Darshan Thoogudeepa: ತಲೇಲಿ ಕೂದ್ಲು ಇದ್ದಿದ್ರೆ ಎಷ್ಟು ಮನೆಗಳು ಬೀದಿಗೆ ಬರುತ್ತಿದ್ವೊ?-ದರ್ಶನ್‌ಗೆ ನೆಟ್ಟಿಗರ ಕ್ಲಾಸ್
Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಕುರಿತು ತನಿಖೆ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು, ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವ ಹಂತದಲ್ಲಿದ್ದಾರೆ. ಅಲ್ಲದೆ ದರ್ಶನ್‌ನ ಒಂದೊಂದೇ ಮುಖವಾಡಗಳು ಬಯಲಾಗುತ್ತಲೇ ಇವೆ. ಈ ನಡುವೆಯೇ ರೀಲ್ಸ್‌ಗಳು ಕೂಡ ಟ್ರೆಂಡ್ ಆಗುತ್ತಿವೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿ ಶೀಟರ್ ನಾಗನ ಜೊತೆ ಕುಳಿತು ರೌಂಡ್ ಟೇಬಲ್ ಮಾಡುವ ಮೂಲಕ ನಟ ದರ್ಶನ್ ಒಂದು ಕೈಯಲ್ಲಿ ಕಾಫಿ ಮಗ್, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದು ಹರಟೆ ಹೊಡೆದಿರುವ ಫೋಟೋ ಭಾರೀ ವೈರಲ್ ಆಗಿತ್ತು. ಅಷ್ಟೇ ಸಾಲದೆಂಬಂತೆ ರೌಡಿ ಶೀಟರ್‌ಗಳ ಜೊತೆ ವಿಡಿಯೋ ಕಾಲ್ ಮಾತನಾಡಿರುವ ವಿಡಿಯೋ ಕೂಡ ಬಟಾ ಬಯಲಾಗಿತ್ತು.

ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಜನ ಜೈಲಾಧಿಕಾರಿಗಳನ್ನು ಅಮಾನತು ಮಾಡಿತ್ತು. ಅಲ್ಲದೆ, ಪರಪ್ಪನ ಅಗ್ರಹಾರದಲ್ಲು ರಾಜ್ಯಾತಿಥ್ಯ ಹಿನ್ನೆಲೆ ಬಳಿಕ ಪೊಲೀಸರು ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರು. ಒಟ್ಟಿನಲ್ಲಿ ನಟ ದರ್ಶನ್‌ನಿಂದ ಉಳಿದ ಆರೋಪಿಗಳ ಕುಟುಂಬಗಳು ಬೀದಿಪಾಲಾಗಿದ್ದು, ಅಮಾನತುಗೊಂಡ ಜೈಲಾಧಿಕಾರಿಗಳ ಜೀವನಕ್ಕೂ ಕುತ್ತು ಬಂದಂತಾಗಿದೆ.
ಇದಕ್ಕೆ ಹೊಂದಾಣಿಕೆ ಆಗುವಂತೆ ರೀಲ್ಸ್ ಒಂದು ವೈರಲ್ ಆಗುತ್ತಿದ್ದು, ತಲೆ ಮೇಲೆ ಕೂದ್ಲು ಇದ್ದಿದ್ದರೆ ಇನ್ನೂ ಎಷ್ಟು ಮನೆ ಬೀದಿಗೆ ಬೀಳುವಂತೆ ಮಾಡುತ್ತಿದ್ದನೋ ಏನೋ ಎನ್ನುವ ಡೈಲಾಗ್‌ಗ್ ಮೂಲಕ ನೆಟ್ಟಿಗರು ನಟ ದರ್ಶನ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ವಿಡಿಯೋವನ್ನು ಪ್ರದೀಪ್ ಸುಂಕದ್ ಎನ್ನುವ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಳ್ಳಾರಿ ಜೈಲಿಗೆ ಎಂಟ್ರಿ ಕೊಡುವಾಗ ನಟ ದರ್ಶನ್ ಹಾಕಿಕೊಂಡು ಬಂದಿದ್ದ ಟೀ ಶರ್ಟ್ ಮೇಲಿನ ಸಂದೇಶ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ಧರಿಸಿದ್ದ ಟೀ ಶರ್ಟ್ ಮೇಲೆ Justice (ನ್ಯಾಯ), Dignity (ಘನತೆ) Equality (ಸಮಾನತೆ), Piece (ಶಾಂತಿ) ಎಂಬ ನಾಲ್ಕು ಪದಗಳು ಕಂಡುಬಂದಿದ್ದು, ಭಾರೀ ವೈರಲ್ ಆಗುತ್ತಿದೆ. ಅಲ್ಲದೆ ಈ ಮೂಲಕ ಅಭಿಮಾನಿಗಳಿಗೆ ಪರೋಕ್ಷವಾಗಿ ಸಂದೇಶ ನೀಡಿದ್ದೀರಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ.
ಬಳ್ಳಾರಿ ಜೈಲಿಗೆ ಆಗಮಿಸುತ್ತಿದ್ದಂತೆ ನಟ ದರ್ಶನ್ ಅವರ ನೋಟ ಗಮನ ಸೆಳೆದಿದ್ದು, ಈ ವೇಳೆ ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದು, ಬ್ರಾಂಡೆಡ್ ಟೀ ಶರ್ಟ್, ಕೂಲಿಂಗ್ ಕ್ಲಾಸ್ ಧರಿಸಿ, ನೀರಿನ ಬಾಟಲ್ ಹಾಗೂ ಕೈಯಲ್ಲಿ ಜಾಕೆಟ್ ಹಿಡಿದುಕೊಂಡಿದ್ದು, ಈ ಫೋಟೋಗಳು ಕೂಡ ಭಾರೀ ಚರ್ಚೆಗಳನ್ನು ಹುಟ್ಟುಹಾಕಿವೆ.
ಇನ್ನೂ ಇಂದು ಬಳ್ಳಾರಿ ಜೈಲಿಗೆ ನಟ ದರ್ಶನ್ ಶಿಫ್ಟ್ ಆಗಿದ್ದು, ಈ ವೇಳೆ ಅವರ ಟೀ ಶರ್ಟ್ ಮೇಲಿನ ಸಂದೇಶಗಳಿಗೆ ನೆಟ್ಟಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಟೀ ಶರ್ಟ್ ಮೇಲೆ Justice, Dignity, Equality, Piece, ಎಂಬ ನಾಲ್ಕು ಪದಗಳು ಕಂಡುಬಂದಿವೆ. ಇದಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ "ಇವೆಲ್ಲ ದರ್ಶನ್‌ಗೆ ಸೂಕ್ತವಾದ ಪದಗಳಲ್ಲ ಎಂದು ಹೇಳುವ ಮೂಲಕ ಆಕ್ರೊಶ ಹೊರಹಾಕುತ್ತಿದ್ದಾರೆ.
"ಆತ ಮುಂಗೊಪಿಯಾಗಿದ್ದು "ಶಾಂತಿ" ಪದಕ್ಕೆ ಅರ್ಹನಲ್ಲ, ಕಾನೂನು ಕೈಗೆ ತೆಗೆದುಕೊಂಡು ಕೊಲೆ ಮಾಡಿರುವುದು "ನ್ಯಾಯ" ಎನ್ನುವ ಪದಕ್ಕೆ ಅನರ್ಹ, ರೌಡಿಗಯಂತೆ ವರ್ತಿಸುವ ಈತನಿಗೆ "ಘನತೆ" ಸೂಕ್ತ ಪದವಲ್ಲ, ಜೈಲಿನಲ್ಲೇ ಎಲ್ಲಾ ಕೈದಿಗಳ ರೀತಿ ಇರದೇ, ರಾಜಾತಿಥ್ಯ ಮೆರೆದಿರುವ ಈತ "ಸಮಾನತೆ" ಪದಕ್ಕೆ ಅರ್ಹನೇ?," ಎಂದು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications