ಎಲ್ಲ ನಟರ ಮನೆ ಮುಂದೆ ಧರಣಿ ಮಾಡ್ತೀವಿ: ಫಿಲ್ಮ್ ಚೇಂಬರ್‌ಗೆ ವಿಷ್ಣು ಫ್ಯಾನ್ಸ್ ಡೆಡ್‌ಲೈನ್
ನಟ ವಿಷ್ಣುವರ್ಧನ್ ಅವರ ಸ್ಮಾರಕ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಅವರ ಅಭಿಮಾನಿಗಳ ಕೋಪ ತಣ್ಣಗಾಗಿಲ್ಲ. ಅದೇ ಜಾಗದಲ್ಲಿ ಸ್ಮಾರಕ ಮತ್ತೆ ನಿರ್ಮಿಸಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್) ಜೊತೆಗೂ ಮಾತನಾಡಿರುವ ಅವರು, ಕೂಡಲೇ ಈ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲದಿದ್ದರೆ ಎಲ್ಲ ನಟರ ಮನೆ ಮುಂದೆ ಧರಣಿ ಕೂರುತ್ತೇವೆ ಎಂದು ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ಫಿಲ್ಮ್ ಚೇಂಬರ್ ಒಂದು ನಿರ್ಧಾರಕ್ಕೆ ಬಂದರೆ ಚಿತ್ರರಂಗದವರು ಎಲ್ಲರೂ ಬರ್ತಾರೆ. ವಿಷ್ಣುವರ್ಧನ್ ಅವರ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಕೂಡಲೇ ನಿಮ್ಮ ನಿರ್ಧಾರವನ್ನ ಪ್ರಕಟಿಸಬೇಕು. ಇಲ್ಲದಿದ್ದರೆ ನಾವು ಎಲ್ಲ ಕಲಾವಿದರ ಮನೆಗಳ ಮುಂದೆ ಧರಣಿ ಮಾಡುತ್ತೇವೆ. ಸುಮ್ಮನೆ ಆ ಜಾಗದಲ್ಲಿ ಹತ್ತು ಸಾವಿರ ಜನ ಸೇರುವ ಬದಲು ಈ ರೀತಿ ಪ್ರತಿಭಟನೆ ಮಾಡ್ತೇವೆ, ದಯವಿಟ್ಟು ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಆ ಮೇಲೆ ಏನಾದ್ರೂ ಆದ್ರೆ ಅದಕ್ಕೆ ವಾಣಿಜ್ಯ ಮಂಡಳಿಯೇ ಹೊಣೆ ಎಂದು ಎಚ್ಚರಿಸಿದ್ದಾರೆ.

ಇದು ಕೇವಲ ನಾವು ಕೇಳಿತ್ತಿರುವುದಲ್ಲ, ಇಡೀ ಕರ್ನಾಟಕವೇ ವಿಷ್ಣುವರ್ಧನ್ ಅವರ ವಿಚಾರದಲ್ಲಿ ವಾಣಿಜ್ಯ ಮಂಡಳಿ ಏನು ಮಾಡ್ತಿದೆ ಎಂದು ಕೇಳುತ್ತಿದೆ. ನೀವು ಮೊದಲು ಅವರಿಗೆ ಉತ್ತರ ಕೊಡಿ ಎಂದು ಶ್ರೀನಿವಾಸ್ ಕೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕೊಡುಗೆ ಸಿಂಹಪಾಲಿರುವ ವಿಷ್ಣುವರ್ಧನ್ ಅವರನ್ನು ಈ ರೀತಿ ನಡೆಸಿಕೊಂಡಿದ್ದಾರೆ. ಸ್ಮಾರಕ ತೆರವು ಮಾಡಿದ ಇಪ್ಪತ್ತು ದಿನಗಳು ಕಳೆದಿವೆ. ಆದರೆ ಕನ್ನಡ ಚಿತ್ರರಂಗದ ಮಾತೃಸಂಸ್ಥೆ ಫಿಲ್ಮ್ ಚೇಂಬರ್ ಕಡೆಯಿಂದ ಯಾವುದೇ ಕ್ರಮ ಅಥವಾ ಆದೇಶ ಬಂದಿಲ್ಲ, ಸಭೆ ನಡೆದಿಲ್ಲ. ಹೀಗಾಗಿ ನಾವೇ ಇಲ್ಲಿವರೆಗೆ ಬರಬೇಕಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚೆಗೆ ವಿಷ್ಣುವರ್ಧನ್ ಅವರ ಅಭಿಮಾನಿಗಳು ಮನವಿಯೂ ಕೊಟ್ಟು ಹೋಗಿದ್ದರು. ಆದರೂ ಮಂಡಳಿ ತನ್ನ ನಿರ್ಧಾರವನ್ನ ಪ್ರಕಟಿಸಿಲ್ಲ. ವಿಷ್ಣುವರ್ಧನ್ ಅವರಿಗಾಗಿ ಕನ್ನಡ ಚಿತ್ರರಂಗ ಏನು ಮಾಡ್ತಿದೆ? ಎಂದು ಆಕ್ರೋಶ ಹೊರಹಾಕಿದ್ದಾರೆ. ವಿಷ್ಣುವರ್ಧನ್ ಅವರ ಸ್ಮಾರಕ ನೆಲಸಮ ಮಾಡಿದ್ರೂ ಇನ್ನೂ ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ ಇದು ಉದ್ದೇಶಪೂರ್ವಕವಾಗಿ ನಡೆಯುತ್ತಿದೆಯೇ? ಎಂದು ಕೇಳಿದ್ದಾರೆ.

ಬಾಲಣ್ಣನ ಕುಟುಂಬಸ್ಥರು ಸರ್ಕಾರಕ್ಕಿಂತ ದೊಡ್ಡವರಾ?
ವಿಷ್ಣುವರ್ಧನ್ ಅವರ ಪುಣ್ಯಭೂಮಿ ವಿಚಾರದಲ್ಲಿ ತುಂಬಾ ದೊಡ್ಡ ಅವ್ಯವಹಾರ, ತಪ್ಪುಗಳು ನಡೆದಿವೆ. ಕಳೆದ ಹದಿನೈದು ವರ್ಷಗಳಿಂದಲೂ ಈ ವಿಚಾರದಲ್ಲಿ ಯಾವುದೇ ಬದಲಾವಣೆಗಳು ನಡೆದಿಲ್ಲ. ಬಾಲಣ್ಣನ ಕುಟುಂಬಸ್ಥರು ಸರ್ಕಾರಕ್ಕಿಂತ ದೊಡ್ಡವರಾ? ಸರ್ಕಾರವೂ ಪರಿಹಾರ ಮಾಡದಷ್ಟು ದೊಡ್ಡ ಸಮಸ್ಯೆನಾ? ಎಂದು ಕೇಳಿದ್ದಾರೆ. ಇದಕ್ಕೆ ಆಸಕ್ತಿ ಕಡಿಮೆ ಇದೆ, ಆದ್ಯತೆಯ ಮೇರೆಗೆ ಮುಂದೆ ಬಂದು ಇದಕ್ಕೆ ಪರಿಹಾರ ಸೂಚಿಸುತ್ತಿಲ್ಲ. ದಯವಿಟ್ಟು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಭಿಮಾನ್ ಸ್ಟುಡಿಯೋವನ್ನ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಅಲ್ಲಿ ಏನಾಗಿದೆ ಎಂಬ ವಿಚಾರವನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ.












Click it and Unblock the Notifications