Diabetes: ಶಿಸ್ತುಬದ್ಧ ಜೀವನ ಕ್ರಮಗಳಿಂದ ಮಧುಮೇಹಕ್ಕೆ ಕಡಿವಾಣ ಹಾಕಿ
ಮೊದಲೆಲ್ಲ ಮಧುಮೇಹ ಬಂದಿದೆ ಎಂದಾಕ್ಷಣ ರೋಗಿಗಳು ನಮ್ಮ ಬದುಕು ಮುಗಿದೇ ಹೋಯಿತು ಎಂಬ ತೀರ್ಮಾನಕ್ಕೆ ಬಂದು ಬಿಡುತ್ತಿದ್ದರು. ಆದರೆ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವೈದ್ಯರು ಹೇಳುವ ಕ್ರಮಗಳನ್ನು ಅಳವಡಿಸಿಕೊಂಡು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು ಜೀವನ ಸಾಗಿಸಲು ಸಾಧ್ಯವಿದೆ ಎಂಬುದನ್ನು ಬಹುತೇಕರು ತೋರಿಸಿಕೊಟ್ಟಿದ್ದಾರೆ.
ಮಧುಮೇಹ ಬಂದಿದೆ ಎಂಬುದು ಗೊತ್ತಾದ ಮೇಲೆಯೂ ನನಗೇನು ಆಗಿಲ್ಲ ಆರೋಗ್ಯವಾಗಿದ್ದೇನೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿದೆ. ಹಾಗೆಯೇ ಶಿಸ್ತುಬದ್ಧ ಜೀವನಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ಎಲ್ಲ ವಿಚಾರವನ್ನು ಕೂಲ್ ಆಗಿ ತೆಗೆದುಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ನಿಜ ಹೇಳಬೇಕೆಂದರೆ ಮಧುಮೇಹ ಬಂದ ಬಳಿಕ ಸಂಪೂರ್ಣವಾಗಿ ವಾಸಿ ಮಾಡುವುದು ಕಷ್ಟಸಾಧ್ಯವಾದರೂ ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಪಥ್ಯಗಳನ್ನು ಅನುಸರಿಸುವುದರೊಂದಿಗೆ ಆಹಾರ, ವ್ಯಾಯಾಮ, ಯೋಗಾಸನ ಹೀಗೆ ದೈಹಿಕ ಶ್ರಮದೊಂದಿಗೆ ಶಿಸ್ತುಬದ್ಧ ಜೀವನ ಕ್ರಮಗಳಿಂದ ಮಧುಮೇಹವನ್ನು ನಿಯಂತ್ರಣಕ್ಕೆ ತಂದು ನೆಮ್ಮದಿಯ ಜೀವನ ನಡೆಸುವತ್ತ ಹೆಜ್ಜೆಯಿಡಬೇಕಾಗುತ್ತದೆ. ಇನ್ನು ವೈದ್ಯರು ಹೇಳುವಂತೆ ದಿನಕ್ಕೆ ಕನಿಷ್ಟ ಮೂವತ್ತು ನಿಮಿಷಗಳ ಕಾಲ ವ್ಯಾಯಾಮ, ವಾಯುವಿಹಾರ, ಯೋಗ ಮೊದಲಾದವುಗಳನ್ನು ರೂಢಿಸಿಕೊಳ್ಳಬೇಕು. ಒತ್ತಡದ ಬದುಕಿನಿಂದ ಹೊರ ಬಂದು ಕೆಲವು ಸಮಯವನ್ನು ನಿಶ್ಚಿಂತೆಯಿಂದ ಕಳೆಯಬೇಕು.
ವೈದ್ಯರು ಹೇಳಿದಂತೆ ಮಾಡಿ
ನಾವು ಒತ್ತಡ ಮಾಡಿಕೊಂಡಷ್ಟು ಆರೋಗ್ಯಕ್ಕೆ ಹಾನಿಯೇ ಜಾಸ್ತಿ. ಎಲ್ಲವನ್ನೂ ಸಮಾಧಾನದಿಂದ ತೆಗೆದುಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಅಯ್ಯೋ ನನಗೆ ಮಧುಮೇಹವಿದೆ ಎಂದು ಯೋಚಿಸುವುದನ್ನು ಬಿಟ್ಟು ಎಲ್ಲರೂ ಸೇವಿಸುವ ಸಾಮಾನ್ಯ ಆಹಾರವನ್ನೇ ಒಂದು ಸರಳ ಮತ್ತು ಆರೋಗ್ಯಕರ ರೀತಿಯಲ್ಲಿ ಸೇವಿಸಬೇಕು. ಆದರೆ ಆಹಾರ ಸೇವನೆಯಲ್ಲಿ ಜಾಗರೂಕತೆ ವಹಿಸುವುದು ಅಗತ್ಯವಾಗಿದೆ.
ಮಧುಮೇಹ ರೋಗಗಳು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆಹಾರ ಸೇವನೆಗೆ ಮುನ್ನ ಅದರತ್ತ ಎಚ್ಚರಿಕೆ ಇರಬೇಕು. ಅದು ಮಧುಮೇಹ ಉಲ್ಬಣಕ್ಕೆ ಸಹಕಾರಿಯಾಗುವಂತಿದ್ದರೆ, ಅಂತಹ ಪದಾರ್ಥಗಳನ್ನು ದೂರವಿಡಿ. ಯಾವುದೇ ಆಹಾರ ಸೇವನೆ ಮಾಡಬೇಕಾದರೂ ಅದು ಆರೋಗ್ಯಕ್ಕೆ ಪೂರಕವಾಗಿದ್ದರೆ ಮಾತ್ರ ಅದನ್ನು ಸೇವಿಸಿ ಇಲ್ಲದೆ ಹೋದರೆ ಅದನ್ನು ದೂರವಿಟ್ಟು ಬಿಡಿ. ಕಾಯಿಲೆಗೆ ಒಳಗಾದವರು ರಕ್ತ ಪರೀಕ್ಷೆ ಮಾಡಿಸಿ ವೈದ್ಯರು ಹೇಳುವ ಆಹಾರ ಕ್ರಮ, ಚಿಕಿತ್ಸೆಗೆ ಆದ್ಯತೆ ನೀಡಿ.

ನಿರ್ಲಕ್ಷ್ಯ ಮಾಡಿದರೆ ಆಪತ್ತು
ಮಧುಮೇಹವನ್ನು ನಿರ್ಲಕ್ಷ್ಯ ಮಾಡಿದಷ್ಟು ಆರೋಗ್ಯಕ್ಕೆ ಆಪತ್ತು ಖಚಿತ. ವೈದ್ಯರು ನೀಡುವ ಔಷಧಿಗಳು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತವೆ. ಔಷಧಿ ತೆಗೆದುಕೊಳ್ಳುವವರು ವೈದ್ಯರು ಹೇಳಿದ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದನ್ನು ರೂಢಿಸಿಕೊಳ್ಳಿ. ವೈದ್ಯರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದೆಂದು ಹೇಳಿದ್ದಾರೋ ಅದನ್ನು ವರ್ಜಿಸಿ.
ನಾವೇನಾದರೂ ನಿರ್ಲಕ್ಷ್ಯವಹಿಸಿದರೆ ಮಧುಮೇಹ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ನಂತರ ಆಹಾರ, ವ್ಯಾಯಾಮ, ಮಾತ್ರೆಗಳಿಂದಲೂ ನಿಯಂತ್ರಣಕ್ಕೆ ತರುವುದು ಅಸಾಧ್ಯವಾಗಿ ಇನ್ಸುಲಿನ್ ತಾತ್ಕಾಲಿಕವಾಗಿ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ ಅಲ್ಲಿ ತನಕ ಹೋಗದಂತೆ ಎಚ್ಚರವಹಿಸುವುದು ಒಳ್ಳೆಯದು. ಮಧುಮೇಹ ಆರಂಭದ ಸೂಚನೆ ತಿಳಿದಾಗಲೇ ಅದನ್ನು ನಿಯಂತ್ರಿಸಲು ಮುಂದಾಗಬೇಕು.
ಮಧುಮೇಹವನ್ನು ಅಡಿಯಾಳಾಗಿಸಿ
ಮಧುಮೇಹ ಬಗ್ಗೆ ಮೊಂಡಾಟ ಮಾಡಿದರೆ ಮಾತ್ರ ಅದು ನಮ್ಮ ಪಾಲಿಗೆ ಶತ್ರುವಂತೆ. ಅದನ್ನು ಅರಿತು ನಡೆದುಕೊಂಡರೆ ಅದು ನಮ್ಮ ಅಡಿಯಾಳಂತೆ. ಇದನ್ನು ಜ್ಞಾಪಕದಲ್ಲಿಟ್ಟುಕೊಂಡಿದ್ದೇ ಆದರೆ ಸುಲಭವಾಗಿ ಮಧುಮೇಹವನ್ನು ನಿಯಂತ್ರಣಕ್ಕೆ ತರಬಹುದಲ್ಲದೆ, ಯಾವುದೇ ಚಿಂತೆಯಿಲ್ಲದೆ ದಿನನಿತ್ಯದ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು.
ಇನ್ನು ಮಧುಮೇಹದ ಬಗ್ಗೆ ಚಿಂತೆ ಮಾಡಿದಷ್ಟು ಹೆಚ್ಖಳವಾಗುತ್ತದೆ. ಬಹಳಷ್ಟು ಜನರು ಕಾಯಿಲೆ ಬಂದ ತಕ್ಷಣ ಅದರ ಬಗ್ಗೆಯೇ ಚಿಂತೆ ಮಾಡುತ್ತಾರೆ. ಈ ಚಿಂತೆ ಕಾಯಿಲೆಯನ್ನು ನಿಯಂತ್ರಿಸುವ ಬದಲು ಉಲ್ಬಣ ಮಾಡುತ್ತದೆ. ಆದ್ದರಿಂದ ವೈದ್ಯರ ಸಲಹೆ ಮೇರೆಗೆ ಔಷಧಿ ಸೇರಿದಂತೆ ಏನೇನು ಕ್ರಮಗಳನ್ನು ಅನುಸರಿಸ ಬೇಕೋ ಅದನ್ನು ಅನುಸರಿಸಿಕೊಂಡು ತಮ್ಮ ಪಾಡಿಗೆ ಕೆಲಸಗಳನ್ನು ಮಾಡುತ್ತಾ ಕಾಯಿಲೆಯನ್ನು ಮರೆತು ಬಿಟ್ಟರೆ ಇದ್ದಷ್ಟು ದಿನ ಆರೋಗ್ಯವಾಗಿ ಬದುಕಲು ಸಾಧ್ಯವಾಗುತ್ತದೆ.
ಮಧುಮೇಹ ಹೇಗೆ ಬರುತ್ತದೆ?
ಇದೆಲ್ಲದರ ನಡುವೆಯೂ ಮಧುಮೇಹ ಹೇಗೆ ಬರುತ್ತದೆ ಎಂಬುದರ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ನಮ್ಮ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಜಾಸ್ತಿಯಾಗುವುದೇ ಮಧುಮೇಹ ಕಾಯಿಲೆಯಾಗಿದೆ. ವೈದ್ಯರು ಹೇಳುವ ಪ್ರಕಾರ ಶರೀರಕ್ಕೆ ತನ್ನ ಎಲ್ಲ ಕಾರ್ಯನಿರ್ವಹಣೆಗೆ ಶಕ್ತಿಬೇಕು. ಈ ಶಕ್ತಿ ಬರಬೇಕಾದರೆ ಆಹಾರ ಸೇವಿಸಬೇಕು. ನಾವು ಸೇವಿಸುವ ಆಹಾರ ಜೀರ್ಣವಾಗಿ ಬಳಿಕ ಕಡೆಯದಾಗಿ ಸಕ್ಕರೆಯಾಗಿ ಶರೀರಕ್ಕೆ ಸೇರುತ್ತದೆ. ಈ ಸಕ್ಕರೆಯೇ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ.
ಮೇಧೋಜಿರಕ ಗ್ರಂಥಿಯು ರಕ್ತದಲ್ಲಿರುವ ಸಕ್ಕರೆಯ ಪ್ರಮಾಣಕ್ಕೆ ತಕ್ಕಷ್ಟು ಇನ್ಸುಲಿನ್ ಎಂಬ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಈ ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಜೀವಕೋಶಗಳ ಒಳಗೆ ಸೇರಿಸಲು ಸಹಕರಿಸಿ ಶರೀರಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಒಂದು ವೇಳೆ ಮೇಧೋಜಿರಕ ಗ್ರಂಥಿಯ ಮಾಮೂಲಿನ ಕಾರ್ಯಕ್ಷಮತೆ ಕಡಿಮೆಯಾಗಿ ಅಥವಾ ಇನ್ಸುಲಿನ್ ಉತ್ಪಾದನೆ ನಿಂತು ಹೋದರೆ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹೀಗೆ ಸಕ್ಕರೆ ಪ್ರಮಾಣ ಹೆಚ್ಚಾಗುವುದೇ ಮಧುಮೇಹ ಕಾಯಿಲೆಯಾಗಿದೆ. ಇದನ್ನು ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಎಂದು ಕರೆಯುತ್ತಾರೆ. ಅದು ಏನೇ ಇರಲಿ ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಸದಾ ಎಚ್ಚರವಾಗಿರ ಬೇಕಷ್ಟೆ.
-
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ












Click it and Unblock the Notifications