Year Ender 2024: ಈ ವರ್ಷದ ಟ್ರೆಂಡಿಂಗ್ ಟ್ರೋಲ್: ಏನ್ರೀ ಮೀಡಿಯಾದಿಂದ ಜಾಲಿ.. ಜಾಲಿ ಎಲ್ಲಾ ಜಾಲಿ ವರೆಗೆ
2024 ಮುಕ್ತಾಯವಾಗುತ್ತಾ ಬಂತು ಇನ್ನೇನು 2025 ಶುರುವಾಗುತ್ತಿದೆ. ಈ ನಡುವೆ ಈ ವರ್ಷವೆಲ್ಲಾ ಸದ್ದು ಮಾಡಿದ ಕೆಲವು ಪ್ರಮುಖ ಟ್ರೋಲ್ ಹಾಗೂ ಸಿನಿಮಾದ ಕೆಲವು ಡೈಲಾಗ್ಸ್‌ಗಳ ವಿವರ ಇಲ್ಲಿದೆ. ಪ್ರತಿ ವರ್ಷವೂ ಯಾರಾದರು ಸಿನಿಮಾ ನಟರು, ರೀಲ್ಸ್ ಹಾಗೂ ಶಾರ್ಟ್ಸ್ ಮಾಡುವವರು ಹೇಳುವ ಮಾತು ಅಥವಾ ಡೈಲಾಗ್‌ಗಳು ಸಿಕ್ಕಾಪಟ್ಟೆ ಫೇಮಸ್ ಆಗಿ ಆ ಡೈಲಾಗ್ಸ್‌ಗಳು ಜನರು ನಿತ್ಯ ಬಳಸುವಂತೆ ಆಗುತ್ತವೆ. ಆ ರೀತಿ ನೋಡಿದರೆ ಈ ವರ್ಷ ಸಿಕ್ಕಾಪಟ್ಟೆ ಡೈಲಾಗ್ಸ್ ಕರ್ನಾಟಕದಲ್ಲಿ ವರ್ಡ್ ಫೇಮಸ್ ಆಗಿವೆ. ಯಾವುವು ಆ ಡೈಲಾಗ್ಸ್ ಯಾವಾಗ ಟ್ರೆಂಡ್ ಆಯ್ತು ಎನ್ನುವ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಈ ವರ್ಷ ರಾಹುಲ್ಲಾ ಬಂದು ಸ್ವಲ್ಪ ಅಲ್ಲಾಡಿಸಪ್ಪಾ ಅನ್ನೋದ್ರಿಂದ ಹಿಡಿದು ಬೇರೆಯವರ ಯಶಸ್ಸನ್ನು ನೋಡಿ ನೀನು.. ಎನ್ನುವ ಮಾತಿನ ವರೆಗೆ ಈ ಬಾರಿ ಹಲವು ಡೈಲಾಗ್ಸ್‌ಗಳು ಫೇಮಸ್ ಆಗಿವೆ. ಒಂದೊಂದು ಡೈಲ್‌ಗಳು ಒಂದೊಂದು ಮನರಂಜನೆ ಹಾಗೂ ಹವಾ ಸೃಷ್ಟಿ ಮಾಡಿದ್ದಂತು ಸುಳ್ಳಲ್ಲ. ಈ ವರ್ಷದ ಪ್ರಮುಖ ಟ್ರೋಲ್ ಡೈಲಾಗ್‌ಗಳ ಮಾಹಿತಿ ಇಲ್ಲಿದೆ.

ರಾಹುಲ್ಲಾ ಬಂದು ಸ್ವಲ್ಪ ಅಲ್ಲಾಡ್ಸಪ್ಪಾ: ರಾಹುಲ್ಲಾ ಇಲ್ಲಿ ಬಂದು ಅಲ್ಲಾಡ್ಸಪ್ಪಾ ಎನ್ನುವ ಡೈಲಾಗ್ ಈ ವರ್ಷ ಸದ್ದು ಮಾಡಿದ ಟ್ರೋಲ್ ಡೈಲಾಗ್ಸ್‌ನಲ್ಲಿ ಅಗ್ರಪಟ್ಟಿಯಲ್ಲಿ ನಿಲ್ಲುತ್ತದೆ ಅಂತಲೇ ಹೇಳಬಹುದು. ಈ ಟ್ರೋಲ್ಸ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಹೋಟೆಲ್ ಉದ್ಯಮಿ ಹಾಗೂ ಚಿತ್ರರಂಗದ ಕಲಾವಿದ ಚಂದ್ರು ಅವರ ಡೈಲಾಗ್ ಫೇಮಸ್ ಆಗಿತ್ತು. ಇದರ ಜೊತೆಗೆ ಬೆಳ್ಳುಳ್ಳಿ ಕಬಾಬ್ ಹಾಗೂ ಒನ್ಸ್ ಮೋರ್ ಒನ್ಸ್ ಮೋರ್ ಅಂತ ಇರ್ಬೇಕು ಅನ್ನೋದು ಸಹ ಫೇಮಸ್ ಆಗಿದ್ದವು. ರಾಹುಲ್ ಹೆಸರಿನವರೆಲ್ಲರೂ ಈ ಟ್ರೋಲ್‌ನಿಂದ ಕಾಲೆಳೆಸಿಕೊಂಡಿದ್ದರು.
ಕರಿಮಣಿ ಮಾಲೀಕ ನೀನಲ್ಲ: ಉಪೇಂದ್ರ ಸಿನಿಮಾದ ಏನಿಲ್ಲ.. ಏನಿಲ್ಲ ಕರಿಮಣಿ ಮಾಲೀಕ ನೀನಲ್ಲ ಎನ್ನುವ ಹಾಡಿನ ಸಾಲುಗಳು ಈ ವರ್ಷ ರೀಲ್ಸ್ ಸಾಮ್ರಾಜ್ಯದಲ್ಲಿ ಮೆರೆದ ಸಾಲುಗಳು ಅಂತಲೇ ಹೇಳಬಹುದು. ಈ ಸಾಲುಗಳಿಂದ ಹಲವರು ಟ್ರೋಲ್ಸ್ ಮಾಡಿದರು. ಈ ಹಾಡಿಗೆ ಜನ ರೀಲ್ಸ್ ಮಾಡಿ ಮಜಾ ಮಾಡಿದ್ದರು. ಈ ವರ್ಷ ಜನ ಹೆಚ್ಚು ಕೇಳಿದ ಹಾಡುಗಳಲ್ಲಿ ಈ ಹಾಡು ಸಹ ಒಂದಾಗಿದೆ. ಏಕಾಏಕಿ ಫೇಮಸ್ ಆಗಿದ್ದ ಈ ಹಾಡು ಹೊರ ರಾಜ್ಯಗಳಲ್ಲೂ ಸದ್ದು ಮಾಡಿತ್ತು.
ಶೆಡ್ಡಿಗೆ ಹೋಗೋಣ ಬಾ: ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಬೆಂಗಳೂರಿನ ಶೆಡ್ಡಿನಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ ಮೇಲೆ ಇದಕ್ಕೆ ಸಂಬಂಧಿಸಿದ ಸುದ್ದಿಗಳು ಹೆಚ್ಚಾದವು. ವರ್ಷ ಪೂರ್ತಿ ಸದ್ದು ಮಾಡಿ ಕ್ರೈಂ ಪ್ರಕರಣಗಳಲ್ಲಿ ಈ ಪ್ರಕರಣವೂ ಒಂದಾಗಿದೆ. ಶೆಡ್ಡಿಗೆ ಹೋಗೋಣ ಬಾ ಎನ್ನುವುದು ಸಹ ಇದರೊಂದಿಗೆ ಫೇಮಸ್ ಆದ ಹಾಗೂ ಟ್ರೋಲ್ ಆಗಿರುವ ಡೈಲಾಗ್ ಆಗಿದೆ.
ಏನ್ರೀ ಮೀಡಿಯಾ: ಏನ್ರೀ ಮೀಡಿಯಾ ಎಂದು ದರ್ಶನ್ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದ್ದರು. ಇದಾದ ಮೇಲೆ ದರ್ಶನ್ ಅವರ ಅಭಿಮಾನಿಗಳು ಈ ಡೈಲಾಗ್ ಹೇಳಲು ಶುರು ಮಾಡಿಕೊಂಡರು. ಇಂದಿಗೂ ಮಾಧ್ಯಮಗಳ ವಿರುದ್ಧ ಟ್ರೋಲ್ ಮಾಡುವುದಕ್ಕೆ ಈ ಡೈಲಾಗ್ ಬಳಕೆಯಾಗುತ್ತಿದೆ. ಏನ್ರೀ ಮೀಡಿಯಾ ಎನ್ನುವುದು ಈಗಲೂ ಟ್ರೆಂಡ್‌ನಲ್ಲಿ ಇದೆ.
ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ: ಇನ್ನು ನಟ ಧ್ರುವ ಸರ್ಜಾ ಅವರ ಅಭಿಮಾನಿಯೊಬ್ಬರು ಧ್ರುವ ಸರ್ಜಾ ಅವರ ಮನೆಯ ಮುಂದೆ ಹೇಳಿದ್ದ ಹಾಡು ತುಂಬಾನೇ ವೈರಲ್ ಆಗಿತ್ತು. ಓಡ್ರೋ ಓಡ್ರೋ ಇದು ಸರ್ಜಾ ಅಡ್ಡಾ.. ಸರ್ಜಾ ಬಂದ ಸರ್ಜಾ ಆಯಕ್ಷನ್ ಹೀರೋ ಸರ್ಜಾ ಎನ್ನುವುದು ಸಹ ಫೇಮಸ್ ಆಗಿತ್ತು.
ಜಾಲಿ.. ಜಾಲಿ ಎಲ್ಲಾ ಜಾಲಿ: ಭೀಮ ಸಿನಿಮಾದ ಜಾಲಿ.. ಜಾಲಿ ಎಲ್ಲಾ ಜಾಲಿ ಎನ್ನುವ ಡೈಲಾಗ್ ಈಗಲೂ ಟ್ರೆಂಡ್‌ನಲ್ಲಿ ಇದೆ. ಸಣ್ಣ ಮಕ್ಕಳಿಂದ ದೊಡ್ಡ ಮಕ್ಕಳ ವರೆಗೆ ಎಲ್ಲರೂ ಈ ಡೈಲಾಗ್‌ಗೆ ಫಿದಾ ಆಗಿದ್ದಾರೆ. ಹೆಂಗಿದ್ಯಾ ಅಂತ ಕೇಳಿದ್ರೆ ನಂಗೆನು ಗುರು ಜಾಲಿ.. ಜಾಲಿ ಎಲ್ಲಾ ಜಾಲಿ ಅಂತ ಜನ ರಿಪ್ಲೈ ಕೊಡ್ತಿದ್ದಾರೆ.
ಬೇರೆಯವರ ಯಶಸ್ಸನ್ನು ನೋಡಿ: ಕೇರಳದ ಹುಡುಗನ ರೀಲ್ಸ್ ಈಗ ಕರ್ನಾಟಕದಲ್ಲಿ ಹೊಸ ಟ್ರೋಲ್ ಆಗಿ ಹೊರ ಹೊಮ್ಮುತ್ತಿದೆ. ಬೇರೆಯವರ ಯಶಸ್ಸು ನೋಡಿ ನೀನು ಅಳಬೇಡ.. ಪರಿಶ್ರಮ ಪಟ್ಟರೆ ಎನ್ನುವ ಡೈಲಾಗ್ ವರ್ಷಾಂತ್ಯದಲ್ಲಿ ಟ್ರೆಂಡಿಂಗ್‌ನಲ್ಲಿ ಇದೆ. ನಿಮ್ಮಿಷ್ಟದ ಟ್ರೋಲ್ ಡೈಲಾಗ್ ಯಾವುದು ಅಂತ ಕಾಮೆಂಟ್ ಮಾಡಿ.












Click it and Unblock the Notifications