ಚಿಂತಾಮಣಿ ಸಮೀಕ್ಷೆ : ಸುಮಲತಾಗೆ ಸೋಲು, ಬಿಜೆಪಿಗೆ 22 ಸ್ಥಾನ
Recommended Video
ಲೋಕಸಭೆ ಚುನಾವಣೆ 2019ರ ಮತದಾನ ಪ್ರಕ್ರಿಯೆ ನಂತರ ಜನಪ್ರಿಯ ರಾಜಕೀಯ ತಜ್ಞ ಚಿಂತಾಮಣಿ ಅವರು ಎಲೆಕ್ಷನ್. ಇನ್ ವೆಬ್ ತಾಣಕ್ಕಾಗಿ ಸಂಗ್ರಹಿಸಿರುವ ಜನಾಭಿಪ್ರಾಯ ಸಮೀಕ್ಷೆ ಎಕ್ಸಿಟ್ ಪೋಲ್ ವರದಿ ಇಲ್ಲಿದೆ.
ಚಿಂತಾಮಣಿ 5 ಡಾಟ್ಸ್ ಸಮೀಕ್ಷಾ ವರದಿಯಂತೆ ಬಿಜೆಪಿ 271 ಗಳಿಸಲಿದ್ದು, ಎನ್ಡಿಎ 335 ಸ್ಕೋರ್ ಮಾಡಲಿದೆ. ಯುಪಿಎ 100 ಸ್ಥಾನ ಮುಟ್ಟಲು ಕಷ್ಟಪಡಲಿದೆ ಎಂದು ಏಪ್ರಿಲ್ ತಿಂಗಳಿನಲ್ಲಿ ನೀಡಿದ ಸಮೀಕ್ಷೆಯಲ್ಲಿ ಹೇಳಿತ್ತು.
ಆದರೆ, ಈಗ ಏಳು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬಳಿಕ ಎಕ್ಸಿಟ್ ಪೋಲ್ ವರದಿಯಂತೆ ಬಿಜೆಪಿ 285, ಎನ್ಡಿಎ 347, ಕಾಂಗ್ರೆಸ್ 53, ಯುಪಿಎ 89 ಹಾಗೂ ಇತರೆ 107 ಸ್ಥಾನಗಳು ಎಂದಿದೆ.
ದಕ್ಷಿಣ ಭಾರತದಲ್ಲಿ ಮಾತ್ರ ಎನ್ಡಿಎ ವಿರುದ್ಧ ಯುಪಿಎ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಲಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಮುರಿಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸಾಧ್ಯವಾಗಿಲ್ಲ. 2009ರಂತೆ 2019ರಲ್ಲೂ ಉತ್ತಮ ಫಲಿತಾಂಶ ನೀಡಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಏಪ್ರಿಲ್ ನಲ್ಲಿ ಬಂದಿದ್ದ ವರದಿ
ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 19 ಸ್ಥಾನ ಗಳಿಸಲಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾಗೆ ಗೆಲುವು ಸಿಗಲಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ 9 ಸ್ಥಾನ ಸಿಗಲಿದೆ ಎಂದು ಸಮೀಕ್ಷೆ ಹೇಳಿತ್ತು. ಆದರೆ, ಈಗ ಬಿಜೆಪಿ 22 ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ 6 ಸ್ಥಾನ ಗಳಿಸಲಿದೆ ಎಂದು ಮೇ 19ರಂದು ಎಕ್ಸಿಟ್ ಪೋಲ್ ವರದಿಯಲ್ಲಿ ಬಂದಿದೆ. ಬಿಜೆಪಿಗೆ 21 ಹಾಗೂ ಮಿತ್ರಪಕ್ಷಕ್ಕೆ 1 ಎಂದು ವರದಿ ನೀಡಿದೆ. ಪಕ್ಷೇತರ. ಇತರೆ 0 ಎಂದು ಹೇಳಿರುವುದರಿಂದ ಸುಮಲತಾ ಗೆಲುವು ಕಷ್ಟ ಎಂದು ಅಭಿಪ್ರಾಯಪಡಬಹುದು.

ಜೆಡಿಎಸ್ -ಕಾಂಗ್ರೆಸ್ ಫಲಿತಾಂಶ
ಉಳಿದಂತೆ, ಜೆಡಿಎಸ್ ಏಕೈಕ ಸ್ಥಾನ ಗಳಿಸಲಿದ್ದು, ಕಾಂಗ್ರೆಸ್ 7ಕ್ಕೆ ಕುಸಿಯಲಿದೆ. ಬಿಜೆಪಿ 19(2014ರಲ್ಲಿ 17), ಕಾಂಗ್ರೆಸ್ 7(9), ಜೆಡಿಎಸ್ 1(2), ಇತರೆ 1(0) ಫಲಿತಾಂಶ ಬರುವ ನಿರೀಕ್ಷೆಯಿದೆ ಎಂದು ಏಪ್ರಿಲ್ ತಿಂಗಳಿನಲ್ಲಿ ಚಿಂತಾಮಣಿ ವರದಿ ನೀಡಿತ್ತು. ಈಗ ಎಕ್ಸಿಟ್ ಪೋಲ್ ನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ಸಿಗೆ 6 ಸ್ಥಾನ ಎಂದು ಹೇಳಿದೆ. ಕಾಂಗ್ರೆಸ್ಸಿಗೆ 4, ಜೆಡಿಎಸ್ ಗೆ 2 ಎಂದು ಮಾತ್ರ ಹೇಳಿದೆ. ಹಾಸನ, ಮಂಡ್ಯ ಹಾಗೂ ತುಮಕೂರು ಪೈಕಿ ಒಂದು ಸ್ಥಾನ ಕಳೆದುಕೊಳ್ಳಲಿದೆ ಎಂದು ಹೇಳಿದೆ.

ಮಂಡ್ಯದಲ್ಲಿ ಯಾವ ಅಂಶ ಪ್ರಮುಖವಾಯಿತು
ಮಂಡ್ಯದಲ್ಲಿ ಆಡಳಿತರೂಢ ಪಕ್ಷದ ಒಮ್ಮತದ ಅಭ್ಯರ್ಥಿ, ಮುಖ್ಯಮಂತ್ರಿಗಳ ಪುತ್ರನಿಗೆ ಸೋಲುಂಟಾಗಲು ಮೈತ್ರಿ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಮುಖ್ಯ ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಇದೆಲ್ಲವೂ ಕೊನೆ ಕ್ಷಣದಲ್ಲಿ ಬದಲಾವಣೆ ಕಂಡಿದ್ದು, ಅತ್ಯಂತ ಕಡಿಮೆ ಅಂತರದಿಂದ ನಿಖಿಲ್ ಪರವಾಗಿ ಫಲಿತಾಂಶ ತಿರುಗಲಿದೆ ಎಂದು ಚಿಂತಾಮಣಿ ಹೇಳಿದೆ.

ಸರಾಸರಿಯಲ್ಲೂ ಸುಮಲತಾಗೆ ಸಿಹಿ ಸುದ್ದಿಯಿಲ್ಲ
ರಿಪಬ್ಲಿಕ್ ಟಿವಿ ಸಿ ವೋಟರ್ , ಜನ್ ಕಿ ಬಾತ್, ಇಂಡಿಯಾ ಟುಡೇ ಅಕ್ಸಿಸ್ ಹಾಗೂ ಮೈ ಆಕ್ಸಿಸ್ ನಲ್ಲಿ ಸುಮಲತಾಗೆ ಗೆಲುವು ಎಂದು ಹೇಳಲಾಗಿತ್ತು. ಮಿಕ್ಕ ಐದಾರು ಸಮೀಕ್ಷೆಗಳಲ್ಲಿ ಸುಮಲತಾಗೆ ಸೋಲು ಎನ್ನಲಾಗಿದೆ. ಹೀಗಾಗಿ ಪ್ರಮುಖ ಹತ್ತು ಎಕ್ಸಿಟ್ ಪೋಲ್ ಗಳ ಪೈಕಿ 6ರಲ್ಲಿ ನಿಖಿಲ್ ಪರ ಫಲಿತಾಂಶ ಬಂದಿದೆ. 4ರಲ್ಲಿ ಸುಮಲತಾ ಪರ ವರದಿ ಇದೆ.











Click it and Unblock the Notifications