Get Updates
Get notified of breaking news, exclusive insights, and must-see stories!

Vijayalakshmi: ಅಶ್ಲೀಲ ಕಮೆಂಟ್ ಪ್ರಕರಣ ಸಂಬಂಧ ಇಬ್ಬರ ಬಂಧನದ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್‌ ಹೊಸ ಇನ್ಸ್ಟಾ ಪೋಸ್ಟ್‌

Vijayalakshmi Darshan: ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಅಶ್ಲೀಲ ಕಮೆಂಟ್‌ಗಳನ್ನು ಹಾಕಿ ಟ್ರೋಲ್‌ ಮಾಡಲಾಗಿತ್ತು. ವಿಜಯಲಕ್ಷ್ಮಿ ಅವರು ಆ ಸಂದೇಶಗಳನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ದೂರು ಕೂಡ ದಾಖಲಿಸಿದ್ದರು. ಬಳಿಕ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಇತ್ತೀಚೆಗಷ್ಟೇ ಬೆಂಗಳೂರು ನಗರ ಪೊಲೀಸ್‌ ಕಮಿಷನರ್ ಅವರನ್ನು ಭೇಟಿಯಾಗಿದ್ದರು. ಇದೀಗ ಈ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೇ ಅವರು ಹೊಸ ಇನ್ಸ್ಟಾ ಪೋಸ್ಟ್‌ ಹಾಕಿಕೊಂಡಿದ್ದಾರೆ.

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಪ್ರಕರಣ ಸಂಬಂಧ ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದೂರು ನೀಡಿದರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪೊಲೀಸ್‌ ಕಮಿಷನರ್ ಅವರನ್ನು ಭೇಟಿ ಮಾಡಿದ್ದರು.

Two Arrested for Sending Obscene Messages to Actor Darshan s Wife Vijayalakshmi

ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್‌ಗಳು, ಟ್ರೊಲ್‌ಗಳು, ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಈ ಬಗ್ಗೆ ವಿಜಯಲಕ್ಷ್ಮಿ ದೂರು ಸಹ ಕೊಟ್ಟಿದ್ದರು. ಜೊತೆಗೆ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಇದೀಗ ಪ್ರಕರಣ ಸಂಬಂಧ ಚಂದ್ರು ಮತ್ತು ನಿಖಿಲ್ ಎಂಬ ಇಬ್ಬರು ಆರೋಪಿಗಳನ್ನು ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಂಧಿತರ ಮೂಲ: ಬೆಂಗಳೂರಿನ ಚಿಕ್ಕಬಾಣಾವರದ ಆಟೋ ಚಾಲಕ ಚಂದ್ರು ಹಾಗೂ ದಾವಣಗೆರೆ ಮೂಲದ ಇಂಜಿನಿಯರ್ ನಿತಿನ್ ಬಂಧಿತರು. ಇವರಿಬ್ಬರೂ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿದ್ದು, ಇವರನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಸ್ಟಾರ್ ವಾರ್ ಶುರು ಆಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ತಿರುವುಗಳನ್ನು ಪಡೆದುಕೊಂಡಿತ್ತು. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆ ಕಿಡಿಗೇಡಿಗಳು ಅಶ್ಲೀಲ ಕಮೆಂಟ್‌ಗಳು, ಟ್ರೊಲ್‌ಗಳನ್ನು ಮಾಡಿದ್ದರು. ಬಳಿಕ ಅವಹೇಳನ ಕಮೆಂಟ್ ಹಾಕುವವರ ವಿರುದ್ಧ ನಟ ವಿಜಯಲಕ್ಷ್ಮಿ ಪೊಲೀಸ್‌ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದರು. ಈ ಆಧಾರದ ಮೇಲೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.

ವಿಜಯಲಕ್ಷ್ಮಿ ಇನ್ಸ್ಟಾ ಪೋಸ್ಟ್‌: ಇನ್ನೂ ಅಶ್ಲೀಲ ಪ್ರಕರಣ ಸಂಬಂಧ ಇಬ್ಬರ ಬಂಧನದ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್‌ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಒಂದು ಪೋಸ್ಟರ್ ಹಾಗೂ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಮೊದಲನೇಯದರಲ್ಲಿ Peace and tranquility ಎಂದು ಬರೆದುಕೊಂಡು ತಮ್ಮ ಫೋಟೋ ಹಂಚಿಕೊಡಿದ್ದಾರೆ. ಇದರ ಅರ್ಥ ಶಾಂತಿ ಹಾಗೂ ನೆಮ್ಮದಿ. ಎರಡನೇಯದಾಗಿ ಹಸುಗಳ ಜೊತೆ ಕಾಲ ಕಳೆಯುವ ವಿಡಿಯೋವನ್ನು ಸ್ಟೇಟಸ್ ಹಾಕಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಅಸಮಾಧಾನ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದರು. ಬೆಂಗಳೂರು ಪೊಲೀಸರು, ಹೋಮ್ ಮಿನಿಸ್ಟರ್, ಕರ್ನಾಟಕ ಸರ್ಕಾರಕ್ಕೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದರು. ದೂರು ನೀಡಿ ಒಂದು ವಾರ ಕಳೆದರೂ ಕ್ರಮ ಕೈಗೊಂಡಿಲ್ಲ. ಜೊತೆಗೆ ಕಾನೂನು ಎಲ್ಲರಿಗೂ ಒಂದೇ ಎಂದು ಭಾವಿಸಿದ್ದೇನೆ. ಆದರೆ ನನಗೆ ಆಗಿರುವ ಅನುಭವ ಆ ನಂಬಿಕೆಯನ್ನ ಪ್ರಶ್ನಿಸುವಂತೆ ಮಾಡಿದೆ. ಹಾಗೆಯೇ ಒಬ್ಬರಿಗೊಂದು, ಮತ್ತೊಬ್ಬರಿಗೊಂದು ರೀತಿ ಕಾನೂನು ಉಪಯೋಗ ಆಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದರು.

ಇನ್ನೂ ನಾನು ಕೊಟ್ಟ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಆದರೆ, ಬೇರೊಬ್ಬ ಮಹಿಳೆಯ ದೂರು ಪಡೆದು ಕ್ರಮ ಕೈಗೊಳ್ಳಲಾಗಿದೆ ಅನ್ನೋದೆ ಆಶ್ಚರ್ಯ ಉಂಟುಮಾಡಿದೆ ಎಂದು ವಿಜಯಲಕ್ಷ್ಮಿ ಪೋಸ್ಟ್​ ಹಾಕಿಕೊಳ್ಳುವ ಮೂಲಕ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಪೊಲೀಸ್ ಆಯುಕ್ತರು ಹೇಳಿದ್ದೇನು?: ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ ಎಂಬ ವಿಜಯಲಕ್ಷ್ಮಿ ದರ್ಶನ್‌ ಪೋಸ್ಟ್ ಬಗ್ಗೆ ಮಾತಾಡಿದ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, "ಅದೆಲ್ಲಾ ಸುಳ್ಳು, ಪೊಲೀಸರು ಎಲ್ಲರಿಗಾಗಿಯೂ ಇದ್ದೇವೆ. ಈ ಕೇಸ್‌ನಲ್ಲಿಯೂ ಅಷ್ಟೆ. ಬೇರೆ ಕೇಸ್‌ನಲ್ಲೂ ಅಷ್ಟೇ, ಒಂದೇ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ," ಎಂದು ಹೇಳಿದ್ದರು.

"ಯಾವುದೇ ಪ್ರಕರಣ ದಾಖಲಾದ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವು ಸಮಯದಲ್ಲಿ ಮಾತ್ರ ತಕ್ಷಣ ಲೀಡ್ ಸಿಗಲ್ಲ. ಅದನ್ನ ಬಿಟ್ಟರೆ ಬೇರೆ ಯಾವ ಉದ್ದೇಶವೂ ಇಲ್ಲ. ಆ ರೀತಿ ಮಾಡಿದರೆ, ನಮ್ಮ ಅಧಿಕಾರಿಗಳ ಮೇಲೂ ಕ್ರಮ ತಗೆದುಕೊಳ್ಳಲಾಗುತ್ತದೆ. ಕಳೆದ ಬಾರಿ ಬಂದಾಗ ಭೇಟಿ ಆಗಿರಲಿಲ್ಲ. ಬಳಿಕ ನಾನು ತನಿಖಾಧಿಕಾರಿಯೊಬ್ಬರನ್ನು ಕರೆದು ಮಾತಾಡಿದ್ದೇನೆ. ಸೂಕ್ತ ಕ್ರಮ ಜರುಗಿಸಲಾಗುತ್ತದೆ," ಎಂದು ಹೇಳಿದ್ದರು. ಇದೀಗ ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+