Dhanteras Tips: ಹಣಕಾಸಿನ ತೊಂದರೆ ಇದಿಯಾ? ಧನ್‌ತೇರಸ್‌ ದಿನ ಮನೆಗೆ ಈ ವಸ್ತು ತನ್ನಿ... ಹಣದ ಸಮಸ್ಯೆ ಬರುವುದೇ ಇಲ್ಲ..

ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಅಂದರೆ ದೀಪಾವಳಿಯ ಹಿಂದಿನ ದಿನ ಧನ್‌ತೇರಸ್ ಹಬ್ಬವನ್ನು ಆಚರಿಸಲಾಗುತ್ತದೆ. ಧನ್‌ತೇರಸ್‌ನಲ್ಲಿ ತಾಯಿ ಲಕ್ಷ್ಮಿ, ಗಣೇಶ, ಧನ್ವಂತರಿ ಮತ್ತು ಸಂಪತ್ತಿನ ದೇವರಾದ ಕುಬೇರರನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನ ಮನೆಗೆ ನೀವು ಕೆಲ ವಸ್ತುಗಳನ್ನು ತಂದರೆ ಹಣಕಾಸಿನ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವೆ. ಅಲ್ಲದೆ ನಿಮ್ಮ ಕೈಯಲ್ಲಿ ಹಣ ಹರಿದಾಡಲಿದೆ. ಹಾಗಾದರೆ ಈ ದಿನ ಯಾವ ವಸ್ತು ಮನೆಗೆ ತರುವುದು ಮಂಗಳಕರವಾಗಿದೆ ಎಂದು ತಿಳಿಯೋಣ.

ಈ ಬಾರಿ ಧನ್‌ತೇರಸ್‌ ಹಬ್ಬವನ್ನು ಮಂಗಳವಾರ 29 ಅಕ್ಟೋಬರ್ 2024 ರಂದು ಆಚರಿಸಲಾಗುತ್ತದೆ. ಧನ್‌ತೇರಸ್‌ನಲ್ಲಿ ಚಿನ್ನ, ಬೆಳ್ಳಿ, ಪಾತ್ರೆಗಳು ಮತ್ತು ಬಟ್ಟೆ ಇತ್ಯಾದಿಗಳನ್ನು ಖರೀದಿಸುವುದು ಮಂಗಳಕರವೆಂದು ನಂಬಲಾಗಿದೆ. ಆದರೆ ಧನ್‌ತೇರಸ್‌ನಂದು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದರ ಮೂಲಕ ಮಾತ್ರವಲ್ಲದೆ ಬೆಳ್ಳಿಯಿಂದ ಮಾಡಿದ ಕೆಲ ವಸ್ತುಗಳನ್ನು ಖರೀದಿಸುವುದು ತುಂಬಾ ಶುಭ ಫಲವನ್ನು ನೀಡಲಿದೆ.

Dhanteras 2024 Vastu Tips for Money Bring silver fish and elephant home on Dhanteras is auspicious

ಹೌದು.. ಈ ದಿನ ಬೆಳ್ಳಿಯಿಂದ ಮಾಡಿದ ಮೀನು ಮತ್ತು ಆನೆಯನ್ನು ಖರೀದಿಸುವುದರಿಂದ ಲಕ್ಷ್ಮಿ ದೇವಿಯ ಮತ್ತು ಭಗವಾನ್ ಕುಬೇರನ ವಿಶೇಷ ಅನುಗ್ರಹ ಲಭಿಸಲಿದೆ. ಬೆಳ್ಳಿ ಮೀನು ಮತ್ತು ಆನೆಯನ್ನು ಮನೆಯಲ್ಲಿ ಇಡಲು ಸಂಬಂಧಿಸಿದ ವಾಸ್ತು ನಿಯಮಗಳ ಬಗ್ಗೆ ಈಗ ತಿಳಿಯೋಣ.

ಬೆಳ್ಳಿ ಮೀನನ್ನು ಎಲ್ಲಿ ಇಡಬೇಕು?

ಧನ್‌ತೇರಸ್‌ ದಿನದಂದು ಬೆಳ್ಳಿಯ ಮೀನನ್ನು ಖರೀದಿಸಿ ಮನೆಗೆ ತರುವುದು ಮಂಗಳಕರ. ಇದರಿಂದ ಮನೆಯಲ್ಲಿ ಸದಾ ಸಂತಸ ನೆಲೆಸಿರುತ್ತದೆ. ಮನೆಯಲ್ಲಿನ ಸಮಸ್ಯೆಗಳು ಕೂಡ ದೂರವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿಯ ಮೀನುಗಳನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇರಿಸಬೇಕು. ಬಳಿಕ ಇದನ್ನು ಸುರಕ್ಷಿತವಾಗಿ ಮನೆಯಲ್ಲಿ ಇಡಬೇಕು. ಪೂರ್ವ ದಿಕ್ಕಿನ ಹೊರತಾಗಿ ಈಶಾನ್ಯ ದಿಕ್ಕಿನಲ್ಲೂ ಬೆಳ್ಳಿ ಮೀನನ್ನು ಇಡುವುದು ಶುಭ. ಇದರಿಂದ ಮನೆಯ ವಾಸ್ತು ಸರಿಯಾಗಿರುತ್ತದೆ.

ಬೆಳ್ಳಿ ಆನೆಯನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳು

ಬೆಳ್ಳಿ ಮೀನಿನ ಹೊರತಾಗಿ, ಧನ್‌ತೇರಸ್‌ ದಿನದಂದು ಬೆಳ್ಳಿಯಿಂದ ಮಾಡಿದ ಆನೆಯ ವಿಗ್ರಹವನ್ನು ಖರೀದಿಸುವುದು ಮಂಗಳಕರವಾಗಿದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ. ಅಲ್ಲದೆ ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚಾಗುತ್ತದೆ. ವಾಸ್ತು ಪ್ರಕಾರ ಮನೆಯ ತಿಜೋರಿ ಅಥವಾ ದೇವಸ್ಥಾನದ ಉತ್ತರ ದಿಕ್ಕಿನಲ್ಲಿ ಬೆಳ್ಳಿಯ ಆನೆಯನ್ನು ಇಡುವುದು ಮಂಗಳಕರವಾಗಿದೆ.

ಧನ್‌ತೇರಸ್‌ನಲ್ಲಿ ಈ 3 ವಸ್ತುಗಳನ್ನು ಖರೀದಿಸಿ..

ಧಾರ್ಮಿಕ ನಂಬಿಕೆಯ ಪ್ರಕಾರ, ಧಂತೇರಸ್‌ನಲ್ಲಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು, ಮನೆಯ ಮುಖ್ಯ ದ್ವಾರದ ಬಳಿ ಲಕ್ಷ್ಮಿ ದೇವಿಯ ಪಾದಗಳ ಚಿತ್ರವನ್ನು ಬಿಡಿಸಿ. ಇದರಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಂಪತ್ತು ಇರುತ್ತದೆ.

ಧನ್‌ತೇರಸ್‌ ದಿನದಂದು ಮಣ್ಣಿನಿಂದ ಮಾಡಿದ ಲಕ್ಷ್ಮಿ ಮತ್ತು ಗಣೇಶನ ವಿಗ್ರಹಗಳನ್ನು ಖರೀದಿಸಬೇಕು. ಸಂಜೆ ಗಣಪತಿ-ಲಕ್ಷ್ಮಿಯನ್ನು ಪೂಜಿಸಿ ಮತ್ತು ಅವರಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿ. ಇದರಿಂದ ನೀವು ಮತ್ತು ನಿಮ್ಮ ಇಡೀ ಕುಟುಂಬವು ದೇವರು ಮತ್ತು ದೇವತೆಗಳಿಂದ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ತುಳಸಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಧನ್‌ತೇರಸ್‌ ದಿನದಂದು ಅದನ್ನು ಮನೆಗೆ ತಂದರೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನು ನೀವು ಪಡೆಯುವಿರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+