Get Updates
Get notified of breaking news, exclusive insights, and must-see stories!

Makar Sankranti 2023: ಮಕರ ಸಂಕ್ರಾಂತಿ ಹಬ್ಬವನ್ನು ಏಕೆ ಆಚರಣೆ ಮಾಡುತ್ತಾರೆ?; ವಿಶೇಷತೆ ಏನು?, ಇಲ್ಲಿದೆ ವಿವರ

ಬೆಂಗಳೂರು, ಜನವರಿ, 01; ಮಕರ ಸಂಕ್ರಾಂತಿ ಹಬ್ಬವನ್ನು ಭಾರತದಾದ್ಯಂತ ವಿವಿಧ ಶೈಲಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ ಹಬ್ಬವನ್ನು ಯಾವುದೇ ಶೈಲಿಯಲ್ಲಿ ಆಚರಣೆ ಮಾಡಿದರೂ ಕೂಡ ಉದ್ದೇಶ ಮಾತ್ರ ಒಂದೇ ಆಗಿರುತ್ತದೆ. ರೈತರ ಬೆಳೆದ ಬೆಳೆಗಳು ಬಂದ ಸಂತೋಷದಲ್ಲಿ ಈ ಹಬ್ಬವನ್ನು ದೇಶದೆಲ್ಲೆಡೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದ ದಿನದಂದೇ ಅನೇಕ ಐತಿಹಾಸಿಕ ಮತ್ತು ಪೌರಾಣಿಕ ಘಟನೆಗಳು ನಡೆದಿವೆ ಎನ್ನುವ ಉಲ್ಲೇಖಗಳನ್ನು ಕಾಣಬಹುದಾಗಿದೆ. ಹಾಗಾದರೆ ಸಂಪ್ರದಾಯಬದ್ಧ ಮಕರ ಸಂಕ್ರಾಂತಿ ಹಬ್ಬದ ಆಚರಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಬಹುದಾಗಿದೆ.

ಹಾಗೆಯೇ ಮಕರ ಸಂಕ್ರಾಂತಿಯ ಹಬ್ಬದ ಉತ್ಸವಕ್ಕೆ ಕರ್ನಾಟಕ ರಾಜ್ಯವು ಈಗಿನಿಂದಲೇ ಸಜ್ಜುಗೊಳ್ಳುತ್ತಿದೆ. ಜೊತೆಗೆ "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ" ಎಂಬುದು ಪ್ರಚಲಿತದಲ್ಲಿರುವ ಕನ್ನಡದ ಮಾತಾಗಿದೆ. ಇದ ಅರ್ಥ ಒಬ್ಬರು ಎಳ್ಳು ಮತ್ತು ಬೆಲ್ಲದ ಮಿಶ್ರಣವನ್ನು ತಿನ್ನಬೇಕು. ಮತ್ತು ಒಳ್ಳೆಯ ಮಾತುಗಳನ್ನು ಹೇಳಬೇಕು. ಅಲ್ಲದೇ ಈ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ಮನೆ-ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು ಮತ್ತು ಬೆಲ್ಲದ ಮಿಶ್ರಣ, ಸಕ್ಕರೆ ಅಚ್ಚನ್ನು ಒಳಗೊಂಡಿರುವ ತಟ್ಟೆಗಳನ್ನು ಬದಲಿಸಿಕೊಳ್ಳುತ್ತಾರೆ. ಈ ಸಂಪ್ರದಾಯದಲ್ಲಿ ಸಂತೋಷವನ್ನು ಹಂಚಿಕೊಳ್ಳುವ ಗುಣಗಳನ್ನು ಕಾಣಬಹುದಾಗಿದೆ. ಆದ್ದರಿಂದ ಈ ಹಬ್ಬವನ್ನು ಆಚರಿಸಲು ರಾಜ್ಯ ಹಾಗೂ ದೇಶದಲ್ಲಿ ಒಂದು ವಾರ ಇದ್ದಹಾಗೆ ಸಿದ್ಧತೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ.

 ಸಂಕ್ರಾಂತಿ ಹಬ್ಬದ ಆಚರಣೆಯ ರೀತಿ

ಸಂಕ್ರಾಂತಿ ಹಬ್ಬದ ಆಚರಣೆಯ ರೀತಿ

ಇನ್ನು ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಣ್ಣಬಣ್ಣದ ಅಲಂಕಾರಗಳು, ಹಾಡುಗಾರಿಕೆ ಮತ್ತು ನೃತ್ಯ, ಗಾಳಿಪಟ ಹಾರಿಸುವುದು, ದೀಪೋತ್ಸವಗಳು, ರಂಗೋಲಿ ಬಿಡಿಸುವುದನ್ನು ಕಾಣಬಹುದಾಗಿದೆ. ಕರ್ನಾಟಕದ ಮತ್ತೊಂದು ಹಳೆಯ ಆಚರಣೆಯೆಂದರೆ, ಜನರು ತಮ್ಮ ಹಸು ಮತ್ತು ದನಗಳನ್ನು ಹೊಳೆಯುವ ವೇಷಭೂಷಣಗಳು ಮತ್ತು ಆಭರಣಗಳಿಂದ ಅಲಂಕರಿಸುತ್ತಾರೆ. ದನಗಳ ಈ ಪ್ರದರ್ಶನವನ್ನು ಸ್ಥಳೀಯವಾಗಿ 'ಕಿಚ್ಚು ಹಾಯಿಸೋದು' ಎಂದು ಕರೆಯಲಾಗುತ್ತದೆ. ಈ ಚಟುವಟಿಕೆಗಳು ಸ್ನೇಹ ಮನೋಭಾವ, ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಮಕರ ಸಂಕ್ರಾಂತಿಯಂತೆ ಭಾರತದಲ್ಲಿ ಯಾವುದೇ ಹಬ್ಬವು ಕೂಡ ಸಹ ಅದರ ವಿಶೇಷ ಭೋಜನಾಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಈ ಹಬ್ಬದ ಸಮಯದಲ್ಲಿ ಕೆಲವೆಡೆ ಪೊಂಗಲ್, ಕಾಯಿಸಿದ ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿದ ಅನ್ನ ಈ ಎಲ್ಲರೂ ಸಿದ್ಧಪಡಿಸಿ ತಿನ್ನುತ್ತಾರೆ. ಹಾಗೆಯೇ ಕರ್ನಾಟಕದಲ್ಲಿ ಎಳ್ಳು, ಬೆಲ್ಲ, ಹುರಿಗಡಲೆ, ತುರಿದ ಕಾಯಿಯನ್ನು ಬೆರೆಸಿ ಹಂಚುವ ಪದ್ಧತಿಯೂ ಇದೆ.

 ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನು?

ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದೇನು?

ಮಹಾಭಾರತ ಕಾಲದಲ್ಲಿ, ಪಿತಾಮಹ ಭೀಷ್ಮ ಸೂರ್ಯನು ತನ್ನ ದೇಹವನ್ನು ತೊರೆಯಲು ಉತ್ತರಾಯಣಕ್ಕಾಗಿ ಕಾಯುತ್ತಿದ್ದನು. ಯಾಕೆಂದರೆ ಉತ್ತರಾಯಣದಲ್ಲಿ ದೇಹವನ್ನು ತೊರೆಯುವ ಆತ್ಮಗಳು ಕೆಲವು ಕಾಲ ದೇವಲೋಕಕ್ಕೆ ಹೋಗುತ್ತವೆ ಎನ್ನುವ ಉಲ್ಲೇಖವಿದೆ. ಪಿತಾಮಹರ ಶ್ರಾದ್ಧ ಸಮಾರಂಭವನ್ನು ಸೂರ್ಯನ ಉತ್ತರಾಯಣ ಚಲನೆಯಲ್ಲೂ ನಡೆಸಲಾಗುತ್ತದೆ. ಇದರ ಫಲವಾಗಿ ಇಂದಿಗೂ ಮಕರ ಸಂಕ್ರಾಂತಿಯ ದಿನದಂದು ಪೂರ್ವಜರ ಸಂತೋಷಕ್ಕಾಗಿ ಎಳ್ಳು ಮತ್ತು ನೀರನ್ನು ಅರ್ಪಿಸುವ ಪದ್ಧತಿ ನಡೆದುಕೊಂಡು ಬರುತ್ತಲೇ ಇದೆ. ಹಾಗೆಯೇ ಉತ್ತರಾಯಣದ ಮಹತ್ವವನ್ನು ವಿವರಿಸುತ್ತಾ, ಶ್ರೀ ಕೃಷ್ಣ ಪರಮಾತ್ಮನು ಸ್ವತಃ ಗೀತೆಯಲ್ಲಿ ಹೀಗೆಂದು ಹೇಳಿದ್ದಾನೆ. ಉತ್ತರಾಯಣದ ಆರು ತಿಂಗಳ ಮಂಗಳಕರ ಅವಧಿಯಲ್ಲಿ, ಸೂರ್ಯ ದೇವರು ಉತ್ತರಾಯಣವಾಗಿದ್ದಾಗ ಮತ್ತು ಭೂಮಿಯು ಪ್ರಕಾಶಮಾನವಾಗಿ ಉಳಿಯುತ್ತದೆ. ಆಗ ದೇಹವನ್ನು ಈ ಬೆಳಕಿನಲ್ಲಿ ಬಿಡುವುದರಿಂದ ಪುನರ್ಜನ್ಮವನ್ನು ಪಡೆಯುವುದಿಲ್ಲ. ಅಂತಹ ಜನರು ಬ್ರಹ್ಮನಿಂದ ವರವನ್ನು ಪಡೆಯುತ್ತಾರೆ. ಇದಕ್ಕೆ ವಿರುದ್ಧವಾಗಿ, ಸೂರ್ಯನು ದಕ್ಷಿಣಾಯನದಲ್ಲಿದ್ದಾಗ, ಭೂಮಿಯು ಕತ್ತಲೆಯಾಗುತ್ತದೆ. ಮತ್ತು ಈ ಕತ್ತಲೆಯಲ್ಲಿ ದೇಹವನ್ನು ಬಿಟ್ಟ ನಂತರ, ಒಬ್ಬರು ಮತ್ತೆ ಜನ್ಮ ಪಡೆಯಬೇಕಾಗುತ್ತದೆ ಎಂದು ಹೇಳಿದ್ದಾನೆ.

 ಪ್ರಜ್ಞೆಯ ಅಭಿವೃದ್ಧಿಯೇ ಮಕರ ಸಂಕ್ರಾಂತಿ

ಪ್ರಜ್ಞೆಯ ಅಭಿವೃದ್ಧಿಯೇ ಮಕರ ಸಂಕ್ರಾಂತಿ

ಮಕರ ಸಂಕ್ರಾಂತಿಯ ಹಬ್ಬವು ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಆದಿಶಕ್ತಿ ಮತ್ತು ಸೂರ್ಯನ ಪೂಜೆ ಮತ್ತು ಆರಾಧನೆಯ ಪವಿತ್ರ ದಿನವಾಗಿದೆ ಎನ್ನುವ ಉಲ್ಲೇಖವಿದೆ. ಇದು ದೇಹ, ಮನಸ್ಸು ಮತ್ತು ಆತ್ಮಕ್ಕೆ ಶಕ್ತಿಯನ್ನು ನೀಡುತ್ತದೆ. ಸಂತರು ಮತ್ತು ಋಷಿಗಳ ಪ್ರಕಾರ, ಜೀವಿಗಳ ಆತ್ಮವು ಮಕರ ಸಂಕ್ರಾಂತಿಯ ಪರಿಣಾಮದಿಂದ ಶುದ್ಧವಾಗುತ್ತದೆ. ಪರಿಹರಿಸುವ ಶಕ್ತಿ ಹೆಚ್ಚಾಗುತ್ತದೆ. ಜ್ಞಾನದ ನರಗಳು ಅಭಿವೃದ್ಧಿಗೊಳ್ಳುತ್ತವೆ. ಹೀಗೆ ಜೀವಿಗಳಲ್ಲಿ ಪ್ರಜ್ಞೆಯನ್ನು ಬೆಳೆಸುವ ಹಬ್ಬವೇ ಮಕರ ಸಂಕ್ರಾಂತಿಯಾಗಿದೆ. ಹಾಗೆಯೇ ಎಳ್ಳಿನ ನೀರಿನಿಂದ ಸ್ನಾನ, ಎಳ್ಳಿನ ದಾನ, ಎಳ್ಳಿನಿಂದ ಮಾಡಿದ ಆಹಾರ, ಎಳ್ಳು ನೈವೇದ್ಯ ಇತ್ಯಾದಿಗಳನ್ನು ಮಕರ ಸಂಕ್ರಾಂತಿಯಲ್ಲಿ ಮಾಡಲಾಗುತ್ತದೆ.

 ಗಂಗೆಯಲ್ಲಿ ಸ್ನಾನ ಮಾಡಿದ್ರೆ ಆಗುವ ಉಪಯೋಗ

ಗಂಗೆಯಲ್ಲಿ ಸ್ನಾನ ಮಾಡಿದ್ರೆ ಆಗುವ ಉಪಯೋಗ

ಮಕರ ಸಂಕ್ರಾಂತಿಯ ದಿನದಂದು ಸೂರ್ಯನನ್ನು ಪೂಜಿಸಲಾಗುತ್ತದೆ ಮತ್ತು ಆರಾಧಿಸಲಾಗುತ್ತದೆ. ಈ ದಿನ ಎಳ್ಳು, ಬೆಲ್ಲವನ್ನು ತಿಂದು ಅದನ್ನು ಪ್ರಸಾದ ರೂಪದಲ್ಲಿ ಹಂಚುವ ಸಂಪ್ರದಾಯವಿದೆ. ಸೂರ್ಯನ ಪ್ರಕಾಶಮಾನವಾದ ಕಿರಣವನ್ನು ರಶ್ಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಆಧ್ಯಾತ್ಮಿಕ ಪ್ರಗತಿಗೆ ಸೂರ್ಯನ 7ನೇ ಕಿರಣವು ಸ್ಫೂರ್ತಿ ಎಂದು ಹೇಳಲಾಗುತ್ತದೆ. ಏಳನೇ ಕಿರಣದ ಪರಿಣಾಮವು ಭಾರತದಲ್ಲಿ ಗಂಗಾ ಮತ್ತು ಯಮುನಾ ನದಿಗಳ ನಡುವೆ ದೀರ್ಘಕಾಲ ಇರುತ್ತದೆ. ಈ ದಿನ ಗಂಗೆಯಲ್ಲಿ ಸ್ನಾನ ಮಾಡಿ ತರ್ಪಣ ಮಾಡುವುದಕ್ಕೆ ವಿಶೇಷವಾದ ಮಹತ್ವವಿದೆ ಎನ್ನುವ ಪ್ರತೀತಿ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+