ಶಿವಮೊಗ್ಗ: ಹರ್ಷ ಹತ್ಯೆಗೆ ಕಾರಣ ಏನು? ಸಾವಿನ ಮನೆಯಲ್ಲಿ ಸುಳ್ಳಿನ ಮೆರವಣಿಗೆ
ಶಿವಮೊಗ್ಗ, ಫೆಬ್ರವರಿ 21: ಹಿಜಾಬ್ ವಿಚಾರ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿ ಇರುವಾಗಲೇ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಡೆದಿದೆ. ಇದಕ್ಕೆ ಕಾರಣಗಳೇನು ಎಂಬುದು ಇನ್ನೂ ಬಯಲಾಗಬೇಕಿದೆ. ಪ್ರಕರಣದ ತನಿಖೆ ಒಂದು ದಿಕ್ಕಿನಲ್ಲಿ ನಡೆಯುತ್ತಿದ್ದರೆ, ಇನ್ನೊಂದು ದಿಕ್ಕಿನಲ್ಲಿ ಸಾವಿಗೆ ಕಾರಣವೇನು ಎಂಬುದನ್ನು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.
ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ವಿವಾದದ ವಿರುದ್ಧ 'ಫೇಸ್‌ಬುಕ್ ಪೋಸ್ಟ್ ಹಾಕಿದ ಎಂಬ ಕಾರಣಕ್ಕಾಗಿಯೇ' ಶಿವಮೊಗ್ಗದಲ್ಲಿ ಹಿಂದೂ ಯುವಕನ ಹತ್ಯೆ ನಡೆದಿದೆ ಎಂಬ ಸುಳ್ಳು ಸುದ್ದಿಯೊಂದನ್ನು ರಾಷ್ಟ್ರೀಯ ಮಟ್ಟದಲ್ಲಿ ಹರಿಯಬಿಡಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಕೆಲವರು ಹರ್ಷ ಹೆಸರಿನಲ್ಲಿ ಚಂದಾ ಎತ್ತಲು ಮುಂದಾಗಿರುವುದು ಕಂಡುಬಂದಿದೆ.
'ಝೀ ನ್ಯೂಸ್' ಲೋಗೋ ಬಳಸಿಕೊಂಡು, ಎಂಎಸ್ಎನ್ ವೆಬ್‌ಸೈಟ್ ಇಂತಹದೊಂದು ನಕಲು ಸುದ್ದಿಯ ಮೂಲವಾಗಿದೆ. ವರದಿಯು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಆಗುತ್ತಿದೆ. ಹಾಗಿದ್ದರೆ ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಬಗ್ಗೆ ಈ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ವರದಿಯಲ್ಲಿ ಏನಿದೆ?, ಎಂಎಸ್ಎನ್ ವರದಿಯಲ್ಲಿನ ಸತ್ಯವೆಷ್ಟು? ಸುಳ್ಳು ಎಷ್ಟು?, ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಗಳು ಯಾವ ರೀತಿ ಇರುತ್ತಿದ್ದವು?, ಈಗ ಅದೇ ಹರ್ಷದ ಸಾವಿನ ಬಗ್ಗೆ ಫೇಸ್‌ಬುಕ್ ನಲ್ಲಿ ಯಾವ ರೀತಿಯ ಪೋಸ್ಟ್ ಗಳು ಹರಿದಾಡುತ್ತಿವೆ ಎಂಬುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.


ರಾತ್ರೋರಾತ್ರಿ ಭಜರಂಗದಳ ಕಾರ್ಯಕರ್ತನ ಹತ್ಯೆ
ಶಿವಮೊಗ್ಗ ನಗರದ ಎನ್.ಟಿ. ರಸ್ತೆಯ ಕಾಮತ್ ಪೆಟ್ರೋಲ್ ಬಂಕ್ ಸಮೀಪದ ಭಾರತೀ ಕಾಲೋನಿಯಲ್ಲಿ ಭಾನುವಾರ ರಾತ್ರಿ ಯುವಕರ ಗುಂಪೊಂದು ಭಜರಂಗ ದಳ ಕಾರ್ಯಕರ್ತ ಹರ್ಷನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಮಾರಕಾಸ್ತ್ರಗಳಿಂದ ನಡೆಸಿದ ಹಲ್ಲೆಯಿಂದಾಗಿ ಹೊಟ್ಟೆ, ತಲೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ರಕ್ತದ ಮಡುವಿನಲ್ಲಿ ಬಿದ್ದ ಹರ್ಷನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ 22 ವರ್ಷದ ಹರ್ಷ ಮೃತಪಟ್ಟಿದ್ದಾನೆ. ಶಿವಮೊಗ್ಗ ಪಟ್ಟಣವು ಇತ್ತೀಚೆಗೆ ಕೆಲವು ಕಾಲೇಜುಗಳಲ್ಲಿ ಹಿಜಾಬ್ ವಿವಾದ ತೀವ್ರ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಇದರ ಮಧ್ಯೆ ಭಾನುವಾರ ನಡೆದ ಹತ್ಯೆಯ ಹಿಂದಿನ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಇದರ ಮಧ್ಯೆ ನಗರದ ಹಲವೆಡೆ ಕಲ್ಲು ತೂರಾಟ ನಡೆದಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ನಿಯಂತ್ರಿಸುವುದಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಭಜರಂಗದಳ ಕಾರ್ಯಕರ್ತರ ಹತ್ಯೆಗೆ ಕಾರಣ
ಹೀಗಿರುವಾಗಲೇ, ಕರ್ನಾಟಕದಲ್ಲಿ ಇತ್ತೀಚಿಗೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದಂತೆ ವಿವಾದ ಸಾಕಷ್ಟು ಸುದ್ದಿಯಾಗಿತ್ತು. ಇದೇ ಹಿಜಾಬ್ ವಿರುದ್ಧ ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕುತ್ತಿದ್ದ ಎಂಬ ಕಾರಣಕ್ಕೆ ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ನಡೆಸಲಾಗಿದೆ ಎಂದು ಎಂಎಸ್‌ಎಂ ಹೆಸರಿನ ಡೊಮೈನ್‌ನಲ್ಲಿ ಸುದ್ದಿಯೊಂದನ್ನು ಹರಿಯಬಿಡಲಾಗಿದೆ. ಇದಕ್ಕೆ ಝೋ ವಾಹಿನಿಯ ಲೋಗೋ ಬಳಸಿಕೊಂಡಿದ್ದು ಮೇಲ್ನೋಟಕ್ಕೆ ಇದೊಂದು ವೃತ್ತಪರ ಸುದ್ದಿ ಎಂಬಂತೆ ಬಿಂಬಿಸಲಾಗಿದೆ.

ಹಿಜಾಬ್ ಮತ್ತು ಹತ್ಯೆಗೂ ನಡುವೆ ನಂಟು
ಶಿವಮೊಗ್ಗದ ಹರ್ಷ ಹತ್ಯೆಗೂ ಹಿಜಾಬ್ ವಿವಾದಕ್ಕೂ ನಂಟು ಕಲ್ಪಿಸುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಎಂಎಸ್ಎನ್ ವರದಿಯ ಜೊತೆಗೆ ಕೆಲವರ ವೈಯಕ್ತಿಯ ಖಾತೆಯಲ್ಲಿಯೂ ಇದೇ ನಕಲು ಮಾಹಿತಿ ಜನರನ್ನು ತಲುಪುತ್ತಿದೆ. ಉದಾಹರಣೆಗೆ, ಹಿಜಾಬ್ ವಿರುದ್ಧ ಪೋಸ್ಟ್ ಹಾಕಿದ್ದ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ನಡೆಸಲಾಗಿದೆ ಎಂದು SSR Vs Bollywood ಗ್ರೂಪ್ ಸಂದೇಶವನ್ನು ಬರೆದುಕೊಂಡಿದೆ. ಕೊನೆಯಲ್ಲಿ ಓಂ ಶಾಂತಿ ಎಂದು ಬರೆಯಲಾಗಿದ್ದು, JusticeForHarsha ಅಭಿಯಾನವನ್ನು ಶುರು ಮಾಡಲಾಗಿದೆ.
Recommended Video

ಚಂದಾ ವಸೂಲಿಗೂ ಇಳಿದರು
ಇನ್ನೊಂದೆಡೆ ಇದೇ ಸುದ್ದಿಯನ್ನು ಮುಂದಿಟ್ಟುಕೊಂಡು ಹರ್ಷ ಕುಟುಂಬದ ಹೆಸರಿನಲ್ಲಿ ಚಂದಾ ಸಂಗ್ರಹ ಅಭಿಯಾನಕ್ಕೂ ಅಂತರ್ಜಾಲ ಸಾಕ್ಷಿಯಾಗಿದೆ. 'ಹರ್ಷ ಕುಟುಂಬ ಸಂಕಷ್ಟದಲ್ಲಿದ್ದು, ಹಣ ಸಹಾಯ ಮಾಡಿ' ಎಂಬುದು ಅಭಿಯಾನ ನಡೆಸುವವರು ಮುಂದಿಟ್ಟಿರುವ ಮಾಹಿತಿ. ಈ ನಡುವೆ, ಶಿವಮೊಗ್ಗದಲ್ಲಿ ಮಾತನಾಡಿರುವ ಹರ್ಷ ಸಹೋದರಿ, "ಶ್ರೀರಾಮ ಜಯರಾಮ ಎನ್ನುತ್ತಿದ್ದ ನನ್ನ ತಮ್ಮನ ಸಾವಿಗೆ ನ್ಯಾಯ ಕೊಡಿ,'' ಎಂದು ಗೃಹ ಸಚಿವರಲ್ಲಿ ಮನವಿ ಮಾಡಿದ್ದಾರೆ.
Fact Check
ಕ್ಲೇಮು
ಶಿವಮೊಗ್ಗದಲ್ಲಿ ಹಿಜಾಬ್ ಧರಿಸುವುದಕ್ಕೆ ವಿರುದ್ಧವಾಗಿ ಪೋಸ್ಟ್ ಮಾಡಿದ್ದಕ್ಕೆ ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ
ಪರಿಸಮಾಪ್ತಿ
ಝೀ ವೆಬ್‌ಸೈಟ್ ಹೆಸರು ಉಲ್ಲೇಖಿಸಿ ಎಂಎಸ್ಎನ್ ಪ್ರಕಟಿಸಿದ ವರದಿಯು ಮೂಲ ಝೀ ವೆಬ್‌ಸೈಟ್ ನಲ್ಲಿ ಪ್ರಕಟವಾಗಿಲ್ಲ












Click it and Unblock the Notifications