ಕೆಲಸವಾಗಲಿ, ವ್ಯವಹಾರವಾಗಲಿ ಯಶಸ್ವಿಯಾಗಲು ಈ ಸೂತ್ರಗಳನ್ನು ಪಾಲಿಸಿ!
ಉದ್ಯೋಗವಾಗಲಿ, ವ್ಯವಹಾರವಾಗಲಿ ಶಿಸ್ತು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಮಯಕ್ಕೆ ಕೆಲಸಕ್ಕೆ ಹಾಜರಾಗದಿದ್ದರೆ, ಹೇಳಿದ ಕೆಲಸವನ್ನು ನಿಗದಿತ ವೇಳೆಯಲ್ಲಿ ಮುಗಿಸದಿದ್ದರೆ ಪ್ರತಿಭೆಯಿದ್ದೂ ಪ್ರಯೋಜನವಿಲ್ಲ. ಶಿಸ್ತು ಇದ್ದರೆ ಯಾವುದೇ ವ್ಯವಹಾರಸ್ಥ ಅಥವಾ ಉದ್ಯೋಗಿ ಕೆಲಸವನ್ನು ತನ್ನ ಶಕ್ತಿಮೀರಿ ಪ್ರಯತ್ನಪಟ್ಟು ಮುಗಿಸಿಬಿಡುತ್ತಾನೆ ಎಂಬುದು ಹಲವು ಕಂಪೆನಿಗಳ ಮಾಲೀಕರ ಒಕ್ಕೂರಲ ಅಭಿಪ್ರಾಯವಾಗಿತ್ತದೆ.
ಉತ್ತಮ ಉದ್ಯೋಗಸ್ಥರ ಲಕ್ಷಣಗಳಾವುದು ಎನ್ನುವುದನ್ನು ನೋಡುತ್ತಾ ಹೊರಟರೆ ಕೆಲವು ವಿಷಯಗಳು ಸಾಮಾನ್ಯ ಎಂದೆನಿಸಬಹುದು. ಆದರೆ, ಆ ಸಾಮಾನ್ಯ ಸಂಗತಿಗಳೆ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು, ಮನ್ನಣೆಯನ್ನು ಹಾಗೂ ಯಶಸ್ಸನ್ನು ತಂದುಕೊಡಬಲ್ಲದು.

ಕಂಪೆನಿಯಲ್ಲೋ, ವ್ಯಾಪಾರದಲ್ಲೊ, ಸ್ವಂತ ಉದ್ಯಮದಲ್ಲೋ ನಮಗೆ ಕೊಟ್ಟಿರುವ, ನಾವು ನಾವು ಮಾಡುತ್ತಿರುವ ಕೆಲಸವನ್ನು ಅತ್ಯಂತ ಶಿಸ್ತಿನಿಂದ ಮಾಡಿದರೆ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ. ಈ ಯಶಸ್ಸಿನಿಂದ ಮಾತ್ರ ನಾವು ಅಂದುಕೊಂಡಿದ್ದನ್ನು ಪಡೆಯಲು ಸಾಧ್ಯ.
ಹಾಗಾದರೆ, ಒಬ್ಬ ಉದ್ಯೋಗಿ, ವ್ಯಾಪಾರಿ ಶಿಸ್ತಿನಿಂದ ಇರಬೇಕಾದರೆ ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ನೋಡುತ್ತಾ ಹೋದರೆ, ಕೈಗೆ ಸಿಕ್ಕಿದ್ದನ್ನು, ಹೇಗೆ ಬೇಕೊ ಹಾಗೆ ಧರಿಸಿಕೊಂಡು ಬರಬಾರದು. ಇದರಿಂದ ಉದ್ಯೋಗದಲ್ಲಿ ಗಂಭೀರತೆ ಬರುವುದಿಲ್ಲ.
ಗ್ರಾಹಕರನ್ನು ದೇವರಂತೆ ಕಾಣಿ!
ಯಾವುದೇ ಉದ್ಯೋಗದಲ್ಲಿ ಗ್ರಾಹಕರೇ ನಮ್ಮ ದೇವರು ಎಂಬುದನ್ನು ನಾವು ಮರೆಯಬಾರದು. ಯಾವ ಉದ್ಯೋಗಿ ಇಲ್ಲಿಯವರೆಗೂ ಆ ರೀತಿ ಅಂದುಕೊಂಡಿಲ್ಲವೊ ಇನ್ನು ಮುಂದಾದರು ಹಾಗೆ ಅಂದುಕೊಂಡರೆ ನಮ್ಮ ವರ್ತನೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ನೋಡಿ ನಾವು ದೇವಸ್ಥಾನಕ್ಕೆ ಹೋಗಬೇಕಾದರೆ ಹೇಗೆ ಬೇಕೊ ಹಾಗೆ ಹೋಗುವುದಿಲ್ಲ. ಕಡ್ಡಾಯವಾಗಿ ಸ್ನಾನ ಮಾಡಿರುತ್ತೇವೆ. ಅದರದೇ ಆದ ನೀತಿ ನಿಯಮಗಳು ಇರುತ್ತವೆ. ಅದನ್ನು ಅನುಸರಿಸಿದರೆ ಮಾತ್ರ ನಮ್ಮ ಮನಸ್ಸು ಯಾವುದೇ ಕಿರಿಕಿರಿ ಇಲ್ಲದೆ ಶಾಂತವಾಗಿರುತ್ತದೆ. ಆ ಶಾಂತ ,ಮನಸಿನಲ್ಲಿ ನಾವು ಅಂದುಕೊಳ್ಳುವುದು, ಪ್ರಾರ್ಥಿಸುವುದು ದೇವರಿಗೆ ಮುಟ್ಟುತ್ತದೆ ಎಂಬುದು ಪ್ರತೀತಿ.
ಅದೇ ಪ್ರಕಾರವಾಗಿ ನಾವು ಕೆಲಸ ಮಾಡುವ ಸ್ಥಳ ದೇವಸ್ಥಾನ ಇದ್ದಂತೆ. ಅಲ್ಲಿಗೆ ಹೋಗಬೇಕಾದರೆ ನಾವು ಮೊದಲಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಿಸ್ತನ್ನು ರೂಡಿಸಿಕೊಳ್ಳಬೇಕಾತ್ತದೆ. ಆಗ ಮಾತ್ರ ದೇವರ ರೀತಿಯಲ್ಲಿ ಗ್ರಾಹಕರ ಮನಸ್ಸನ್ನು ಗೆಲ್ಲಲು ಸಾಧ್ಯ.
ಧರಿಸುವ ಬಟ್ಟೆ ಬಗ್ಗೆ ಇರಲಿ ಕಾಳಜಿ!
ಗ್ರಾಹಕರಿಗೆ ಮೊದಲ ನೋಟದಲ್ಲೇ ನಮ್ಮ ಮೇಲೆ ಯಾವ ಭಾವನೆ ಮೂಡುತ್ತದೆಯೂ ಅದೇ ಮುಖ್ಯವಾಗುತ್ತದೆ. ಅದೇ ಮನಃಸ್ಥಿತಿಯಲ್ಲಿಯೇ ಕೊನೆವರೆಗೂ ವ್ಯವರಿಸುತ್ತಾರೆ. ಉದಾಹರಣೆ ತೆಗೆದುಕೊಳ್ಳುವುದಾದರೆ ಬಟ್ಟೆ ಅಂಗಡಿ ನಡೆಸುವಾತ, ಐರಾನ್ ಇಲ್ಲದ, ಮಾಸಿದ ಬಟ್ಟೆ ಧರಿಸಿಕೊಂಡು ಬಟ್ಟೆ ವ್ಯಾಪಾರ ಮಾಡಿದರೆ ಯಾವ ಗ್ರಾಹಕ ಆತನಿಂದ ಬಟ್ಟೆ ಖರೀದಿಸುತ್ತಾನೆ ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಬಟ್ಟೆ ವ್ಯಾಪಾರ ಮಾಡುವ ನಾವು ಒಳ್ಳೆಯ ಬಟ್ಟೆ ಧರಿಸಿ ಗ್ರಾಹಕರನ್ನು ಸ್ವಾಗತಿಸಿದಾಗ, ಬಟ್ಟೆಯನ್ನು ಖರೀದಿಸಲು ಮನಸು ಮಾಡುತ್ತಾರೆ.
ಸಮಯ ಪಾಲನೆ ಅತ್ಯಗತ್ಯ
ಯಾವುದೇ ಉದ್ಯೋಗದಲ್ಲಿ ಸಮಯ ಪಾಲನೆ ಇಲ್ಲದಿದ್ದರೆ, ಎಂತಹದ್ದೆ ಉತ್ತಮ ದರ್ಜೆಯ ಪ್ರತಿಭೆಯಾಗಲಿರಲಿ, ವಸ್ತುವಾಗಿರಲಿ ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ನಿರಂತವಾಗಿ ಸಮಯ ಪಾಲನೆ ಮಾಡಿದರೆ ಹಂತ-ಹಂತವಾಗಿ ಯಶಸ್ಸಿನ ಮೆಟ್ಟಿಲು ಹತ್ತಬಹುದು. ಉದಾಹರಣೆಗೆ, ನಮ್ಮ ಪಕ್ಕದಲ್ಲಿ ನಾಲ್ಕು ಅಂತಸ್ತಿನ ಅಂಗಡಿ ಇರಬಹುದು. ಹಾಗೂ ಆಕರ್ಷಕವಾಗಿ ಕಾಣುತ್ತಲೂ ಇರಬಹುದು. ಆದರೆ, ಆ ಅಂಗಡಿಯ ಮಾಲೀಕ ನಿರ್ಧಿಷ್ಟವಾದ ಸಮಯವನ್ನು ಪಾಲನೆ ಮಾಡದೆ ಇದ್ದರೆ, ಗ್ರಾಹಕರು ಪರ್ಯಾಯ ಆಯ್ಕೆ ನೋಡುತ್ತಾರೆ. ಹೀಗಾಗಿ ಯಾವುದೇ ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಗ್ರಾಹಕರೇ ದೇವರೆಂದು ಭಾವಿಸುವುದು ಹಾಗೂ ಶಿಸ್ತನ್ನು ಪಾಲಿಸಿದರೆ ಯಶಸ್ಸನ್ನು ಸುಲಭವಾಗಿ ಸಾಧಿಸಬಹುದು.












Click it and Unblock the Notifications