• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ತವರು ವುಹಾನ್ ಮತ್ತೆ ಮೊದಲಿನಂತಾಗಲು ಅದೆಷ್ಟು ವರ್ಷ ಬೇಕು?

|

ಕೊರೊನಾ ಮಾರಿ ಜಗತ್ತಿನುದ್ದಕ್ಕೂ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಜಗತ್ತಿನ ಹಲವು ರಾಷ್ಟ್ರಗಳನ್ನು ಸ್ತಬ್ದಗೊಳಿಸಿರುವ ಈ ರೋಗ ಪ್ರಾಣ ಭಯದಿಂದ ಜನರನ್ನ ಮನೆಯಲ್ಲೇ ಕೂರುವಂತೆ ಮಾಡಿದೆ. ಜನರ ಪಾಲಿಗೆ ದುಃಸ್ವಪ್ನವಾಗಿರುವ ಕೋವಿಡ್-19 ವಿಚಾರದಲ್ಲಿ ಚೀನಾದ ವುಹಾನ್ ನಗರ ವಿಶ್ವಕ್ಕೆ ಭಯಾನಕ ಸಂದೇಶವೊಂದನ್ನು ನೀಡಲನುವಾಗಿದೆ. ಆ ಕರಾಳ ಸತ್ಯ ತಿಳಿದ ಮೇಲೆ ನಮ್ಮ ಜಂಘಾಬಲ ಉಡುಗಿ ಹೋದರೂ ಅಚ್ಚರಿಯೇನಿಲ್ಲ.!

ಅಂದ್ಹಾಗೆ ವುಹಾನ್ ನಗರ ಕೊರೊನಾ ವಿಚಾರದಲ್ಲಿ ಹೇಳ ಹೊರಟಿರುವ ಭಯಾನಕ ಸತ್ಯದ ವಿಚಾರ ಏನಪ್ಪಾ ಅಂದ್ರೆ, ಆ ನಗರದಲ್ಲಿ ಜನ ಮತ್ತೆ ನೆಮ್ಮದಿಯಾಗಿ ಉಸಿರಾಡಲು, ಪ್ರಾಣ ಭಯವಿಲ್ಲದೆ ಬದುಕಲು, ಸಂಪೂರ್ಣವಾಗಿ ಮೊದಲಿನಂತಾಗಲು ವರ್ಷಗಳೇ ಬೇಕು.!

ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

ಹೌದು, ವುಹಾನ್ ನಗರದಲ್ಲಿ ಕೊರೊನಾ ಎಬ್ಬಿಸಿರುವ ಹಾವಳಿ ಆ ನಗರವನ್ನೇ ದಿವಾಳಿಯಾಗಿಸಿದೆ. ಮೂರು ತಿಂಗಳ ಕಾಲ ಸ್ಮಶಾನ ಸದೃಶ್ಯವಾಗಿದ್ದ ನಗರದ ಜನ ಮುಂದೆ ಕೂಡ ಅದೇ ಸಜೆಯನ್ನ ಅನುಭವಿಸಬೇಕಿದೆ.

ವುಹಾನ್ ನಲ್ಲಿ ಎಲ್ಲವೂ ಸರಿಯಾಗುತ್ತಿದೆಯಾ.?

ವುಹಾನ್ ನಲ್ಲಿ ಎಲ್ಲವೂ ಸರಿಯಾಗುತ್ತಿದೆಯಾ.?

ವುಹಾನ್ ನಗರದಲ್ಲೀಗ ಲಾಕ್ ಡೌನ್ ನಿರ್ಬಂಧ ಸಡಿಲಗೊಳ್ಳುತ್ತಿರಬಹುದು. ಬಸ್ ಗಳು ಬೀದಿಗೆ ಇಳಿಯುತ್ತಿರಬಹುದು. ಸಹಜ ಸ್ಥಿತಿಯತ್ತ ವುಹಾನ್ ಬರುತ್ತಿದೆ ಎಂದು ಚೀನಾ ತೋರಿಸಿಕೊಳ್ಳುತ್ತಿದ್ದರೂ, ವಾಸ್ತವವಾಗಿ ವುಹಾನ್ ನಲ್ಲಿ ಎಲ್ಲವೂ ಸರಿಯಾಗಿಲ್ಲ. ಕೊರೊನಾ ಸೋಂಕು ತಡೆಗೆ ತರಹೇವಾರಿ ಕ್ರಿಮಿನಾಶಕಗಳನ್ನು ಅಲ್ಲಿನ ಸರ್ಕಾರ ನಗರದಾದ್ಯಂತ ಸಿಂಪಡಿಸುತ್ತಾ ವಾತಾವರಣವನ್ನು ಶುಚಿಗೊಳಿಸುವ ಪ್ರಯತ್ನ ವುಹಾನ್ ನಲ್ಲಿನ್ನೂ ನಡೆಯುತ್ತಲೇ ಇದೆ.

ಯಾರಿಗೆ ಯಾವಾಗ ಗಂಡಾಂತರ ಕಾದಿದೆಯೋ.?

ಯಾರಿಗೆ ಯಾವಾಗ ಗಂಡಾಂತರ ಕಾದಿದೆಯೋ.?

ಉಸಿರಾಟದ ಹನಿಗಳ ಮೂಲಕ ಹರಡುವ ಕೊರೊನಾ ವೈರಸ್, ಗಾಳಿಯಲ್ಲೂ ಮೂರು ಗಂಟೆಗಳ ಕಾಲ ಬದುಕಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಹೀಗಿರುವಾಗ, ಸ್ಪರ್ಶ ಮತ್ತು ದ್ರವ ಮಾಧ್ಯಮಗಳನ್ನು ಹೊಂದುಕೊಂಡಿರುವ ಕೊರೊನಾ ವೈರಸ್ ವುಹಾನ್ ನಗರದ ಅದ್ಯಾವ್ಯಾವ ಮೂಲೆಯಲ್ಲಿ ಅಂಟಿ ಕೂತಿದೆಯೋ, ಯಾರಿಗೆ ಯಾವಾಗ ಗಂಡಾಂತರ ತಂದೊಡ್ಡುತ್ತೋ ಯಾರಿಗೆ ಗೊತ್ತು.?

ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!

ಸೋಂಕು ಪುನರಾವರ್ತನೆ

ಸೋಂಕು ಪುನರಾವರ್ತನೆ

ವುಹಾನ್ ನಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾದವರ ಪೈಕಿ ಕೆಲವರಿಗೆ ಮತ್ತೆ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಹೀಗೆ, ಕೊರೊನಾ ಸೋಂಕು ಪುನಾರಾವರ್ತನೆಯಾಗುತ್ತಿರುವ ಕಾರಣ ವುಹಾನ್ ನಲ್ಲಿ ಕೊರೊನಾ ವೈರಸ್ ನಾಶ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಎದುರಾಗಿದೆ.

ಲಕ್ಷಣವಿಲ್ಲದ ಸೋಂಕಿತರೂ ಇದ್ದಾರೆ.!

ಲಕ್ಷಣವಿಲ್ಲದ ಸೋಂಕಿತರೂ ಇದ್ದಾರೆ.!

ಇದರ ಜೊತೆಗೆ ವುಹಾನ್ ನಲ್ಲಿ ಕೇವಲ ರೋಗ ಲಕ್ಷಣವುಳ್ಳವರಿಗಷ್ಟೇ ಚಿಕಿತ್ಸೆ ನೀಡಿ, ಲಕ್ಷಣ ವಿಲ್ಲದ ಸೋಂಕಿತರನ್ನು ಹಾಗೇ ಬಿಡುವ ಕಾರ್ಯವೂ ನಡೆಯುತ್ತಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ. ಹಾಗಿದ್ದರೆ, ಲಕ್ಷಣ ವಿಲ್ಲದ ಸೋಂಕಿತರ ಓಡಾಟದಿಂದ ಸೋಂಕು ಮತ್ತಷ್ಟು ಹೆಚ್ಚಾಗುವುದಿಲ್ಲವೇ? ಅಂದ್ಮೇಲೆ, ಸಂಪೂರ್ಣವಾಗಿ ಸೋಂಕನ್ನು ತಡೆಗಟ್ಟಲು ಎಲ್ಲರಿಗೂ ಅದೆಷ್ಟು ದಿನಗಳ ದಿಗ್ಬಂಧನ ಅತ್ಯಗತ್ಯ.?

ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!

ವುಹಾನ್ ಮತ್ತೆ ಪುಟಿದೇಳಲು ವರ್ಷಗಳೇ ಬೇಕು

ವುಹಾನ್ ಮತ್ತೆ ಪುಟಿದೇಳಲು ವರ್ಷಗಳೇ ಬೇಕು

ವುಹಾನ್ ನಗರದ ಜನ ಆರಂಭದಲ್ಲಿ ರೋಗ ಹರಡುವುದನ್ನು ತಡೆಯುವ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯಕ್ಕೆ ಈಗ ಇಡೀ ಜಗತ್ತಿಗೆ ಕಂಟಕ ಎದುರಾಗಿದೆ. ಸದ್ಯ ಸಾರಿಗೆ ವ್ಯವಸ್ಥೆ ವುಹಾನ್ ನಲ್ಲಿ ಮತ್ತೆ ಪುನರಾರಂಭಗೊಂಡಿದ್ದು, ಸೋಂಕಿನ ಎರಡನೇ ಅಲೆ ಶುರುವಾದರೆ ಚೇತರಿಸಿಕೊಳ್ಳಲು ಮತ್ತೆಷ್ಟು ದಿನ ಬೇಕಾದೀತು? ಲಸಿಕೆ ಕಂಡುಹಿಡಿಯುವವರೆಗೂ ಕೊರೊನಾದಿಂದ ಬಾಧೆ ತಪ್ಪುವುದಿಲ್ಲವೇ.? ಇವೆಲ್ಲ ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆಗಳಷ್ಟೇ. ಅದೇನೇಯಿರಲಿ, ಕೊರೊನಾ ಸಂಕಟದಿಂದ ತಪ್ಪಿಸಿಕೊಂಡರೂ, ಆಗಿರುವ ನಷ್ಟವನ್ನು ಮತ್ತೆ ತುಂಬಿಸಿಕೊಳ್ಳಲು, ವುಹಾನ್ ಮತ್ತೆ ಪುಟಿದೇಳಲು ವರುಷಗಳೇ ಉರುಳಬೇಕು ಎಂಬುದು ಮಾತ್ರ ಸತ್ಯ.!

English summary
How long will it take for Wuhan to become like before?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X