Golden Star Ganesh: ಗೋಲ್ಡನ್ ಸ್ಟಾರ್ ಗಣೇಶ್ ಹಣೆಗೆ ಗನ್ ಇಟ್ಟಿದ್ದ ಡಾನ್ ರವಿ ಪೂಜಾರಿ?
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಗಣೇಶ್ ತಮ್ಮ ಫ್ಯಾನ್ಸ್ ಜೊತೆಗೆ ಈ ಬಾರಿ ಕೂಡ ಹುಟ್ಟುಹಬ್ಬದ ಆಚರಣೆ ಮಾಡಿಕೊಳ್ಳುತ್ತಿಲ್ಲ. ಹೀಗಿದ್ದಾಗ 'ಮುಂಗಾರು ಮಳೆ' ಖ್ಯಾತಿಯ ನಟ ಗಣೇಶ್ ಅವರ ಮದುವೆ ಮ್ಯಾಟರ್ ಬಗ್ಗೆ ಹಳೆಯ ಗಾಸಿಪ್ ಮತ್ತೆ ವೈರಲ್ ಆಗುತ್ತಿದೆ. ಹಾಗಾದರೆ ಡಾನ್ ರವಿ ಪೂಜಾರಿ ಗೋಲ್ಡನ್ ಸ್ಟಾರ್ ಗಣೇಶ್ ಹಣೆಗೆ ಗನ್ ಇಟ್ಟಿದ್ದು ನಿಜಾನಾ? ಗಣೇಶ್‌ಗೆ ಬಲವಂತದ ಮದುವೆ ಮಾಡಿಸಲಾಗಿತ್ತಾ? 16 ವರ್ಷಗಳ ಹಿಂದೆ ನಡೆದಿದ್ದು ಏನು? ಬನ್ನಿ ತಿಳಿಯೋಣ.
ಗಣೇಶ್ ಅಂದ್ರೆ ಒಂದು ಹವಾ ಇದೆ, ಹಾಗೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳಿಗೂ ಭಾರತದ ಮಟ್ಟದಲ್ಲಿ ದೊಡ್ಡ ಕ್ರೇಜ್ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡದೇ ಇದ್ದರೂ, ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರ ಪ್ಯಾನ್ ಇಂಡಿಯಾ ಹೀರೋ ಸಮಾನ. ಯಾಕಂದ್ರೆ ಗಣೇಶ್‌ಗೆ ಭಾರತದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಅದರಲ್ಲೂ 'ಮುಂಗಾರು ಮಳೆ' ಸಿನಿಮಾ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಸಾಧಿಸಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಆದರೆ ಹೀಗೆ ತಮ್ಮ ವೃತ್ತಿ ಜೀವನದ ಅತ್ಯಂತ ಉತ್ತುಂಗದ ಸ್ಥಿತಿಗೆ ತಲುಪಿದ್ದಾಗಲೇ 2008 ರಲ್ಲಿ ಗಣೇಶ್ ದಿಢೀರ್ ಮದುವೆ ಆಗಿಬಿಟ್ಟರು. ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹಣೆಗೆ ಡಾನ್ ಒಬ್ಬ ಗನ್ ಇಟ್ಟು ಮದುವೆ ಮಾಡಿಸಿದ್ದನಾ? ಏನಿದು ಗಣೇಶ್ ಬಗ್ಗೆ ಗಂಭೀರ ಆರೋಪ? ಮುಂದೆ ಓದಿ.

ಗಣೇಶ್ ಹಣೆಗೆ ಗನ್ ಇಟ್ಟಿದ್ದ ಡಾನ್?
ನಿಮಗೆಲ್ಲಾ ಡಾನ್ ರವಿ ಪೂಜಾರಿ ಹೆಸರು ಗೊತ್ತಿರಬಹುದು. ಈತನನ್ನ 2019 ರಲ್ಲಿ ವಿದೇಶದಲ್ಲಿ ಅರೆಸ್ಟ್ ಮಾಡಿ ಕರೆತರಲಾಗಿತ್ತು. ಹೀಗೆ ಡಾನ್ ರವಿ ಪೂಜಾರಿಯನ್ನ ಅರೆಸ್ಟ್ ಮಾಡಿ ಭಾರತಕ್ಕೆ ತಂದ ನಂತರ ವಿಚಾರಣೆ ನಡೆಸುವ ಸಮಯದಲ್ಲಿ ಈತ ಹೇಳಿದ್ದ ಒಂದೊಂದೇ ಕಥೆಗಳು ಪೊಲೀಸರನ್ನ ಕೂಡ ಬೆಚ್ಚಿಬೀಳುವಂತೆ ಮಾಡಿತ್ತು. ಅದರಲ್ಲೂ ನಟ ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆ ಕೂಡ ಡಾನ್ ರವಿ ಪೂಜಾರಿ ಬೆಚ್ಚಿಬೀಳುವ ಸಂಗತಿ ಹೇಳಿದ್ದನಂತೆ! ಅದು ಏನು ಗೊತ್ತೆ? ಸಂಪೂರ್ಣ ಮಾಹಿತಿ ತಿಳಿಯೋಣ ಮುಂದೆ ಓದಿ.
ಡಾನ್ ರವಿ ಪೂಜಾರಿ ಪೊಲೀಸರ ಎದುರು ತಾನು ಏನೆಲ್ಲಾ ಕೃತ್ಯ ಎಸಗಿದ್ದೆ ಎಂದು ಹೇಳುವಾಗ ಗೋಲ್ಡನ್ ಸ್ಟಾರ್ ಗಣೇಶ್ ವಿಚಾರ ಕೂಡ ಪ್ರಸ್ತಾಪ ಆಗಿತ್ತಂತೆ. ಆಗ ರವಿ ಪೂಜಾರಿ ಬೆಚ್ಚಿಬೀಳಿಸುವ ಮಾತು ಒಂದನ್ನ ಹೇಳಿದ್ದನಂತೆ. ಅದು ಏನೆಂದರೆ, ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಶಿಲ್ಪ ಅವರನ್ನು ಮದುವೆ ಆಗುವುದು ಬಿಲ್‌ಕುಲ್ ಇಷ್ಟ ಇರಲಿಲ್ಲ. ಆದರೆ ಗಣೇಶ್ ಅವರ ಪತ್ನಿ ಶಿಲ್ಪಾ ಅವರ ಸಹೋದರ ಡಾನ್ ರವಿ ಪೂಜಾರಿ ಮೂಲಕ ನಟ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಗನ್ ಇಟ್ಟು ಬೆದರಿಸಿ ಮದುವೆ ಮಾಡಿಸಿದ್ದರು ಎಂದಿದ್ದನಂತೆ. ಈ ಗಾಸಿಪ್ ಆಗಿನ ಸಮಯಕ್ಕೆ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಆದರೆ ಈ ಸುದ್ದಿ ಈಗಲೂ ಗಾಸಿಪ್ ಎನ್ನಲಾಗುತ್ತಿದೆ. ಯಾಕಂದ್ರೆ ಈ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.
ಕಷ್ಟಪಟ್ಟು ಮೇಲೆ ಬಂದಿದ್ದ ಗಣೇಶ್!
ಗೋಲ್ಡನ್ ಸ್ಟಾರ್ ಗಣೇಶ್‌ಗೆ ಈ ಪಟ್ಟ ಸಿಕ್ಕಿದ್ದು ಸುಲಭವಾಗಿ ಅಲ್ಲ. ತುಂಬಾ ಕಷ್ಟಪಟ್ಟು ಗಣೇಶ್ ಮೇಲೆ ಬಂದರು. ಉದಯ ಟಿವಿಯ 'ಕಾಮಿಡಿ ಟೈಮ್ಸ್' ಕಾರ್ಯಕ್ರಮದ ಮೂಲಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಫೇಮಸ್ ಆಗಿದ್ದರು. ಆ ನಂತರ 2006 ರಲ್ಲಿ ಮೊದಲ ಬಾರಿಗೆ ಹೀರೋ ಆದರು, 'ಚೆಲ್ಲಾಟ' ಸಿನಿಮಾ ಮೂಲಕ ಎಂಟ್ರಿ ಪಡೆದಿದ್ದರು. ಆದರೆ 'ಮುಂಗಾರು ಮಳೆ' ಸಿನಿಮಾ ನಟ ಗಣೇಶ್ ಬಾಳಿಗೆ ದೊಡ್ಡ ತಿರುವು ನೀಡಿತ್ತು. ಆ ನಂತರ ಸಾಲು ಸಾಲು ಸಿನಿಮಾ ಮಾಡುತ್ತಾ ಈ ನಟ ಬೆಳೆದು ನಿಂತರು. ಹೀಗಿದ್ದಾಗ ಸ್ಟಾರ್ ನಟರ ಬಗ್ಗೆ ಗಾಸಿಪ್ ಅಂದ್ರೆ ಗಾಳಿ ಸುದ್ದಿ ಸಾಮಾನ್ಯ ತಾನೆ, ಇದು ಕೂಡ ಹಂಗೆ ಇರಬೇಕು ಅಂತಿದ್ದಾರೆ ಜನ!
ಕದ್ದುಮುಚ್ಚಿ ಗಣೇಶ್ ಮನೆಗೆ ಹೋಗ್ತಿದ್ರು!
ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ ನಂತರ ಕೂಡ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಅವರ ತಂದೆ ಕಂಡರೆ ಸಾಕಷ್ಟು ಭಯ ಇತ್ತಂತೆ. ಅದರಲ್ಲೂ ಗಣೇಶ್ ತಮ್ಮ ಮನಗೆ ಹೋಗಿ ಬರಲು ಸಾಕಷ್ಟು ಬಾರಿ ಭಯ ಪಡುತ್ತಿದ್ದರು ಎಂಬ ಮಾತುಗಳು 15 ವರ್ಷಗಳ ಹಿಂದೆಯೇ ಕೇಳಿಬಂದವು. ಯಾಕಂದ್ರೆ ಗಣೇಶ್ ಅವರ ಅಪ್ಪ ನಟ ಗಣೇಶ್ ವಿರುದ್ಧ ಕೋಪಗೊಂಡಿದ್ದರಂತೆ ಹೀಗಾಗಿಯೇ ರಾತ್ರಿ ವೇಳೆ ಹೋಗಿ ಅಮ್ಮನ ಮುಖ ನೋಡಿಕೊಂಡು ಮಾತನಾಡಿಸಿ ಮರಳಿ ಬೇರೆ ಕಡೆಗೆ ಹೋಗುತ್ತಿದ್ದರಂತೆ ಗಣೇಶ್. ಹೀಗೆ ಗಣೇಶ್ ಸಿನಿಮಾ ರಂಗಕ್ಕೆ ಹೋಗಿದ್ದು ಸ್ವತಃ ಅವರ ತಂದೆಗೆ ಇಷ್ಟ ಇರಲಿಲ್ಲ ಎಂಬ ಮಾತು ಇದೆ.
ಗಣೇಶ್ ಆಸ್ತಿ ಎಷ್ಟು ಕೋಟಿ?
ಹೀಗೆ 2005ರ ತನಕ ಉದಯ ಟಿವಿಯ 'ಕಾಮಿಡಿ ಟೈಮ್' ಶೋ ನಡೆಸಿಕೊಂಡು ಜೀವನದ ಬಂಡಿ ಸಾಗಿಸುತ್ತಿದ್ದ ನಟ ಗಣೇಶ್ ಅವರಿಗೆ ಭರ್ಜರಿ ಅವಕಾಶ ಸಿಕ್ಕಿದ್ದು 2006 ರಲ್ಲಿ. ಇದೇ ವರ್ಷ ಗಣೇಶ್ ಹೀರೋ ಆಗಿ ನಟನೆ ಮಾಡಿದ್ದ 'ಚೆಲ್ಲಾಟ' ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. 'ಚೆಲ್ಲಾಟ' ಗಣೇಶ್ ಅವರ ಬದುಕಿನಲ್ಲಿ ಬ್ಲಾಕ್ ಬಸ್ಟರ್ ಆಗದೇ ಇದ್ದರೂ, ಭಾರಿ ದೊಡ್ಡ ಹೆಸರು ತಂದುಕೊಟ್ಟಿತ್ತು. ಅಲ್ಲದೆ ಮುಂದೆ ಗಣೇಶ್‌ಗೆ 'ಮುಂಗಾರು ಮಳೆ' ಚಾನ್ಸ್ ಹುಡುಕಿಕೊಂಡು ಬರುವಂತೆ ಮಾಡಿತ್ತು. ಹಾಗಾದ್ರೆ ಇಷ್ಟುವರ್ಷ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಿರುವ ಗಣೇಶ್ ಮಾಡಿರುವ ಆಸ್ತಿ ಎಷ್ಟು ಕೋಟಿ ರೂಪಾಯಿ ಗೊತ್ತೆ?
ಪ್ಯಾನ್ ಇಂಡಿಯಾ ಲೆವೆಲ್ ಹವಾ!
ಗಣೇಶ್ ಅಂದ್ರೆ ಒಂದು ಹವಾ ಇದೆ, ಹಾಗೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳಿಗೆ ಭಾರತದಲ್ಲಿ ಭಾರಿ ಕ್ರೇಜ್ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡದೇ ಇದ್ದರೂ, ಗೋಲ್ಡನ್ ಸ್ಟಾರ್ ಗಣೇಶ್ ಮಾತ್ರ ಪ್ಯಾನ್ ಇಂಡಿಯಾ ಹೀರೋ ಸಮಾನ. ಯಾಕಂದ್ರೆ ಗಣೇಶ್‌ಗೆ ಭಾರತದ ಮೂಲೆ ಮೂಲೆಯಲ್ಲೂ ಅಭಿಮಾನಿಗಳು ಇದ್ದಾರೆ. ಅದ್ರಲ್ಲೂ 'ಮುಂಗಾರು ಮಳೆ' ಸಿನಿಮಾ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಸಾಧಿಸಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು.
ದೊಡ್ಡ ಸಿನಿಮಾ ನೀಡಿರುವ ನಟ!
ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿದ್ದಾರೆ. ಅದರಲ್ಲೂ ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟಿಗೆ ಹೆಸರು ಸಂಪಾದನೆ ಮಾಡಿದ್ದ ನಟ ಗಣೇಶ್, ಭಾರಿ ಗೆಲುವಿನ ನಡುವೆ ಸೋಲುಗಳನ್ನ ಕೂಡ ಕಂಡಿದ್ದಾರೆ. ಅಲ್ಲದೆ ಆ ಸೋಲುಗಳೇ ಗಣೇಶ್‌ಗೆ ಪಾಠ ಕೂಡ ಕಲಿಸಿದೆ, ಈ ಮಾತನ್ನ ಸ್ವತಃ ಅವರೇ ಅನೇಕ ಸಂದರ್ಶನಗಳ ವೇಳೆ ಹೇಳಿದ್ದು ವೈರಲ್ ಆಗಿತ್ತು. ಈಗಲೂ ಗೋಲ್ಡನ್ ಸ್ಟಾರ್ ಗಣಿ ಸಿನಿಮಾಗಳು ಬಿಸಿ ದೋಸೆಯಂತೆ ಸೇಲ್ ಆಗುತ್ತವೆ. ಹಾಗೇ ಸಾಲು ಸಾಲು ಸಿನಿಮಾಗಳನ್ನ ತೆರೆಗೆ ತರಲು ಗಣೇಶ್ ಅವರು ಎಲ್ಲಾ ರೀತಿ ಸಿದ್ಧತೆ ನಡೆಸುತ್ತಿದ್ದಾರೆ. ಹೀಗಾಗಿ ಗಣೇಶ್ ಅಭಿಮಾನಿ ಬಳಗ ಮತ್ತಷ್ಟು ಸಿನಿಮಾ ನೋಡಲು ಈಗ ಕಾಯುತ್ತಿದೆ.












Click it and Unblock the Notifications