Trivikram: ಆಪ್ತಮಿತ್ರನ ನಿಶ್ಚಿತಾರ್ಥಕ್ಕೆ ಗೈರಾಗಿದ್ದೇಕೆ ಬಿಗ್ ಬಾಸ್ ತ್ರಿವಿಕ್ರಮ್?
ಕನ್ನಡ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್ ಹಸೆಮಣೆ ಏರಲು ಸಜ್ಜಾಗಿದ್ದು, ಇತ್ತೀಚಿಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಂಜಿತ್ ಹಾಗೂ ಮಾನಸ ಗೌಡ ನಿಶ್ಚಿತಾರ್ಥದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಬಹುತೇಕ ಎಲ್ಲಾ ಸ್ಪರ್ಧಿಗಳು ಭಾಗಿಯಾಗಿದ್ದು, ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಶುಭಹಾರೈಸಿದ್ದರು. ಆದರೆ ರಂಜಿತ್ ಆಪ್ತಮಿತ್ರ ತ್ರಿವಿಕ್ರಮ್ ಈ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಬಿಗ್ ಬಾಸ್ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ರಂಜಿತ್ ಹಾಗೂ ತ್ರಿವಿಕ್ರಮ್ ಮನೆಯಿಂದ ಹೊರ ಬರುತ್ತಿದ್ದಂತೆ ದೂರಾದ್ರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಈ ರೀತಿಯ ಅನುಮಾನಕ್ಕೆ ರಂಜಿತ್ ತೆರೆ ಎಳೆದಿದ್ದು, ತ್ರಿವಿಕ್ರಮ್ ತಮ್ಮ ನಿಶ್ಚಿತಾರ್ಥಕ್ಕೆ ಗೈರಾಗಿದ್ದೇಕೆ ಎನ್ನುವುದರ ಅಸಲಿ ಕಾರಣವನ್ನು ವಿವರಿಸಿದ್ದಾರೆ.

ಬಾಸ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ನನ್ನ ನಿಶ್ಚಿತಾರ್ಥಕ್ಕೆ ಬಿಗ್ ಬಾಸ್ ಸೀಸನ್ 11ರ ಎಲ್ಲರನ್ನೂ ಆಹ್ವಾನಿಸಿದ್ದೆ. ನಾವು ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಳ್ಳೋಣ ಅಂತಾ ನಿರ್ಧರಿಸಿದರೂ ಕೂಡ ಇವರನೆಲ್ಲಾ ಮರೆಯಲು ಆಗುವುದಿಲ್ಲ. ಹೀಗಾಗಿ ಎಲ್ಲರನ್ನೂ ಕರೆದಿದ್ದೆ. ತ್ರಿವಿಕ್ರಮ್‌ಗೆ ನಾನು ಈ ಮದುವೆ ವಿಚಾರ ಹೇಳಿದ ತಕ್ಷಣ 'ಅತ್ತಿಗೆ ರೆಡಿಯಾದ್ರಾ..ಹಾಗಿದ್ದರೆ ನಿಶ್ಚಿತಾರ್ಥಕ್ಕೆ ನಾವೆಲ್ಲಾ ರೆಡಿ..ರೆಡಿ ಅಂದಿದ್ದ'.
'ಅವನು ಇವರನ್ನು ನೋಡಲು ಕಾಯುತ್ತಿದ್ದ. ಇವರು ಕೂಡ ನಮ್ಮಿಬ್ಬರನ್ನು ಜೊತೆಯಾಗಿ ನೋಡಲು ಬಯಸಿದ್ದರು. ಅದು ಇನ್ನೂ ಆಗಿಲ್ಲ. ಎರಡು ಸಲ ಭೇಟಿಯಾಗಲು ಪ್ಲಾನ್ ಮಾಡಿದ್ದೇವು. ಅದು ಆಗಲಿಲ್ಲ, ಕೊನೆಗೆ ಎಂಗೇಜ್‌ಮೆಂಟ್‌ಗೆ ಬಾ ಎಂದು ಹೇಳಿದೆ. ಅವನು ಕೂಡ ಬಂದೇ ಬರುತ್ತೇನೆ ಎಂದು ಹೇಳಿದ್ದ. ಆದರೆ ಕೊನೆಗೆ ನೋಡಿದರೆ ಅವನಿಗೆ ಹೊಸ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತ್ತು. ಅದರಿಂದ ಅವನು ಶೂಟಿಂಗ್‌ನಲ್ಲಿ ಬ್ಯೂಸಿಯಾದ' ಎಂದರು.
'ಇತ್ತೀಚಿಗೆ ಫೋನ್ ಮಾಡಿದಾಗ ಕೂಡ ಅದನ್ನೇ ಹೇಳುತ್ತಿದ್ದ ಸಿಕ್ಕೇ ಸಿಗುತ್ತೇನೆ. ಸದ್ಯಕ್ಕೆ ಹೊಸ ಧಾರಾವಾಹಿ ಶೂಟಿಂಗ್ ಇದೆ ಅಂತಾ. ನಾನು ಸಹ ಸಮಯ ಸಿಕ್ಕಾಗ ಸಿಗು ಅಂತಾ ಹೇಳಿದ್ದೇನೆ. ಅಲ್ಲದೇ ಮದುವೆಗೆ ಮಾತ್ರ ಮಿಸ್ ಮಾಡಬೇಡಾ ಅಂತಾನೇ ಹೇಳಿದ್ದೇನೆ. ಅವನು ಮದುವೆಗೆ ಮಿಸ್ ಇಲ್ಲ ಬಂದೇ ಬರುತ್ತೇನೆ ಅಂತಾ ಹೇಳಿದ್ದಾನೆ' ಎಂದು ರಂಜಿತ್ ಹೇಳಿದ್ದಾರೆ.
ರಂಜಿತ್‌ಗೆ ತ್ರಿವಿಕ್ರಮ್ ಯಾಕೆ ಅಷ್ಟೊಂದು ಇಷ್ಟ ಎನ್ನುವ ಬಗ್ಗೆ ಮಾತನಾಡಿದ ಅವರು, 'ನನ್ನ ಆಲೋಚನೆಗೆ ಅವನು ಸರಿ ಹೊಂದುತ್ತಾನೆ. ಅವನು ಎಲ್ಲರ ಜೊತೆ ಬೆರೆಯುತ್ತಾನೆ. ಅವನು ಕಷ್ಟಪಟ್ಟು ಬಂದಿರುವ ಹಾದಿಯಂತೆ ನಾವು ಕೂಡ ಬಂದಿರುವುದು. ಎಷ್ಟೇ ಬೆಳೆದರೂ ನಾವು ಬಂದಿರುವ ಹಾದಿಯನ್ನು ಮರೆಯಬಾರದು. ಯಾವಾತ್ತಾದರೂ ಕುಳಿತುಕೊಂಡು ಮೆಲುಕು ಹಾಕಬೇಕಂತೆ. ನಾವು ಬಿಗ್ ಬಾಸ್ ಮನೆಯಲ್ಲಿ ಕುಳಿತುಕೊಂಡು ಅದೇ ಮಾತನಾಡುತ್ತಿದ್ದೆವು. ಆಗ ಅವನಿಗೆ ಹೇಳಿದ್ದೆ ಈ ಇಂಡಸ್ಟ್ರಿಯಲ್ಲಿ ತಾಳ್ಮೆ ಬೇಕು. ತಾಳ್ಮೆ ಇದ್ದರೆ ಅವಕಾಶ ಸಿಗುತ್ತದೆ ಅಂತಾ. ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ಇದ್ದ ಕಾರಣ ನಮ್ಮಿಬ್ಬರ ನಡುವೆ ಒಂದೊಳ್ಳೆ ಬಾಂಧವ್ಯ ಬೆಳೆಯಿತು. ಅವನಿಗೆ ನಾನು ತುಂಬಾ ಬೆಂಬಲ ಕೊಡುತ್ತಿದ್ದೆ ಅದು ಅವನಿಗೆ ಇಷ್ಟವಾಗಲು ಶುರುವಾಯ್ತು' ಎಂದು ಹೇಳಿದರು.












Click it and Unblock the Notifications