ಧರ್ಮದ ರಕ್ಷಣಾತ್ಮಕ ದೇವರುಗಳು, ಕನ್ಯಾಕುಮಾರಿ ಮುಂತಾದ ದೇವತೆಗಳನ್ನು ಸಹ ಇಲ್ಲಿ ಕಾಣಬಹುದಾಗಿದೆ
ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ
ಕಾವೇರಿ ನದಿಯ ಉಪನದಿಗಳಲ್ಲಿ ಒಂದಾದ ಕಬಿನಿಯ ಬಲದಂಡೆಯಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಇದೆ. ನಂಜುಂಡ ಎಂಬ ಹೆಸರನ್ನು ವಿಷವನ್ನು ಸೇವಿಸಿದ ಶಿವ ಎಂದು ವಿವರಿಸಲಾಗಿದೆ. ಈ ನಂಜುಂಡನೇ ವಿಷವನ್ನು ಜೀರ್ಣಿಸಿಕೊಳ್ಳುವ ಮೂಲಕ ಶ್ರೀಕಂಠನಾದ ಎನ್ನುವ ಪ್ರತೀತಿ ಇದೆ. ಆಗಿನಿಂದ ನಂಜುಂಡೇಶ್ವರ ಮತ್ತು ಶ್ರೀಕಂಠೇಶ್ವರ ಎನ್ನುವ ಎರಡೂ ಹೆಸರಿನಿಂದಲೂ ಕರೆಯುತ್ತಾರೆ.
ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ದೇವಸ್ಥಾನ
ಕರ್ನಾಟಕದ ಕೋಲಾರ ಜಿಲ್ಲೆಯ ಕಮ್ಮಸಂದ್ರದಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನವಿದ್ದು, ಇದು 108 ಅಡಿಗಳಿಷ್ಟು ಎತ್ತರ ಇದೆ. ಮುಖ್ಯ ಶಿವಲಿಂಗವನ್ನು ಹೊರತುಪಡಿಸಿ, ಲಕ್ಷಾಂತರ ಶಿವಲಿಂಗಗಳನ್ನು ಈ ದೇವಾಲಯದಲ್ಲಿ ಸ್ಥಾಪಿಸಲಾಗಿದೆ. ನೀವು ಸಹ ಬಯಸಿದರೆ, ನಿಮ್ಮ ಹೆಸರಿನಲ್ಲಿ 1 ರಿಂದ 3 ಅಡಿ ಉದ್ದದ ಶಿವಲಿಂಗವನ್ನು ಸ್ಥಾಪಿಸಬಹುದಾಗಿದೆ.
ಇನ್ನು ಶಿವನ ವಾಹನವೆಂತಲೇ ಕರೆಯಲ್ಪಡುವ 35 ಅಡಿ ಎತ್ತರದ ನಂದಿಯನ್ನು ಸಹ ಇಲ್ಲಿ ಸ್ಥಾಪಿಸಲಾಗಿದೆ. ಇದು ಶಿವಭಕ್ತಿ ಮತ್ತು ಆರಾಧನೆಯ ಕೇಂದ್ರವಾಗಿದೆ. ಈ ದೇವಾಲಯದಲ್ಲಿ ಸುಮಾರು 5 ಲಕ್ಷ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಇನ್ನು ಇಲ್ಲಿ ವಿಶ್ರಾಂತಿ ಗೃಹ, ಮದುವೆ ಮಂದಿರ, ಧ್ಯಾನ ಮಂದಿರ ಮತ್ತು ಪ್ರದರ್ಶನ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಈ ದೇವಸ್ಥಾನಕ್ಕೆ ಪ್ರತಿದಿನ 7:00ರಿಂದ ರಾತ್ರಿ 9:30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತದೆ. ಇನ್ನು ಇದು ಬೆಂಗಳೂರಿನಿಂದ ಇಲ್ಲಿಗೆ ರಸ್ತೆ ಮಾರ್ಗವಾಗಿ 100 ಕಿ.ಮೀ. ದೂರದಲ್ಲಿದೆ.
ಹಂಪಿಯ ಬಡವಿಲಿಂಗ ದೇವಸ್ಥಾನ
ಹಂಪಿಯಲ್ಲಿರುವ ಬಡವಿಲಿಂಗ ದೇವಸ್ಥಾನವು ಶಿವನಿಗೆ ಅರ್ಪಿತವಾದ ದೇವಸ್ಥಾನವಾಗಿದೆ. ಶಿವನನ್ನು ಈ ದೇವಸ್ಥಾನದಲ್ಲಿ ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ವರ್ಷಪೂರ್ತಿ ಪ್ರವಾಸಿಗರು ಮತ್ತು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಈ ಸುಂದರವಾದ ಲಿಂಗವನ್ನು ಕಪ್ಪು ಕಲ್ಲಿನಿಂದ ತಯಾರಿಸಲಾಗಿದೆ. ಇದು 3 ಮೀಟರ್ ಎತ್ತರವನ್ನು ಹೊಂದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದ ಈ ದೇವಾಲಯ ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ದೇವಸ್ಥಾನದೊಳಗೆ ಶಿವಲಿಂಗವನ್ನು ಬಡತನದಿಂದ ಬೆಳೆದ ರೈತ ಮಹಿಳೆ ನಿರ್ಮಿಸಿದ್ದಾರೆ. ಆದ್ದರಿಂದ ಇದಕ್ಕೆ ಬಡವಿಲಿಂಗ ದೇವಸ್ಥಾನ ಎಂದು ಕರೆಯುತ್ತಾರೆ ಎನ್ನುವುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಇಲ್ಲಿನ ಬೃಹತ್ ಶಿವಲಿಂಗವು ಒಂದು ಸಣ್ಣ ಕಲ್ಲಿನ ಕೋಣೆಯಲ್ಲಿದೆ. ಭಕ್ತರು ಒಳಗೆ ಹೋಗಲು ಒಂದು ದ್ವಾರವಿದೆ. ಆಸಕ್ತಿದಾಯಕ ವಿಷಯವೆಂದರೆ ಹಗಲಿನಲ್ಲಿ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಹಾಗೆಯೇ ಮಳೆಗಾಲದಲ್ಲಿ ಮಳೆ ನೀರು ನೇರವಾಗಿ ಒಳಗಡೆ ಬೀಳುತ್ತದೆ.
ರೈಲಿನಲ್ಲಿ ಪ್ರಯಾಣಿಸುವುದಾದರೆ, ಹೊಸಪೇಟೆ ಜಂಕ್ಷನ್ ರೈಲು ನಿಲ್ದಾಣದಲ್ಲಿ ಇಳಿದು ಇಲ್ಲಿಗೆ ಹೋಗಬಹುದು. ಇನ್ನು ಬಸ್‌ನಲ್ಲಿ ಹೋಗುವುದಾದರೆ ಇಲ್ಲಿಗೆ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಹಾಗೆಯೇ ಭಕ್ತರಿಗೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಈ ಶಿವಲಿಂಗ ದರ್ಶನಕ್ಕೆ ಅವಕಾಶವಿದೆ.
ಹಳೇಬೀಡಿನ ಹೊಯ್ಸಳೇಶ್ವರ ದೇವಸ್ಥಾನ
ಹಳೇ ಬೀಡಿನಲ್ಲಿರುವ ಹೊಯ್ಸಳೇಶ್ವರ ದೇವಾಲಯವು ಶಿವನಿಗೆ ಅರ್ಪಿತವಾವಾಗಿದೆ. ಇದು 12 ಶತಮಾನದ ಹಿಂದೂ ದೇವಾಲಯವಾಗಿದೆ. ದ್ವಾರಸಮುದ್ರ ಸರೋವರದ ಪಶ್ಚಿಮದಲ್ಲಿ ನೆಲೆಗೊಂಡಿರುವ ಈ ಭವ್ಯವಾದ ದೇವಾಲಯವು ಹೊಯ್ಸಳ ಸಾಮ್ರಾಜ್ಯದ ಮೂರು ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದೆ. ಮತ್ತು ದಕ್ಷಿಣ ಭಾರತದಲ್ಲಿ ಶಿವನಿಗೆ ಸಮರ್ಪಿತವಾದ ಅತ್ಯಂತ ಮಹತ್ವದ ಸ್ಮಾರಕವಾಗಿದೆ.
ದೇವಾಲಯದ ಗೋಡೆಗಳ ಮೇಲೆ ಕೆತ್ತಲಾದ ಸುಂದರವಾದ ಶಿಲ್ಪಗಳು ನೋಡುಗರನ್ನು ತನ್ನತ್ತ ಸೆಳೆದೇ ಬಿಡುತ್ತವೆ. ಅಷ್ಟೇ ಅಲ್ಲದೆ ಇಲ್ಲಿರುವ ವಿವಿಧ ದೇವರುಗಳು ಕೆಚ್ಚೆದೆಯ ಹೊಯ್ಸಳ ಸೈನಿಕರ ಕಥೆಗಳನ್ನು ಹೇಳುತ್ತವೆ. ಇನ್ನು ಈ ದೇವಾಲಯ ಹೊಯ್ಸಳರ ಕಾಲದ ವಾಸ್ತುಶಿಲ್ಪ ಮತ್ತು ಪ್ರತಿಮೆಗಳಿಗೆ ಹೆಸರುವಾಸಿ ಆಗಿರುವುದರಿಂದ ಇಲ್ಲಿಗೆ ವರ್ಷವಿಡೀ ಭಕ್ತರು ಭೇಟಿ ನೀಡುತ್ತಲೇ ಇರುತ್ತಾರೆ.
ಹಂಪಿಯ ವಿರೂಪಾಕ್ಷ ದೇವಸ್ಥಾನ
ಹಂಪಿಯಲ್ಲಿನ ವಿರೂಪಾಕ್ಷ ದೇವಸ್ಥಾನವು ತುಂಗಭದ್ರಾ ನದಿಯ ದಡದಲ್ಲಿದೆ. 7ನೇ ಶತಮಾನದಲ್ಲಿ ನಿರ್ಮಿಸಲಾದ ಈ ಸುಂದರವಾದ ವಾಸ್ತುಶಿಲ್ಪ ಮತ್ತು ಇತಿಹಾಸವುಳ್ಳ ದೇವಾಲಯವನ್ನು UNESCO ವಿಶ್ವ ಪರಂಪರೆಯ ತಾಣವನ್ನಾಗಿ ಮಾಡಲಾಗಿದೆ. ಇಲ್ಲಿರುವ ವಿರೂಪಾಕ್ಷ ಎಂದು ಕರೆಯಲ್ಪಡುವ ವಿಗ್ರಹವನ್ನು ಶಿವನ ರೂಪಗಳಲ್ಲಿ ಪೂಜಿಸಲಾಗುತ್ತದೆ. ಇನ್ನು ಇಲ್ಲಿನ ಗೋಡೆಗಳ ಮೇಲೆ ಶ್ರೀಮಂತ ಪರಂಪರೆಯಯನ್ನು ನೆನಪಿಸುವ ಅದ್ಭುತ ಕಲ್ಲಿನ ಶಾಸನಗಳನ್ನು ನೀವು ಕಾಣಬಹುದು.
ದೇವಾಲಯವು ಎತ್ತರದ ಗೋಪುರಗಳನ್ನು ಹೊಂದಿದ್ದು, ಒಳಗಡೆ ಗೋಡೆಗಳನ್ನು ಅಲಂಕೃತವಾದ ಕಲ್ಲಿನಿಂದ ಅಲಂಕರಿಸಲಾಗಿದೆ. ಈ ಶಿಲ್ಪಗಳು ಹಲವಾರು ದೇವರು ಮತ್ತು ದೇವತೆಗಳ ಪೌರಾಣಿಕ ಕಥೆಗಳನ್ನು ಬಿಂಬಿಸುತ್ತವೆ. ವಿರೂಪಾಕ್ಷ ದೇವಸ್ಥಾನವು ಬೆಂಗಳೂರಿನಿಂದ 350 ಕಿ.ಮೀಟರ್ ದೂರದಲ್ಲಿದೆ. ಹಾಗೆಯೇ ಇಲ್ಲಿಗೆ ಬಂದು ಇಳಿದ ತಕ್ಷಣ ಬೇರೆ ಪ್ರವಾಸಿಗರ ಹಾಗೆ ನೀವು ಕೂಡ ಒಂದು ಸೈಕಲ್ ಅನ್ನು ಬಾಡಿಗೆಗೆ ಪಡೆದುಕೊಂಡು ಸುತ್ತುತ್ತಾ ಹಂಪಿಯ ವೈಭವವನ್ನು ಪೂರ್ತಿಯಾಗಿ ಸವಿಯಬಹುದಾಗಿದೆ.
ಪ್ರವಾಸಿಗರಿಗೆ ಇಲ್ಲಿನ ಅದ್ಭುತ ದೃಶ್ಯಗಳನ್ನು ವೀಕ್ಷಿಸಲು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಹಾಗೂ ಸಂಜೆ 5ರಿಂದ ರಾತ್ರಿ 9ರವರೆಗೂ ಅವಕಾಶವನ್ನು ಕಲ್ಪಿಸಲಾಗಿದೆ.
-
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಶ್ರೀರಾಮನವಮಿ ಪ್ರಯುಕ್ತ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಅಪರೂಪದ ‘ಪುಷ್ಪಯಾಗ’ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral












Click it and Unblock the Notifications