Get Updates
Get notified of breaking news, exclusive insights, and must-see stories!

Draupadi Murmu: ದೇಶದ ಪ್ರಥಮ ಪ್ರಜೆಯಾಗಲಿರುವ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು

ಭಾರತದ ಮುಂದಿನ ರಾಷ್ಟ್ರಪತಿ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ವಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಹಿರಿಯ ಮುಖಂಡ ಯಶವಂತ್ ಸಿನ್ಹಾರ ಹೆಸರು ಪ್ರಕಟಗೊಂಡ ಬೆನ್ನಲ್ಲೇ ಎನ್ಡಿಎ ತನ್ನ ಅಧಿಕೃತ ಅಭ್ಯರ್ಥಿಯನ್ನು ಹೆಸರಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಅಭ್ಯರ್ಥಿ ಯಾರಾಗಬಹುದು ಎಂಬ ನಿರೀಕ್ಷೆಗೆ ಉತ್ತರ ಸಿಕ್ಕಿದ್ದು, ಬುಡಕಟ್ಟು ನಾಯಕಿ ದ್ರೌಪತಿ ಮುರ್ಮು ಅಧಿಕೃತ ಅಭ್ಯರ್ಥಿಯಾಗಿದ್ದಾರೆ.

ಪ್ರಧಾನಿ ನೇತೃತ್ವದಲ್ಲಿ ಜೂನ್ 21ರಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಈ ಸಭೆಯಲ್ಲಿ ಹಿರಿಯ ಮುಖಂಡರಾದ ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಮುಂತಾದವರು ಪಾಲ್ಗೊಂಡಿದ್ದರು.

ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಜಾರ್ಖಂಡ್ ಮಾಜಿ ಗವರ್ನರ್ ದ್ರೌಪದಿ ಮುರ್ಮು ಪರಿಗಣಿಸಿದ್ದು ಇದೇ ಮೊದಲಲ್ಲ. 2017ರಲ್ಲೂ ರಾಷ್ಟ್ರಪತಿ ಹುದ್ದೆಯ ಸಂಭಾವ್ಯ ಹೆಸರುಗಳಲ್ಲಿ ದ್ರೌಪದಿ ಹೆಸರು ಮುಂಚೂಣಿಯಲ್ಲಿತ್ತು. 2017ರಲ್ಲೂ ದ್ರೌಪದಿ ಹೆಸರನ್ನು ಮೋದಿ ಸೂಚಿಸಿದ್ದರು. ಇಂದು ಕೂಡಾ ಮೋದಿ ಅವರೇ ಹೆಸರು ಅಂತಿಮಗೊಳಿಸಿದ್ದಾರೆ.

2017ರಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಜೊತೆಗೆ ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಹೆಸರು ಚರ್ಚೆಗೆ ಬಂದಿತ್ತು. ಆದರೆ ದ್ರೌಪದಿ ಮುರ್ಮು ಹೆಸರನ್ನು ರಾಷ್ಟ್ರಪತಿ ಸ್ಥಾನಕ್ಕೆ ಮೋದಿ ಸೂಚಿಸಿದ್ದು ಏಕೆ ಎಂದು ಆಗ ಭಾರಿ ಚರ್ಚೆಯಾಗಿತ್ತು.

ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಪ್ರಪ್ರಥಮ ಬಾರಿಗೆ ದೇಶದ ಪ್ರಥಮ ಪ್ರಜೆ ಎಂದೆನಿಸಿಕೊಳ್ಳುವ ಕಾಲ ದೂರವಿಲ್ಲ. ಅಷ್ಟಕ್ಕೂ ಈ ದ್ರೌಪದಿ ಮುರ್ಮು ಯಾರು? ಅವರ ರಾಜಕೀಯ ಹಿನ್ನೆಲೆ ಏನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಬುಡಕಟ್ಟು ಸಮುದಾಯದ ಮಹಿಳೆ

ಬುಡಕಟ್ಟು ಸಮುದಾಯದ ಮಹಿಳೆ

ಒಡಿಶಾ ಮೂಲದ ದ್ರೌಪದಿ ಮುರ್ಮು ತಂದೆ ಬಿರಂಚಿ ನಾರಾಯಣ್ ಟುಡು. ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ದ್ರೌಪದಿ ಒಡಿಶಾದ ಮಾಜಿ ಸಚಿವೆ ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದವರು. ಕೇಂದ್ರ ಸಚಿವೆಯಾಗಿದ್ದವರು. ಉತ್ತಮ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರು ರಾಷ್ಟ್ರಪತಿಯಾದರೆ ಹಲವು ಪ್ರಥಮಗಳಿಗೆ ನಾಂದಿ ಹಾಡಲಿದ್ದಾರೆ.ಪ್ರತಿಭಾ ಪಾಟೀಲ್ ನಂತರ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಲಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆ, ಒಡಿಶಾ/ಜಾರ್ಖಂಡ್ ಮೂಲದಿಂದ ಉನ್ನತ ಹುದ್ದೆಗೆ ಅಲಂಕರಿಸುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.

2007 ರಲ್ಲಿ ನೀಲಕಂಠ ಎಂಬ ಪ್ರಶಸ್ತಿ

2007 ರಲ್ಲಿ ನೀಲಕಂಠ ಎಂಬ ಪ್ರಶಸ್ತಿ

ದ್ರೌಪದಿ ಮುರ್ಮು ತಮ್ಮ ನಿಸ್ವಾರ್ಥ ಜನಸೇವೆಯಿಂದಾಗಿ ಉತ್ತಮ ಶಾಸಕಿ ಎಂಬ ಪ್ರಶಸ್ತಿಯನ್ನೂ ಪಡೆದಿದ್ದರು. 2007 ರಲ್ಲಿ ನೀಲಕಂಠ ಎಂಬ ಪ್ರಶಸ್ತಿಯನ್ನೂ ಪಡೆದರು. 1997 ರಲ್ಲಿ ಅವರನ್ನು ಕೌನ್ಸಿಲರ್ ಆಗಿ ಆರಿಸಲಾಯಿತು. ನಂತರ ರಾಷ್ಟ್ರೀಯ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿಯೂ ನೇಮಕಗೊಂಡರು. ಒಡಿಶಾದ ಶಾಸಕಿಯಾಗಿ ಆಯ್ಕೆಯಾಗಿದ್ದಲ್ಲದೆ, ಸಚಿವರಾಗಿಯೂ ಕರ್ತವ್ಯ ನಿಭಾಯಿಸಿದ್ದರು. 2002 ರಿಂದ 2009ರವರೆಗೆ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರಾಗಿಯೂ ನೇಮಕಗೊಂಡರು.

16ನೇ ರಾಷ್ಟ್ರಪತಿ ಚುನಾವಣೆ

16ನೇ ರಾಷ್ಟ್ರಪತಿ ಚುನಾವಣೆ

16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ 14 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ. ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ.

ಬಿ.ಎ ಪದವೀಧರರಾದ ದ್ರೌಪದಿ

ಬಿ.ಎ ಪದವೀಧರರಾದ ದ್ರೌಪದಿ

ಬಿ.ಎ ಪದವೀಧರರಾದ ದ್ರೌಪದಿ, ರಾಯ್ ರಂಗಪುರ್ ದಲ್ಲಿರುವ ಶ್ರೀಅರಬಿಂದೋ ಕಾಲೇಜಿನಲ್ಲಿ ಗೌರವಾನ್ವಿತ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಒಡಿಶಾದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. 1997ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಪತಿ ಶ್ಯಾಮ್ ಚರಣ ಮುರ್ಮು ದಿವಂಗತರಾಗಿದ್ದು, ಇಬ್ಬರು ಪುತ್ರರು ದ್ರೌಪದಿ ಅವರನ್ನು ಅಗಲಿದ್ದಾರೆ. ಪುತ್ರಿ ಇತಿಶ್ರೀ ಮುರ್ಮು ಮಾತ್ರ ಜೊತೆಗಿದ್ದಾರೆ. 2017ರಲ್ಲಿ ದ್ರೌಪದಿ ವೈಯಕ್ತಿಕ 9. 5 ಲಕ್ಷ ರು ಆಸ್ತಿ ಘೋಷಿಸಿಕೊಂಡಿದ್ದರು.

 ಎನ್ಡಿಎ ಅಧಿಕೃತ ಅಭ್ಯರ್ಥಿ

ಎನ್ಡಿಎ ಅಧಿಕೃತ ಅಭ್ಯರ್ಥಿ

1997ರಲ್ಲಿ ರಾಯ್ ರಂಗಪುರ್ ಜಿಲ್ಲೆಯ ಕೌನ್ಸಿಲರ್ ಆಗಿ ಆಯ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಅದೇ ವರ್ಷ ಅಯ್ಕೆ
2000ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಸಾರಿಗೆ ಹಾಗೂ ವಾಣಿಜ್ಯ ಖಾತೆ ಸಚಿವೆಯಾಗಿದ್ದರು
ಒಡಿಶಾದ ಮೀನುಗಾರಿಕೆ ಸಚಿವೆಯಾಗಿ 2004ರ ತನಕ ಕಾರ್ಯ ನಿರ್ವಹಿಸಿದರು
ಮಯೂರ್ ಭಂಜ್ ಜಿಲ್ಲಾ ಬಿಜೆಪಿ ಅಧ್ಯಕ್ಷೆಯಾಗಿ 2002ರಿಂದ 2009ರ ತನಕ ಹುದ್ದೆ ನಿಭಾಯಿಸಿದರು.
2004 ರಿಂದ 2009 ರ ತನಕ ರಾಯ್ ರಂಗಪುರ್ ಶಾಸಕಿಯಾಗಿದ್ದರು.
2006ರಿಂದ 2009 ತನಕ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷೆಯಾಗಿದ್ದರು.
2015ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನಿಯುಕ್ತಿಗೊಂಡರು.
2017ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಹೆಸರು ಪರಿಗಣಿಸಲಾಗಿತ್ತು.
2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಧಿಕೃತ ಅಭ್ಯರ್ಥಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+