Get Updates
Get notified of breaking news, exclusive insights, and must-see stories!

ಸ್ಟಾನ್ ಸ್ವಾಮಿ ನಿಧನ: ಎಲ್ಗಾರ್‌ ಪರಿಷತ್ ಪ್ರಕರಣದ ಹಿನ್ನೆಲೆ, ಒಂದು ನೋಟ

ಮುಂಬೈ, ಜು.05: ಭೀಮಾ ಕೋರೆಗಾಂವ್ ಪ್ರಕರಣ ಹಾಗೂ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಯಾಗಿದ್ದ ಪಾದ್ರಿ, ಮಾನವ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಇಂದು ಮಧ್ಯಾಹ್ನ 1.30 ಕ್ಕೆ ನಿಧನರಾಗಿದ್ದಾರೆ. ಸ್ಟಾನ್‌ ಸ್ವಾಮಿ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ 2020 ರ ಅಕ್ಟೋಬರ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿಯನ್ನು ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಮೇ 30 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಫಾದರ್ ಸ್ಟಾನ್ ಸ್ವಾಮಿಯನ್ನು ರಾಂಚಿಯಲ್ಲಿ ಬಂಧಿಸಲಾಗಿತ್ತು. ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಸ್ಟಾನ್‌ ಸ್ವಾಮಿ ತನಗೆ ಜಾಮೀನು ನೀಡಲು ಮನವಿ ಮಾಡಿದ್ದರು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಾನು ಇಲ್ಲಿಯೇ ಸಾಯಬಹುದು. ನಾನು ನನ್ನ ಕೊನೆಯ ಸಂದರ್ಭದಲ್ಲಿ ರಾಂಚಿಯಲ್ಲಿರಲು ಬಯಸುತ್ತೇನೆ. ನಿಧಾನವಾಗಿ ನನ್ನ ಸ್ಥಿತಿ ಶೋಚನೀಯವಾಗುತ್ತಿದೆ. ನನಗೆ ಬರೆಯಲು ನಡೆದಾಡಲು ಕೂಡ ಸಾಧ್ಯವಿಲ್ಲದ ಸ್ಥಿತಿಯಲ್ಲಿ ನಾನು ಇದ್ದೇನೆ. ಆಹಾರವನ್ನೂ ಯಾರಾದರು ತಿನ್ನಿಸಬೇಕಾಗಿದೆ. ಹೀಗಿರುವಾಗ ನಾನು ರಾಂಚಿಯಲ್ಲಿರಲು ಬಯಸುತ್ತೇನೆ. ನನಗೆ ಜಾಮೀನು ನೀಡಿ,'' ಎಂದು ಕೋರಿದ್ದರು.

ಜೈಲಿನಲ್ಲೇ ಇದ್ದ ಸಂದರ್ಭ ಸ್ಟಾನ್‌ ಸ್ವಾಮಿ ಪತ್ರವೊಂದನ್ನು ಬರೆದಿದ್ದರು. ಈ ಪ್ರಕರಣದಲ್ಲಿ ಸಹ-ಆರೋಪಿಗಳು ಮತ್ತು ಜೈಲಿನ ಕೋಣೆಯಲ್ಲಿ ಸ್ಟಾನ್‌ ಜೊತೆಯಲ್ಲೇ ಇದ್ದ ಇಬ್ಬರು ಸ್ಟಾನ್‌ ಸ್ವಾಮಿಗೆ ನೀರು ಹಾಗೂ ಇತರ ದೈನಂದಿನ ಕೆಲಸಗಳಿಗೆ ಸಹಾಯ ಮಾಡುತ್ತಿದ್ದರು ಎಂದು ಹೇಳಿದರು.

 Stan Swamy passes away: A look at the background and timeline of Elgar Parishad case

01 ಜನವರಿ 2018 ರಂದು ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥ ಸಮಾರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮೇಲ್ಜಾತಿಯ ಜನರ ಗುಂಪಿನಿಂದ ದಲಿತರ ಮೇಲೆ ಹಲ್ಲೆ ನಡೆದಿತ್ತು. ಮಹಾರಾಷ್ಟ್ರದಾದ್ಯಂತ ದಲಿತರು ಎರಡು ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ ನಂತರ, ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿದ್ದವು. ಪುಣೆ ಗ್ರಾಮೀಣ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದರು. ಆದರೆ ಅದೇ ಸಮಯದಲ್ಲಿ, 30 ಡಿಸೆಂಬರ್ 2017 ರಂದು ನಡೆದ ಎಲ್ಗರ್ ಪರಿಷತ್ ಕಾರ್ಯದ ಬಗ್ಗೆ ಪುಣೆ ನಗರ ಪೊಲೀಸರು ತನಿಖೆ ಆರಂಭಿಸಿದರು.

ಪೊಲೀಸರ ಪ್ರಕಾರ, ಸಮಾರಂಭದ ಸಂಘಟಕರು ಮತ್ತು ಭಾಷಣಕಾರರು ಹಿಂಸಾಚಾರವನ್ನು ಪ್ರಚೋದಿಸುವ ಭಾಷಣಗಳನ್ನು ನೀಡಿದ್ದರು. ಪುಣೆ ನಗರ ಪೊಲೀಸರು ವಿವಿಧ ಕಾರ್ಯಕರ್ತರನ್ನು ಬಂಧಿಸಿ, ಈ ಕಾರ್ಯಕರ್ತರು ನಿಷೇಧಿತ ಸಿಪಿಐ (ಎಂ) (ಮಾವೋವಾದಿ) ಜೊತೆಗೆ ಸಂಬಂಧ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ. ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಈ ಜನರು ಭಾಗಿಯಾಗಿದ್ದರು ಹಾಗೂ ಪ್ರಧಾನಿ ಮೋದಿ ಹತ್ಯೆಯನ್ನೂ ಯೋಜಿಸುತ್ತಿದ್ದರು ಎಂದು ಪೊಲೀಸರು ದೂರಿದ್ದಾರೆ. ನಂತರ 2020 ರ ಆರಂಭದಲ್ಲಿ ಎನ್‌ಐಎ ಈ ಪ್ರಕರಣವನ್ನು ವಹಿಸಿಕೊಂಡಿದೆ. ಬಂಧಿತ ಆರೋಪಿಗಳಲ್ಲಿ ಫ್ರಾನ್ ಸ್ಟಾನ್ ಸ್ವಾಮಿ ಒಬ್ಬರು.

 Stan Swamy passes away: A look at the background and timeline of Elgar Parishad case

ಎಲ್ಗಾರ್‌ ಪರಿಷತ್ ಪ್ರಕರಣದ ಹಿನ್ನೆಲೆ

  • 1 ಜನವರಿ 2018 ರಂದು, ಭೀಮಾ ಕೋರೆಗಾಂವ್ ಯುದ್ಧದ 200 ನೇ ವಾರ್ಷಿಕೋತ್ಸವದ ಸ್ಮರಣೆಯ ಸಂದರ್ಭದಲ್ಲಿ ಭುಗಿಲೆದ ಹಿಂಸಾಚಾರ
  • ಹಿಂಸಾಚಾರದಲ್ಲಿ ದಲಿತರ ಜನಸಮೂಹದಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ, ಗಲಭೆಯಲ್ಲಿ ಪ್ರಾಣ ಕಳೆದುಕೊಂಡ ಓರ್ವ ವ್ಯಕ್ತಿ
  • ನಂತರ 2018 ರ ಜನವರಿ 2 ಮತ್ತು 3 ರಂದು ಮಹಾರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತ ಮತ್ತು ಹಿಂಸಾತ್ಮಕ ರೂಪ ಪಡೆದ ಕೆಲವು ದಲಿತ ಸಂಘಟನೆಗಳ ಪ್ರತಿಭಟನೆಗಳು ಹಿಂಸಾತ್ಮಕ
  • ಜೂನ್ 2 ರಂದು, ಸಂಭಾಜಿ ಭಿಡೆ (ಶಿವ ಪ್ರತಿಷ್ಠಾನ ಹಿಂದೂಸ್ತಾನ ಮುಖ್ಯಸ್ಥ) ಮತ್ತು ಮಿಲಿಂದ್ ಏಕಬೋಟೆ (ಸಮಸ್ತಾ ಹಿಂದೂ ಅಘಾಡಿ) ವಿರುದ್ಧ ಶೂನ್ಯ ಎಫ್ಐಆರ್ ದಾಖಲು
  • ಏಕಬೋಟೆ ಮತ್ತು ಸಂಭಾಜಿ ಹಿಂಸಾಚಾರ ಮತ್ತು ಗಲಭೆಯನ್ನು ಪ್ರಚೋದಿಸಿದ ಆರೋಪ
  • ಜನವರಿ 8 ರಂದು ಎಲ್ಗರ್ ಪರಿಷತ್ ಸಂದರ್ಭ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪುಣೆಯ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲು
  • ಭೀಮಾ-ಕೋರೆಗಾಂವ್ ಯುದ್ಧದ 200 ನೇ ವರ್ಷಾಚರಣೆಯ ನೆನಪಿಗಾಗಿ 2017 ರ ಡಿಸೆಂಬರ್ 31 ಎಲ್ಗಾರ್ ಪರಿಷತ್‌
  • ಪರಿಷತ್ ಸಂದರ್ಭದಲ್ಲಿ ಅನೇಕ ಸಾಮಾಜಿಕ ಕಾರ್ಯಕರ್ತರಿಂದ ಭಾಷಣ
  • ಪುಣೆ (ನಗರ) ಪೊಲೀಸರಿಂದ ಎಲ್ಗರ್ ಪರಿಷತ್ ಪ್ರಕರಣದ ತನಿಖೆ ಆರಂಭ, ಪುಣೆ (ಗ್ರಾಮೀಣ) ಪೊಲೀಸರಿಂದ ಏಕಬೋಟೆ ಮತ್ತು ಸಂಭಾಜಿ ವಿರುದ್ಧ ಎಫ್ಐಆರ್ ದಾಖಲು
  • 2018 ರ ಜೂನ್ 6 ರಂದು ಪುಣೆ ಪೊಲೀಸರಿಂದ ಐವರು ಸಾಮಾಜಿಕ ಕಾರ್ಯಕರ್ತರ ಬಂಧನ
  • 2018 ಆಗಸ್ಟ್ 28 ರಂದು ಮತ್ತೆ ಐವರು ಸಾಮಾಜಿಕ ಕಾರ್ಯಕರ್ತರ ಬಂಧನ
  • ಎಲ್ಗರ್ ಪರಿಷತ್ ಸಂದರ್ಭ ಈ ಆರೋಪಿಗಳಲ್ಲಿ ಕೆಲವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಹಾಗೂ ನಿಷೇಧಿತ ಸಿಪಿಐ (ಮಾವೋವಾದಿ) ಜೊತೆಗೆ ಸಂಬಂಧ ಹೊಂದಿದ್ದಾರೆ ಎಂದು ನ್ಯಾಯಾಲಯದಲ್ಲಿ ಉಲ್ಲೇಖಿಸಿದ ಪುಣೆ ಪೊಲೀಸರು
  • ಆರೋಪಿಗಳು ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮಾಡಿದ್ದಾರೆ, ನಿಷೇಧಿತ ಸಿಪಿಐ (ಮಾವೋವಾದಿ) ನ ಚಟುವಟಿಕೆಗಳಿಗೆ ಧನಸಹಾಯ ನೀಡಿದ್ದಾರೆ, ನಿಷೇಧಿತ ಸಂಘಟನೆ ಸೇರಲು ನಗರಗಳಲ್ಲಿನ ಯುವಕರನ್ನು ಪ್ರಚೋಧಿಸಿದ್ದಾರೆ ಎಂದು ಹೇಳಿದ ಪುಣೆ ಪೊಲೀಸರು
  • ರಾಜೀವ್ ಗಾಂಧಿ ಹತ್ಯೆಯ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ ಕೆಲವು ಎಲೆಕ್ಟ್ರಾನಿಕ್ ಪುರಾವೆಗಳು, ಕೆಲವು ಇಮೇಲ್‌ಗಳು ಮತ್ತು ಪತ್ರಗಳು ಲಭಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಪುಣೆ ಪೊಲೀಸರು
  • ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಪುಣೆ ಪೊಲೀಸರಿಂದ ಚಾರ್ಜ್‌ಶೀಟ್ ಸಲ್ಲಿಲೆ
  • 2020 ಜನವರಿ 24 ರಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡ ಎನ್ಐಎ
  • ಎನ್ಐಎಯಿಂದ ಇನ್ನಷ್ಟು ವ್ಯಕ್ತಿಗಳ ಬಂಧನ
  • 2020 ರ ಅಕ್ಟೋಬರ್ 9 ರಂದು ಎನ್ಐಎಯಿಂದ ಚಾರ್ಜ್ ಶೀಟ್ ಸಲ್ಲಿಕೆ
  • ಎಲ್ಲಾ ಆರೋಪಿಗಳ ವಿರುದ್ದ ದೇಶದ್ರೋಹ ಹಾಗೂ ಯುಎಪಿಎ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು
 Stan Swamy passes away: A look at the background and timeline of Elgar Parishad case

ಸ್ಟಾನ್ ಸ್ವಾಮಿಗೆ ಸಂಬಂಧಿಸಿದ ಮುಖ್ಯ ಘಟನೆಗಳು:

  • 2020 ಅಕ್ಟೋಬರ್ - ಫಾದರ್‌ ಸ್ಟಾನ್ ಸ್ವಾಮಿ ಬಂಧನ
  • 2021 ರ ಮೇ 18: ತಲೋಜಾ ಜೈಲಿನಲ್ಲಿ ನಡೆದ ಕೋವಿಡ್ ಪರೀಕ್ಷೆಯಲ್ಲಿ ಸ್ಟಾನ್‌ ಸ್ವಾಮಿ ವರದಿ ನೆಗೆಟಿವ್‌
  • ಮೇ 19- ಹದಗೆಟ್ಟ ಸ್ಟಾನ್ ಸ್ವಾಮಿ ಆರೋಗ್ಯ, ಜೆಜೆ ಆಸ್ಪತ್ರೆಗೆ ದಾಖಲು, ಅದೇ ದಿನ ಜೈಲಿಗೆ ವಾಪಾಸ್‌
  • ಮೇ 24- ಮತ್ತೆ ಹದಗೆಟ್ಟ ಸ್ಟಾನ್ ಸ್ವಾಮಿ ಆರೋಗ್ಯ, ಮತ್ತೆ ಜೆಜೆ ಆಸ್ಪತ್ರೆಗೆ ದಾಖಲು, ಅದೇ ದಿನ ಮತ್ತೆ ಜೈಲಿಗೆ ವಾಪಾಸ್‌
  • ಮೇ 28- ಸ್ಟಾನ್ ಸ್ವಾಮಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಬಾಂಬೆ ಹೈಕೋರ್ಟ್ ಆದೇಶ, ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸ್ಟಾನ್‌ ಸ್ವಾಮಿ ದಾಖಲು, ಕೋವಿಡ್‌ ದೃಢ

(ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+