ಜೀವವೈವಿಧ್ಯ ವನ ಭಾಗ 9; ಸಲೀಂ ಅಲಿ ಅವರಿಗೊಂದು ಸಲಾಂ…
ಜ್ಞಾನಭಾರತಿ
ಆವರಣದ ಜೀವವೈವಿಧ್ಯ ವನ ಹಲವು ಪಕ್ಷಿಗಳಿಗೆ ಆಸರೆಯಾಗಿದೆ. ಪಕ್ಷಿ ಪ್ರಿಯರು ಇಲ್ಲಿ ಬಂದು ಪಕ್ಷಿ ವೀಕ್ಷಣೆಯಲ್ಲಿ ತೊಡಗುತ್ತಾರೆ. ಪಕ್ಷಿಗಳ ಫೋಟೊ ಕ್ಲಿಕ್ಕಿಸುತ್ತಾರೆ. ಅವರು ಕಾಣುವ ವಿಶೇಷಣಗಳನ್ನು ದಾಖಲಿಸುತ್ತಾರೆ. ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳು ಬಂದು 'ವನಸಿರಿ'ಯನ್ನು ಕಣ್ತುಂಬಿಕೊಂಡು ಹೋಗುತ್ತಾರೆ, ಕಲಿಯುತ್ತಾರೆ, ಕಲಿಸುತ್ತಾರೆ. id="toptextpromo"> id='are-slot-1' class='oiad oi-axt oiadv'>ಈಗಾಗಲೇ
ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಬಂದು ಹೋಗಿರುವುದನ್ನು ಸ್ಮರಿಸಬಹುದು. ಈ ಬಗ್ಗೆ ಇನ್ನೊಂದಿಷ್ಟು ಮಾಹಿತಿಯಿದೆ, ಮುಂದೆ ಓದಿ... id='are-slot-2' class='oiad oi-axt oiadv'>
ಇದೆಲ್ಲಾ ಆದದ್ದಾದರೂ ಹೇಗೆ?
ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಜ್ಞಾನಭಾರತಿ ಆವರಣದಲ್ಲಿ ಜೀವವೈವಿಧ್ಯ ವನ ನಿರ್ಮಾಣ ಕಾರ್ಯ ಆರಂಭವಾಯಿತು. ಹಲವು ಜಾತಿಯ ಗಿಡ ಮರಗಳನ್ನು ಬೆಳೆಸುವ ಕೆಲಸ ನಡೆಯಿತು. ಕಲ್ಯಾಣಿ, ಚೆಕ್ ಡ್ಯಾಂಗಳನ್ನು ನಿರ್ಮಿಸಲಾಯಿತು. ಇದರಿಂದ ಒಂದು ಸಹಜ ಕಾಡಿನಲ್ಲಿ ಇರಬಹುದಾದ ವಾತಾವರಣ ಜ್ಞಾನಭಾರತಿ ಆವರಣಕ್ಕೆ ಪ್ರಾಪ್ತವಾಯಿತು. ಹಲವು ಜಾತಿಯ ಪಕ್ಷಿಗಳು ಇಲ್ಲಿ ನೆಲೆ ಕಂಡುಕೊಂಡವು.

ಸಲೀಂ ಅಲಿ ಹೇಳಿರುವ ಮಾತು...
Bird Man of Inida ಸಲೀಂ ಅಲಿ ಹೇಳುವಂತೆ "ಜನರು ಪಕ್ಷಿಧಾಮವೆಂದರೆ ಅದೊಂದು glorified zoo ಎಂದು ಭಾವಿಸಿದ್ದಾರೆ. ಆದರೆ ಅವರಿಗೆ ಅರ್ಥವಾಗದ ವಿಷಯವೇನೆಂದರೆ, ಒಂದು ಸಂರಕ್ಷಿತ ಪರಿಸರವಿದ್ದಾಗ ಹಕ್ಕಿ ಪಕ್ಷಿಗಳು ತಂತಾನೆ ಬರುತ್ತವೆ. ಅಲ್ಲಿ ಅವುಗಳಿಗೆ ಆಹಾರ ನೀರು ಸಿಕ್ಕರೆ, ಆ ಪ್ರದೇಶ ಗೂಡು ಕಟ್ಟಲು ಸುರಕ್ಷಿತ ಸ್ಥಳವೆನಿಸಿದರೆ ಅಲ್ಲಿಯೇ ಬದುಕುತ್ತವೆ"...
ಇದೀಗ ಜ್ಞಾನ ಭಾರತಿ ಆವರಣದಲ್ಲಿ ಆಗಿರುವುದು ಇದೇ. ಇಲ್ಲಿ ಕಾಡು ನಿರ್ಮಾಣಗೊಂಡಿದೆ. ಹಕ್ಕಿ ಪಕ್ಷಿಗಳಿಗೆ ತಂಗಲು ಸುರಕ್ಷಿತ ಪ್ರದೇಶವಾಗಿದೆ. ಅವುಗಳಿಗೆ ಆಹಾರವಿದೆ, ನೀರಿದೆ. So ಸಲೀಂ ಅಲಿ ಹೇಳಿದಂತೆ ನೈಸರ್ಗಿಕವಾದ ಪಕ್ಷಿಧಾಮವಾಗಿ ರೂಪುಗೊಂಡಿದೆ.

ಪಕ್ಷಿತಜ್ಞರಿಗೆ ಪ್ರಿಯವಾದ ತಾಣ
ಇಲ್ಲಿಗೆ ಬಂದು ಹೋಗುವ ಅನೇಕ ಪಕ್ಷಿ ತಜ್ಞರು ಅಳಿವಿನಂಚಿನಲ್ಲಿರುವ ಪಕ್ಷಿಗಳನ್ನೂ ಗುರುತಿಸಿ ಸಂಭ್ರಮಿಸಿದ್ದಾರೆ. ಡಾ.ಗಿರೀಶ್ ಮತ್ತು ಡಾ. ಕುಮಾರ್ ಜ್ಞಾನಭಾರತಿ ಆವರಣದ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರು ಕಂಡದ್ದು, ನೋಡಿದ್ದು ತಿಳಿದದ್ದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಪಕ್ಷಿಗಳ ಫೋಟೊಗಳನ್ನೂ ಕೂಡ.
ನಿತ್ಯ ಬೆಳಿಗ್ಗೆ ಇಲ್ಲಿ ಸೇರುವ ವಾಕರ್ಸ್ ಜಾಗರ್ಸ್ ಹಕ್ಕಿಗಳ ಚಿಲಿಪಿಲಿ ನಾದದೊಂದಿಗೆ ತಮ್ಮ ದಿನ ಆರಂಭಿಸುತ್ತೀರಲ್ಲವೇ?.
Recommended Video

ನ.12 ಸಲೀಂ ಅಲಿ 125ನೇ ಜನ್ಮದಿನ
ನಾಳೆ ದಿನಾಂಕ 12 ನವೆಂಬರ್. ಹಕ್ಕಿಗಳ ಚಿಲಿಪಿಲಿಯನ್ನು ಧ್ಯಾನವಿಟ್ಟು ಕೇಳಿಸಿಕೊಳ್ಳಿ. ಅವೆಲ್ಲವೂ BIRD MAN OF INDIA ಸಲೀಂ ಅಲಿ ಅವರಿಗೆ 125ನೇ ಜನ್ಮದಿನದ ಶುಭಾಶಗಳನ್ನು ಕೋರಬಹುದು. ಇಂಥದೊಂದು ಮಾನವ ನಿರ್ಮಿತ ವನ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಾದ್ದು ಎಲ್ಲಾ ಜವಾಬ್ದಾರಿಯುತ ನಾಗರೀಕರ, ಸಂಸ್ಥೆಗಳ, ಸರ್ಕಾರಗಳ ಕರ್ತವ್ಯವಾಗಬೇಕು. ಅದು ಬಿಟ್ಟು ಈ ವನಕ್ಕೆ ಕೊಡಲಿ ಹಾಕುವುದೆಂದರೆ ಮುಂದಿನ ಪೀಳಿಗೆಯ ಕತ್ತು ಹಿಚುಕಿದಂತೆ.
ಬೆಂಗಳೂರಿನಂಥ ಬರಗೆಟ್ಟ ನಾಡಿನಲ್ಲಿ ಜೀವ ತುಂಬಿಕೊಂಡಿರುವ ಜೀವವೈವಿಧ್ಯ ವನ ಉಳಿಸಿಕೊಳ್ಳುತ್ತೇವೆಂದು ಪ್ರತಿಜ್ಞೆಗೈಯುತ್ತಾ ಮತ್ತೊಮ್ಮೆ ಸಲೀಂ ಅಲಿ ಅವರ 125ನೇ ಜನ್ಮದಿನದಂದು ಅವರಿಗೆ BIRDS SALAM... NATURE SALAAM... ಹೇಳೋಣ.












Click it and Unblock the Notifications