ಗಂಡಸರು ಶಾಶ್ವತವಾಗಿ ಚೇತರಿಸಿಕೊಳ್ಳದಂತೆ ಮಾಡಿದ ಆ 'ಗಾದೆ ಮಾತು'
ಸಂದರ್ಭ 1: ಶಿಶುವಿನ ಎದೆಯ ಮೇಲೆ ' ಮರ್ದ್' ಅಂತ ಚಾಕುವಿನಲ್ಲಿ ಕೆತ್ತುವ ಅವನ ತಂದೆ, "ನೋಡು ನಾನು ಅವನ ಎದೆಯ ಮೇಲೆ ಚಾಕುವಿನಿಂದ ಕೆತ್ತಿದರು ಮಗು ನಗುತ್ತಲೇ ಇದೆ!!" ಎಂದು ಗರ್ವದಿಂದ ಹೇಳುತ್ತಾನೆ.
ಸಂದರ್ಭ 2: ಹೀರೋ ಸೆರೆಯಾಗಿರುತ್ತಾನೆ, ಅವನನ್ನು ಬಂಧಿಸಿಟ್ಟಿರುವ ಖಳನಾಯಕಿಯು " ನಿನಗೆ ನೋವು ಆಗುತ್ತಿಲ್ಲವೇ" ಎಂದು ಕೇಳಿದ ಪ್ರಶ್ನೆಗೆ " ಮರ್ದ್ ಕೋ ದರ್ದ್ ನಹಿ ಹೋತಾ ಹೇ" ಎಂದು ನಗುತ್ತ ಸೆಡು ಹೊಡೆಯುತ್ತಾನೆ.
ಈ ಎರಡು ಸಂದರ್ಭವು ಅಮಿತಾಭ್ ಬಚ್ಚನ್ ಅವರ ಮರ್ದ್ ಸಿನಿಮಾದ್ದು. ಎರಡು ಸನ್ನಿವೇಶದಲ್ಲೂ ಗಂಡು ಮಗುವಿಗೆ / ಗಂಡಸಿಗೆ ನೋವು ಅಗೋದಿಲ್ಲ ಅನ್ನೋ ಅಂಶವನ್ನು ಎತ್ತು ಹಿಡಿದಿದ್ದಾರೆ. 1985ರಲ್ಲಿ ಬಿಡುಗಡೆಯಾದ ಸಿನಿಮಾದಲ್ಲಿ ಅಮಿತಾಭ್ ರವರು ' ಆಂಗ್ರಿ ಯಂಗ್ ಮ್ಯಾನ್' ಆಗಿ ಮಿಂಚಿದ್ದಾರೆ. ಆದರೆ ಈಗಿನ ಕಾಲದಲ್ಲೂ " ಮರ್ದ್ ಕೋ ದರ್ದ್ ನಹಿ ಹೋತಾ ಹೇ " ಅಂತ ಹೇಳಿಕೊಳ್ಳುತ್ತ, ತಮ್ಮ ಭಾವನೆಗಳನ್ನ ಹತ್ತಿಕ್ಕಿ, ಗಂಡಸರು ಭಾವನಾತ್ಮಕವಾಗಿ ಬೆಂದು ಹೋಗುತ್ತಿರೋದು ಮಾತ್ರ ವಿಪರ್ಯಾಸ.

ಚಿಕ್ಕ ಮಗುವಿನಿಂದ, ಗಂಡಸು ಅಂದರೆ ಗಟ್ಟಿ ಜೀವ, ಎಲ್ಲವನ್ನೂ ಸಹಿಸಿಕೊಳ್ಳಬೇಕು ಅನ್ನೋದನ್ನ ತಲೆಗೆ ತುಂಬಲಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷನು ಎಲ್ಲರಿಗಿಂತಲೂ ಶಕ್ತಿಶಾಲಿ, ಎಲ್ಲವನ್ನು ನಡೆಸುವವನು, ಎಲ್ಲವನ್ನು ನಿಭಾಯಿಸುವವನು. ಮನೆಯ ಒಡೆಯ, ಯಜಮಾನ ಅನ್ನೋದನ್ನ ಅವನ ವ್ಯಕ್ತಿತ್ವಕ್ಕೆ ಹಂತ ಹಂತವಾಗಿ ಅಂಟಿಸುತ್ತಾರೆ.
ಅದರಂತೆ ಬದುಕುತ್ತಿರುವ ಗಂಡಸರು ತಾವು ಸುಟ್ಟು ಹೋಗುತ್ತಿರುವಾಗಲೂ ಬೆಳಕು ನೀಡುವ ಮೇಣದ ಬತ್ತಿಯಂತೆ ಆಗಿದ್ದಾರೆ ಅಂದರೆ ಸುಳ್ಳಲ್ಲ. ಇಲ್ಲಿ ಅವರು ಹೆಚ್ಚು ಇವರು ಕಮ್ಮಿ ಅಂತ ಅಲ್ಲ. ಒಂದು ಸಮಾಜ ಅಂದ ಮೇಲೆ ಗಂಡಸರೂ ಬೇಕು, ಹೆಂಗಸರೂ ಬೇಕು. ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಆದರೆ ಹೆಂಗಸು ತನ್ನ ಭಾವನೆಯನ್ನು ವ್ಯಕ್ತಪಡಿಸಬಹುದು.
ಹೆಂಗಸು ಅಳಬಹುದು, ಯಾಕೆ ಅಂದರೆ ಅವಳು ಅಬಲೆ ಎಂದು ನಿರ್ಧರಿಸಿದ ಸಮಾಜ, ಗಂಡಸರಿಗೆ ಮಾತ್ರ ಭಾವನೆಗಳ ಮೇಲೆ ನಿರ್ಬಂಧಗಳನ್ನು ಹೇರಿತು. ಗಂಡಸರು ಅತ್ತರೆ, ದುಃಖ ತೋಡಿಕೊಂಡರೆ ಅದನ್ನು ಅವನ ದೌರ್ಬಲ್ಯ ಅಂತ ಬಿಂಬಿಸಲಾಯಿತು. ಅದು ಎಲ್ಲಿಯವರೆಗೆ ಅಂದರೆ " ಅಳುವ ಗಂಡಸರನ್ನು, ನಗುವ ಹೆಂಗಸನ್ನು ನಂಬಬೇಡಿ " ಅನ್ನೋ ಗಾದೆಯನ್ನು ಮಾಡಿ, ಗಂಡಸರು ಶಾಶ್ವತವಾಗಿ ಚೇತರಿಸಿಕೊಳ್ಳದಂತೆ ಮಾಡಿಬಿಟ್ಟರು.
ಇದಕ್ಕೆ ತಕ್ಕಂತೆ " ನಾನು ಮಳೆ ಬರುವಾಗ ಅತ್ತುಬಿಡಲು ಬಯಸುತ್ತೇನೆ, ಯಾಕೆ ಅಂದರೆ ಯಾರು ಕೂಡ ನನ್ನ ಕಣ್ಣೀರು ನೋಡಬಾರದು" ಅನ್ನೋ ಚಾರ್ಲಿ ಚಾಪ್ಲಿನ್ನ ಪ್ರಸಿದ್ಧವಾದ ವಾಕ್ಯ!!
ಗಂಡಸರು ಇದರಿಂದ ಇನ್ನೊಬ್ಬರ ಮುಂದೆ ಭಾವನೆ ವ್ಯಕ್ತಪಡಿಸುವುದಕ್ಕೂ ಹಿಂದು ಮುಂದು ನೋಡಬೇಕಾಗಿದೆ. ನಾನು ಹೇಗೆ ಮಾತನಾಡಿದರೆ ನಾನು ಗಂಡಸು ಅಂತ ತೋರಿಸಿಕೊಳ್ಳಬಹುದು ಅನ್ನೋದು ಅವರ ಮನಸಿನಲ್ಲಿ ಯಾವಾಗಲು ಇರುತ್ತದೆ.
ಯಾವುದೇ ಪರಿಸ್ಥಿತಿಯಲ್ಲೂ ತನ್ನ ಗಂಡಸುತನ , ಮೇಲ್ ಈಗೋ ಬಿಡಬಾರದು ಅನ್ನೋದು ಅವರ ಮನಸಲ್ಲಿ ಅಚ್ಚಾಗಿರತ್ತೆ. ಅದು ಎಷ್ಟರ ಮಟ್ಟಿಗೆ ಅಂದರೆ ಅವರು ಅದಕ್ಕೋಸ್ಕರ ಒಂದು ಮುಖವಾಡವನ್ನು ಹಾಕಿ ಬದುಕುವ ಮಟ್ಟಿಗೆ ಬಂದಿರುತ್ತಾರೆ. ಅವರು ಯಾವುದೇ ಭಾವನೆಗಳನ್ನು ವ್ಯಕ್ತಪಡಿಸಬೇಕಾದರೂ ಕೋಪ, ಆವೇಶದ ಮುಖಾಂತರ ಅದನ್ನು ವ್ಯಕ್ತಪಡಿಸುತ್ತಾರೆ.
ಯಾಕಂದರೆ ಅದು ಗಂಡಸುತನದ ಒಂದು ಭಾಗವೆಂದು ನಂಬುತ್ತಾರೆ, ಸಮಾಜ ನಂಬಿಸುತ್ತದೆ. ಅದರ ಪರಿಣಾವೇ, ಹೈ ಬಿಪಿ, ಹೃದಯ ರೋಗ, ಕೌಟುಂಬಿಕ ಹಿಂಸೆ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಒಂದು ಸರ್ವೆ ಪ್ರಕಾರ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುವ ಗಂಡಸರ ಸಂಖ್ಯೆಯು ಹೆಂಗಸರಿಗಿಂತ ಹೆಚ್ಚು. ಗಂಡಸರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚು.
ನ್ಯಾಷನಲ್ ಮೆಂಟಲ್ ಹೆಲ್ತ್ ಹೆಲ್ಪಲೈನ್,' ಕಿರಣ' ಗೆ ಪೋನು ಮಾಡುತ್ತಿರುವ 70% ಜನರು ಗಂಡಸರು. ಸದ್ಯ ಈಗಲಾದರೂ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರಲ್ಲ ಅನ್ನೋ ಸಮಾಧಾನ ಬಿಟ್ಟರೆ, ಆ ಸಂಖ್ಯೆಯು ಆಘಾತಕಾರಿ. ದಯವಿಟ್ಟು ನಿಮ್ಮ ಮನೆಗಳಲ್ಲಿ, ನಿಮ್ಮ ಸುತ್ತ ಮುತ್ತಲಲ್ಲಿ ಇರುವ ಗಂಡಸರ ಬಗ್ಗೆ ಗಮನ ನೀಡಿ. ಅವರ ಆರೋಗ್ಯ ಏರುಪೇರು, ಅದು ದೈಹಿಕವಾಗಿರಬಹದು, ಮಾನಸಿಕವಾಗಿರಬಹದು, ಅದನ್ನು ನಿರ್ಲಕ್ಷಿಸಿಬೇಡಿ.
ಅವರ ವರ್ತನೆಗಳಿಗೆ ಗಮನ ಕೊಡಿ. ಅವರಲ್ಲಿ ಸಮಸ್ಯೆಗಳು ಇದೆಯಾ ಅಂತ ತಿಳಿದುಕೊಳ್ಳಿ. ಅವರಿಗೆ ಮಾತನಾಡಲು ಅವಕಾಶ ಕೊಡಿ. ಕೇಳಿಸಿಕೊಳ್ಳುವ ಕಿವಿ, ಒರಗಲು ಭುಜವನ್ನು ನೀಡಿ....ಎಲ್ಲದಕ್ಕಿಂತ ಹೆಚ್ಚಾಗಿ ಅವರು ಭಾವನಾತ್ಮಕವಾದ ಏರಿಳಿತಗಳನ್ನು ಅನುಭವಿಸುತ್ತಿರುವಾಗ ಅವರ ಹೆಗಲ ಮೇಲೆ ಕೈ ಹಾಕಿ, ಅವರಿಗೆ ಭರವಸೆಯನ್ನು ನೀಡುತ್ತಾ ಹೇಳಿ " ಗಂಡಸರೇ ಅತ್ತು ಬಿಡಿ ಪ್ಲೀಸ್ " ...
-
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ












Click it and Unblock the Notifications