ಯುವ ರಾಜ್‌ಕುಮಾರ್-ಸಪ್ತಮಿ ಗೌಡ ರೆಡ್‌ಹ್ಯಾಂಡ್ ಆಗಿ ಹೋಟೆಲ್ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ರು: ಶ್ರೀದೇವಿ ಭೈರಪ್ಪ
ಬೆಂಗಳೂರು, ಜೂನ್ 12: ಡಾ ರಾಜ್‌ಕುಮಾರ್ ಅವರ ಮೊಮ್ಮಗ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಮಗ ಯುವ ರಾಜ್‌ಕುಮಾರ್ (ಗುರು ರಾಜ್‌ಕುಮಾರ್) ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ರಾಜ್ ಕುಮಾರ್ ಕುಟುಂಬದ ವಿರುದ್ಧ ಶ್ರೀದೇವಿ ತಂದೆ ಭೈರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಯುವ ರಾಜ್‌ಕುಮಾರ್ ಅವರು ಕಳಿಸಿದ್ದ ವಿಚ್ಛೇದನ ನೋಟಿಸ್‌ಗೆ ಲಾಯರ್ ಮೂಲಕವೇ 12 ಪುಟಗಳ ಉತ್ತರ ನೀಡಿರುವ ಶ್ರೀದೇವಿ ಭೈರಪ್ಪ, ಯುವ ರಾಜ್‌ಕುಮಾರ್ ಮೇಲೆ ಭಾರೀ ಆರೋಪಗಳನ್ನು ಮಾಡಿದ್ದಾರೆ. ಯುವ ರಾಜ್ ಕುಮಾರ್ ವಿಚ್ಚೇದನ ವಿಚಾರದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ಅವರ ಹೆಸರು ಕೇಳಿ ಬಂದಿದ್ದು, ಲೀಗಲ್ ನೋಟಿಸ್‌ನ ರಿಪ್ಲೈಯಲ್ಲಿ ಶ್ರೀದೇವಿ ನೇರವಾಗಿ ಸಪ್ತಮಿ ಗೌಡ ಅವರ ಹೆಸರನ್ನೇ ಉಲ್ಲೇಖ ಮಾಡಿದ್ದಾರೆ.

ಸಪ್ತಮಿ ಗೌಡ ಹಾಗೂ ಯುವ ರಾಜ್‌ಕುಮಾರ್ ಇಬ್ಬರೂ ಹೋಟೆಲ್ ರೂಮ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಿದ್ದಾರೆ. ಸಪ್ತಮಿ ಗೌಡ ಹಾಗೂ ಯುವ ರಾಜ್‌ಕುಮಾರ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಂತೋಷ್ ಆನಂದ್‌ರಾಮ್ ನಿರ್ದೇಶನದ ಯುವ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದು, ಇದೀಗ ಈ ಬಗ್ಗೆ ಲಾಯರ್ ಮೂಲಕವೇ 12 ಪುಟಗಳ ಉತ್ತರ ನೀಡಿರುವ ಶ್ರೀದೇವಿ ಭೈರಪ್ಪ, ಯುವ ರಾಜ್‌ಕುಮಾರ್ ಹಾಗೂ ಸಪ್ತಮಿ ಗೌಡ ಮೇಲೆ ಭಾರೀ ಆರೋಪಗಳನ್ನು ಮಾಡಿದ್ದಾರೆ.
ನಾನು ಕಾನೂನು ಬದ್ಧವಾಗಿ ಯುವ ಅವರನ್ನು ವಿವಾಹವಾಗಿದ್ದೇನೆ. 9 ವರ್ಷಗಳಿಂದ ಯುವ ಅವರ ಕುಟುಂಬ ನನಗೆ ಪರಿಚಯ. ಮದುವೆಯಾದ ದಿನದಿಂದ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಆದರೆ, ಕುಟುಂಬದ ಗೌರವದ ಕಾರಣಕ್ಕಾಗಿ ನಾನು ಇದನ್ನು ಎಲ್ಲೂ ಹೇಳಿರಲಿಲ್ಲ. ಯುವ ರಾಜ್‌ಕುಮಾರ್ ಅವರಿಗೆ ಸಹ ನಟಿ ಸಪ್ತಮಿ ಗೌಡ ಅವರ ಜೊತೆ ಅಫೇರ್ ಇದೆ. 2023ರ ಡಿಸೆಂಬರ್‌ನಲ್ಲಿ ನಾನು ಬೆಂಗಳೂರಿಗೆ ಬಂದಿದ್ದಾಗ ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಗಲಾಟೆಯಾಗಿತ್ತು.
'ಯುವ ಅವರ ವರ್ತನೆಯಿಂದ ನನಗೆ ಬಹಳ ಆಘಾತವಾಗಿದೆ. ಅದಲ್ಲದೆ, ಅವರ ಕುಟುಂಬವೂ ನನಗೆ ಅನ್ಯಾಯ ಮಾಡಿದೆ. ಯುವ ಸಿನಿಮಾದ ನಟಿಯಾಗಿದ್ದ ಸಪ್ತಮಿ ಗೌಡ ಅವರೊಂದಿಗೆ ಯುವ ರಾಜ್‌ಕುಮಾರ್‌ಗೆ ಕಳೆದ ಒಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು ನನ್ನ ಕುಟುಂಬ ಹಾಗೂ ಸ್ನೇಹಿತರು ಗಮನಕ್ಕೆ ತಂದಿದ್ದರು ಎಂದು ಶ್ರೀದೇವಿ ಭೈರಪ್ಪ ನೋಟಿಸ್‌ನಲ್ಲಿ ಬರೆದಿದ್ದಾರೆ.












Click it and Unblock the Notifications