ದರ್ಶನ್ ಜೈಲಿನಲ್ಲಿದ್ರೂ ಆ ಸಹಾಯ ಮಾಡಿದ್ರು: ನಟ ವಿನೋದ್ ರಾಜ್ ಹೇಳಿದ್ದೇನು?
ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಯಾಗಿ ಜೈಲು ಸೇರಿದ್ದಾರೆ. ಇದರಿಂದ ಅವರ ವೃತ್ತಿ ಬದುಕು ಹಾಗೂ ಕುಟುಂಬ ಕೂಡ ಇಕ್ಕಟ್ಟಿಗೆ ಸಿಲುಕಿದೆ. ಜಾಮೀನು ಸಿಕ್ಕಿ ಕೆಲ ತಿಂಗಳು ಹೊರಗೆ ಬಂದಿದ್ದ ದರ್ಶನ್‌ಗೆ ಸುಪ್ರೀಂಕೋರ್ಟ್ ಶಾಕ್ ನೀಡಿತ್ತು. ಜಾಮೀನು ರದ್ದಾದ ಹಿನ್ನೆಲೆ ದರ್ಶನ್ ಮತ್ತೆ ಜೈಲಿಗೆ ವಾಪಸ್ ಆಗಿದ್ದಾರೆ. ದರ್ಶನ್ ಅವರು ನಟನಾಗಿ ಮಾತ್ರವಲ್ಲದೆ, ಹಲವು ಸಮಾಜಮುಖಿ ಕಾರ್ಯಗಳನ್ನೂ ಮಾಡಿದ್ದಾರೆ. ಆದರೆ ಅವರು ಜೈಲಿನಲ್ಲಿದ್ದರೂ ಒಂದು ವಿಚಾರಕ್ಕೆ ನೆರವಾಗಿದ್ದರು ಎಂದು ನಟ ವಿನೋದ್ ರಾಜ್ ಅಚ್ಚರಿಯ ವಿಚಾರವೊಂದನ್ನು ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ವಿನೋದ್ ರಾಜ್, 'ದರ್ಶನ್ ವಿಚಾರ ಕೇಳಿದ್ರೆ ಮನಸ್ಸಿಗೆ ತುಂಬಾ ನೋವಾಗುತ್ತೆ. ಒಬ್ಬ ಮನುಷ್ಯನಿಗೆ ಈ ತರ ಪರಿಸ್ಥಿತಿ ಬರಬಾರದು. ಪರಿಸ್ಥಿತಿ, ಸಮಯ ಹಾಗೂ ಕೆಲ ತೀರ್ಮಾನಗಳು ಏನೆಲ್ಲ ಮಾಡಿಸಿಬಿಡುತ್ತವೆ ಅಂತ ಹೇಳೋಕಾಗಲ್ಲ. ದರ್ಶನ್‌ಗೆ, ಅವರ ಕುಟುಂಬಕ್ಕೆ ಆ ಭಗವಂತ ಆದಷ್ಟು ಬೇಗ ನೆಮ್ಮದಿ ನೀಡಲಿ' ಎಂದಿದ್ದಾರೆ.

'ಮಂಗಳಮುಖಿಯೊಬ್ಬರಿಂದ ದರ್ಶನ್ ಅವರ ಕುರಿತು ಒಂದು ಸತ್ಯ ತಿಳಿಯಿತು. ಅವರು ಮಾಡಿರುವ ಆಶ್ರಮಕ್ಕೆ ದರ್ಶನ್ ಅವರೇ 50,000 ಇಟ್ಟಿಗೆ, ಸಿಮೆಂಟ್, ಕಬ್ಬಿಣ, ಪ್ರತಿಯೊಂದು ದರ್ಶನ್ ಅವರು ಕೊಟ್ಟಿದ್ದು ಅಂತ ಹೇಳಿದ್ರು. ನಾನು ಜೈಲಿನಲ್ಲಿದ್ರೂ ಈ ಕೆಲಸ ಮಾಡಿ ಅಂತ ದರ್ಶನ್ ಹೇಳಿದ್ದರಂತೆ. ಈ ವಿಚಾ ಕೇಳಿ ನನ್ನ ಮನಸ್ಸಿಗೆ ತುಂಬಾ ಬೇಜಾರಾಯ್ತು ಎಂದಿದ್ದಾರೆ ವಿನೋದ್ ರಾಜ್. ಇಷ್ಟು ಒಳ್ಳೆಯ ಮನಸ್ಸಿರುವ ಆ ವ್ಯಕ್ತಿ ಬಗ್ಗೆ ಏನ್ ಮಾತನಾಡಬೇಕೋ ತಿಳಿಯುತ್ತಿಲ್ಲ. ಅಂತಹ ವ್ಯಕ್ತಿಗೆ ಈ ರೀತಿ ಆಯ್ತಲ್ಲ ಅಂತ ತುಂಬಾ ನೋವಾಗುತ್ತೆ' ಎಂದಿದ್ದಾರೆ.
'ಯಶಸ್ಸು, ಸೋಲು ಬಿಟ್ಟು ನಡೀಬೇಕು'
'ಒಂದು ಯಶಸ್ಸು ಸೋಲು ಬಂದಾಗ ಜೀವನದಲ್ಲಿ ಎರಡನ್ನೂ ತೆಗೆದುಕೊಳ್ಳಬಾರದು. ಏನೂ ಇಲ್ಲ ಅಂತ ತಿಳಿದು ಮುಂದಕ್ಕೆ ಹೋದರೆ ಯಶಸ್ಸು ಹಾಗೂ ಸೋಲು ಯಾವುದೂ ತೊಂದರೆ ಕೊಡಲ್ಲ. ಹಾಗಾಗಿ ಈ ಎರಡನ್ನೂ ಬಿಟ್ಟು ನಡೆಯಬೇಕು. ಕಲಾವಿದರು ಅಂದಾಗ ಎಲ್ಲರಿಗೂ ನಮ್ಮ ಮೇಲೆ ಪ್ರೀತಿ, ವಿಶ್ವಾಸ ಬರಬೇಕು. ಕಲಾವಿದರೊಂದಿಗೆ ಒಟ್ಟಿಗೆ ಸೇರುವುದು ಬಾರೀ ಶ್ರೇಷ್ಠ' ಎಂದು ವಿನೋದ್ ರಾಜ್ ಕಿವಿಮಾತು ಹೇಳಿದ್ದಾರೆ.
ಇನ್ನು ವಿನೋದ್ ರಾಜ್ ಡೆವಿಲ್ ಸಿನಿಮಾದ ಇದ್ರೆ ನೆಮ್ದಿಯಾಗ್ ಇರ್ಬೇಕು ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. 'ಆ ಹಾಡು ಚೆನ್ನಾಗಿತ್ತು, ಅದಕ್ಕೇ ಡ್ಯಾನ್ಸ್ ಮಾಡಿದೆ. ಈಗ ಬಂದಿರುವ ಹೊಸ ಹಾಡು ಕೂಡ ತುಂಬಾ ಚೆನ್ನಾಗಿದೆ. ಡೆವಿಲ್ ಸಿನಿಮಾಗೆ ಒಳ್ಳೆಯದಾಗಲಿ. ದರ್ಶನ್ ಅವರು ಕರ್ನಾಟಕಕ್ಕೆ ಗ್ಯಾರಂಟಿ ಸೂಪರ್ ಸ್ಟಾರ್ ಇದ್ದಂತೆ. ಒಬ್ಬ ನಟ ಆ ಮಟ್ಟಕ್ಕೆ ಹೋದಾಗ ಯಾರೂ ಕೂಡ ಅಸೂಯೆ ಪಡಬಾರದು. ಒಬ್ಬರ ಸಕ್ಸಸ್ ನೋಡಿ ಖುಷಿಪಡಬೇಕು. ಆಗ ಎಲ್ಲವೂ ಚೆನ್ನಾಗಿರುತ್ತೆ' ಎಂದು ಕಿವಿಮಾತು ಹೇಳಿದ್ದಾರೆ ವಿನೋದ್ ರಾಜ್.












Click it and Unblock the Notifications